ದಸರಾ ಮುಗೀತು; ಬೆಂಗಳೂರಿನಲ್ಲಿ ಎಲ್ಲಿ ನೋಡಿದರಲ್ಲಿ ಕಸದ ರಾಶಿ
ದಸರಾ ಹಬ್ಬ ಮುಗಿದಿದೆ. ಎಂದಿನಂತೆ ಬಾಳೆಗಿಡ, ಹೂವು, ಹಣ್ಣಿನ ಕಸದ ರಾಶಿ ನಗರದಾದ್ಯಂತ ಎಲ್ಲೆಡೆ ...

ಬೆಂಗಳೂರು: ದಸರಾ ಹಬ್ಬ ಮುಗಿದಿದೆ. ಎಂದಿನಂತೆ ಬಾಳೆಗಿಡ, ಹೂವು, ಹಣ್ಣಿನ ಕಸದ ರಾಶಿ ನಗರದಾದ್ಯಂತ ಎಲ್ಲೆಡೆ ಕಂಡುಬರುತ್ತಿದೆ. ಕೃಷ್ಣರಾಜ ಮಾರುಕಟ್ಟೆಯ ಸುತ್ತಮುತ್ತ ಪರಿಸ್ಥಿತಿ ಇನ್ನೂ ಹದಗೆಟ್ಟಿದೆ. ಇಲ್ಲಿ ಕುಂಬಳಕಾಯಿ, ಬಾಳೆಎಲೆಗಳ ರಾಶಿಗಳು ಕೊಳೆತು ನಾರುವ ಸ್ಥಿತಿ ಉಂಟಾಗಿದೆ.
ಕೆ ಆರ್ ಮಾರ್ಕೆಟ್, ಬನಶಂಕರಿ, ರಾಮಮೂರ್ತಿ ನಗರ ಸೇರಿ ಇನ್ನೂ ಹಲವು ಕಡೆಗಳಲ್ಲಿ ಮನೆಮನೆಗಳಿಂದ ಕಳೆದ ಎರಡು ಮೂರು ದಿನಗಳಿಂದ ಕಸಕಡ್ಡಿಗಳನ್ನು ಸಂಗ್ರಹಿಸಿಲ್ಲ. ಹೀಗಾಗಿ ಇಲ್ಲಿನ ನಿವಾಸಿಗಳಿಗೆ ತೀವ್ರ ಆತಂಕವಾಗಿದೆ.
ತಮ್ಮ ಮನೆ ಸೇರಿದಂತೆ ಸುತ್ತಮುತ್ತಲಿಂದ ಕಳೆದ ಮೂರು ದಿನಗಳಿಂದ ಕಸ ಸಂಗ್ರಹಿಸಿಲ್ಲ. ಕೆಲಸದವರು ರಜೆಯಲ್ಲಿರುವ ಕಾರಣ ಕಸ ಸಂಗ್ರಹಿಸಿರಲಿಕ್ಕಿಲ್ಲ. ಹಬ್ಬದ ದಿನಗಳಲ್ಲಿ ಬೇರೆ ದಿನಗಳಿಗಿಂತ ಕಸ ಹೆಚ್ಚು ಸಂಗ್ರಹಣೆಯಾಗುವುದರಿಂದ ಕಷ್ಟವಾಗುತ್ತದೆ ಎನ್ನುತ್ತಾರೆ ರಾಮಮೂರ್ತಿ ನಗರ ನಿವಾಸಿ ಸಂಜಯ್ ಕುಮಾರ್.
ಕೆ ಆರ್ ಪುರಂ ಮತ್ತು ರಾಮಮೂರ್ತಿ ನಗರದಿಂದ ಕಸ ಸಂಗ್ರಹಣೆಯಾಗುತ್ತಿಲ್ಲ ಎಂದು ಬಿಬಿಎಂಪಿಯ ಪೂರ್ವ ನಿಯಂತ್ರಣಾ ಕೊಠಡಿಗೆ ದೂರು ಬಂದಿದೆ. ಗುರುವಾರ ತಮ್ಮ ಕ್ಷೇತ್ರದಲ್ಲಿ ಕಸ ಸಂಗ್ರಹಣೆ ವ್ಯತ್ಯಯವಾಗಿದೆ ಎಂದು ಮಲ್ಲೇಶ್ವರಂ ಕ್ಷೇತ್ರದ ಶಾಸಕ ಅಶ್ವಥ ನಾರಾಯಣ ಟ್ವೀಟ್ ಮಾಡಿದ್ದರು.

ಕೆ ಆರ್ ಮಾರ್ಕೆಟ್ ನಲ್ಲಿ ಕಸದ ರಾಶಿಯ ದೃಶ್ಯ
ಆದರೆ ತಾವು ಹಬ್ಬದ ಸಮಯದಲ್ಲಿ ಕೂಡ ಕೆಲಸ ಮುಂದುವರಿಸಿದ್ದೇವೆ ಎನ್ನುತ್ತಾರೆ ಪೌರಕಾರ್ಮಿಕರು. ಈ ಬಗ್ಗೆ ಪ್ರತಿಕ್ರಿಯಿಸಿದ ಅಖಿಲ ಭಾರತ ವ್ಯಾಪಾರ ಸಂಘಟನೆಯ ಕೇಂದ್ರ ಮಂಡಳಿಯ ಕಾರ್ಯದರ್ಶಿ ಪಿ ಅಪ್ಪಣ್ಣ, ಪ್ರತಿವರ್ಷ ಪೌರಕಾರ್ಮಿಕರಿಗೆ 10 ದಿನ ರಜೆ ನೀಡಬೇಕೆಂಬ ನಿಯಮ ಕಾಯ್ದೆಯಲ್ಲಿದ್ದರೂ ಕೂಡ ಗಾಂಧಿ ಜಯಂತಿಯಂತಹ ರಾಷ್ಟ್ರೀಯ ಹಬ್ಬಗಳಲ್ಲಿ ಸಹ ರಜೆ ನೀಡುವುದಿಲ್ಲ ಎನ್ನುತ್ತಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಬಿಬಿಎಂಪಿ ಅಧಿಕಾರಿಯೊಬ್ಬರು, ಕಳೆದ ಮೂರ್ನಾಲ್ಕು ದಿನಗಳಲ್ಲಿ ಕೆ ಆರ್ ಮಾರ್ಕೆಟ್ ನಲ್ಲಿ 200ರಿಂದ 300 ಟನ್ ಕಸ ಉತ್ಪತ್ತಿಯಾಗಿವೆ. ಶುಕ್ರವಾರ ಹಬ್ಬದ ಕೊನೆಯ ದಿನವಾಗಿದ್ದರಿಂದ ಮಾರಾಟವಾಗದ ವಸ್ತುಗಳನ್ನು ರೈತರು ಹಾಗೆಯೇ ಬಿಟ್ಟು ಹೋಗಿದ್ದಾರೆ. ಅವುಗಳನ್ನೆಲ್ಲಾ ಸ್ವಚ್ಛಗೊಳಿಸಲು ನಮಗೆ ಇನ್ನು ಮೂರ್ನಾಲ್ಕು ದಿನಗಳು ಬೇಕು ಎನ್ನುತ್ತಾರೆ.
ಘನ ತ್ಯಾಜ್ಯ ನಿರ್ವಹಣೆಯ ತಾಂತ್ರಿಕ ಸಲಹಾ ಸಮಿತಿಯ ಸದಸ್ಯ ಎನ್ ಎಸ್ ರಮಕಾಂತ್, ದಸರಾ ಹಬ್ಬದ ಸಮಯದಲ್ಲಿ ಬೆಂಗಳೂರಿನಲ್ಲಿ ಶೇಕಡಾ 20ರಿಂದ 30ರಷ್ಟು ಹೆಚ್ಚು ಕಸ ಸಂಗ್ರಹಣೆಯಾಗುತ್ತದೆ ಎನ್ನುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


