ರಾಜ್ಯ

ಪಾಸ್'ಪೋರ್ಟ್ ಪಡೆಯುವುದು ಇನ್ನೂ ಸುಲಭ: ಸೇವೆ ಸುಲಭಗೊಳಿಸಲು ಸಹಕಾರಿಯಾಗಲಿದೆ ಆ್ಯಪ್

ಪಾಸ್ ಪೋರ್ಟ್ ಪಡೆಯಲು ಇನ್ನು ಮುಂದೆ ಸುದೀರ್ಘ ದಿನಗಳ ಕಾಲ ಕಾಯಬೇಕಿಲ್ಲ. ಪಾಸ್ ಪೋರ್ಟ್ ಸೇವೆಯನ್ನು ಸುಲಭಗೊಳಿಸುವ ಸಲುವಾಗಿ ಸ್ಥಳೀಯ ಪಾಸ್ ಪೋರ್ಟ್ ಕಚೇರಿ ಆ್ಯಪ್ ಅಭಿವೃದ್ಧಿಪಡಿಸಿದ್ದು, ಇದರಿಂದ ಸೇವೆಗಳು ಅತ್ಯಂತ ಸುಲಭಗೊಂಡಿವೆ...

ಪಾಸ್'ಪೋರ್ಟ್ ಪಡೆಯುವುದು ಇನ್ನೂ ಸುಲಭ: ಸೇವೆ ಸುಲಭಗೊಳಿಸಲು ಸಹಕಾರಿಯಾಗಲಿದೆ ಆ್ಯಪ್
ಸಂಗ್ರಹ ಚಿತ್ರ
Published On :
ಬೆಂಗಳೂರು: ಪಾಸ್ ಪೋರ್ಟ್ ಪಡೆಯಲು ಇನ್ನು ಮುಂದೆ ಸುದೀರ್ಘ ದಿನಗಳ ಕಾಲ ಕಾಯಬೇಕಿಲ್ಲ. ಪಾಸ್ ಪೋರ್ಟ್ ಸೇವೆಯನ್ನು ಸುಲಭಗೊಳಿಸುವ ಸಲುವಾಗಿ ಸ್ಥಳೀಯ ಪಾಸ್ ಪೋರ್ಟ್ ಕಚೇರಿ ಆ್ಯಪ್ ಅಭಿವೃದ್ಧಿಪಡಿಸಿದ್ದು, ಇದರಿಂದ ಸೇವೆಗಳು ಅತ್ಯಂತ ಸುಲಭಗೊಂಡಿವೆ. 
ಪಾಸ್ ಪೋರ್ಟ್ ಪಡೆಯುವ ಪ್ರಕ್ರಿಯೆ ವೇಳೆ ಆಯಾ ಪ್ರದೇಶದ ಪೊಲೀಸ್ ಠಾಣೆಯಿಂದ ಪೊಲೀಸ್ ಪೇದೆಯೊಬ್ಬರು ಮನೆಗೆ ಬಂದು ಪರಿಶೀಲನೆ ನಡೆಸುವುದು ಸಾಮಾನ್ಯ ಇದಕ್ಕೆ ಕನಿಷ್ಟ ಎಂದರೂ 20-35 ದಿನಗಳ ಕಾಲ ಬೇಕಾಗುತ್ತಿತ್ತು. ಆದರೆ, ಆ್ಯಪ್ ಸೇವೆಯಿಂದಾಗಿ ಪೊಲೀಸ್ ಪರಿಶೀಲನೆ 5-9 ದಿನಗಳಲ್ಲಿ ಪೂರ್ಣಗೊಳ್ಳಲಿದೆ. 
ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಸ್ಥಳೀಯ ಪಾಸ್'ಪೋರ್ಟ್ (ಆರ್'ಪಿಒ) ಅಧಿಕಾರಿ ಭರತ್ ಕುಮಾರ್ ಕುಥಾಟಿಯವರು, ಪೊಲೀಸರು ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವುದು ಅಥವಾ ಪಾಸ್'ಪೋರ್ಟ್ ಗಾಗಿ ಅರ್ಜಿ ಸಲ್ಲಿಸಿದ ವ್ಯಕ್ತಿಯೇ ಠಾಣೆಗೆ ಬರುವುದು ಇನ್ನು ಮುಂದೆ ಕಡ್ಡಾಯವಾಗಿರುವುದಿಲ್ಲ. ಪೊಲೀಸರು ವ್ಯಕ್ತಿಯ ನಾಗರೀಕತ್ವವನ್ನು ದೃಢಪಡಿಸಬೇಕು. ವ್ಯಕ್ತಿಯ ಹಿನ್ನಲೆ ಹಾಗೂ ಕ್ರಿಮಿನಲ್ ರೆಕಾರ್ಡ್ ಗಳನ್ನು ಪರಿಶೀಲನೆ ನಡೆಸಬೇಕಾಗುತ್ತದೆ. ಮನೆಗಳಿಗೆ ಭೇಟಿ ನೀಡಿಯೇ ಪರಿಶೀಲನೆ ನಡೆಸಬೇಕೆಂದು ಪೊಲೀಸರಿಗೆ ಎನಿಸಿದರೆ ಅವರು ಪರಿಶೀಲನೆ ನಡೆಸಬಹುದು ಎಂದು ಹೇಳಿದ್ದಾರೆ. 
ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವ ಅಗತ್ಯವಿಲ್ಲ ಎಂದೆನಿಸಿದಾಗ ಪೊಲೀಸರು ಆ್ಯಪ್ ಮೂಲಕ ವ್ಯಕ್ತಿಯ ಮಾಹಿತಿಯನ್ನು ಹಾಕಬಹುದು. ಈ ಮಾಹಿತಿಗಳು ಉನ್ನತಾಧಿಕಾರಿಗಳಿಗೆ ತಲುಪುತ್ತದೆ ಎಂದು ತಿಳಿಸಿದ್ದಾರೆ. 
ಆ್ಯಪ್ ಕುರಿತಂತೆ ಈಗಾಗಲೇ ರಾಜ್ಯ ಪೊಲೀಸರೊಂದಿಗೆ ಮಾತುಕತೆ ನಡೆಸಿದ್ದೇವೆ. ಈ ಬಗ್ಗೆ ಪೊಲೀಸರಿಂದಲೂ ಧನಾತ್ಮಕ ಪ್ರತಿಕ್ರಿಯೆಗಳು ಬಂದಿವೆ. ಶೀಘ್ರದಲ್ಲಿಯೇ ಪಾಸ್'ಪೋರ್ಟ್ ಪ್ರಕ್ರಿಯೆ ಸುಲಭ ಹಾಗೂ ಶೀಘ್ರವಾಗಲಿದೆ ಎಂದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.