ಸ್ಮಶಾನ, ರಾಜಕಾಲುವೆ ಬಳಿ ನಿವೇಶನ ಹಂಚಿಕೆ: ಮತ್ತೆ ಯಡವಟ್ಟು ಮಾಡಿದ ಬಿಡಿಎ ವಿರುದ್ದ ಮಾಲೀಕರ ಆಕ್ರೋಶ
ನಾಡಪ್ರಭು ಕೆಂಪೇಗೌಡ ಲೇಔಟ್ ನಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ 4,970 ನಿವೇಶನ ನೀಡಿದ್ದು, ಗ್ರಾಹಕರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ, ...

Published On :
ಬೆಂಗಳೂರು: ನಾಡಪ್ರಭು ಕೆಂಪೇಗೌಡ ಲೇಔಟ್ ನಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ 4,970 ನಿವೇಶನ ನೀಡಿದ್ದು, ಗ್ರಾಹಕರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ,
2ನೇ ಹಂತದಲ್ಲಿ ನಿವೇಶನ ಹಂಚಿರುವ ಬಿಡಿಎ ಹಲವು ಮಂದಿಗೆ ರಾಜಕಾಲುವೆ ಸಮೀಪ ನೀಡಿದ್ದು ರಾಷ್ಚ್ರೀಯ ಹಸಿರು ಮಂಡಳಿ ನೀತಿ ನಿಯಮಗಳಿಗೆ ವಿರುದ್ಧವಾಗಿದೆ.
ಸುಮಾರು ನಿವೇಶನಗಳನ್ನು ಸ್ಮಶಾನದ ಪಕ್ಕದಲ್ಲಿ ನೀಡಲಾಗಿದೆ, ಹೀಗಾಗಿ ಕೆಲವು ಮಾಲೀಕರು ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ, ಹೀಗಾಗಿ ಹಲವು ಮಂದಿ ಮುಂಗಡ ಹಣ ನೀಡಿರುವ ಮಾಲೀಕರು ನಿವೇಶನ ಖರೀದಿಸಬೇಕೆ ಬೇಡವೇ ಎಂಬ ಬಗ್ಗೆ ಮರು ಚಿಂತನೆ ನಡೆಸಿದ್ದಾರೆ,
ಶೀಘ್ರವೇ ನೀವೇಶನ ಪಡೆದಿರುವವರ ಜೊತೆ 2 ಸಭೆ ನಡೆಸುವುದಾಗಿ ಬಿಡಿಎ ಆಯುಕ್ತ ರಾಕೇಶ್ ಸಿಂಗ್ ಹೇಳಿದ್ದಾರೆ, ರಾಜಕಾಲುವೆಗೆ ಸಮೀಪ ಹಾಗೂ ಸ್ಮಶಾನಗಳಲ್ಲಿ ನಿವೇಶನ ಪಡೆದಿರುವವರಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗುವುಗು ಎಂದು ಭರವಸೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


