ರಾಜ್ಯ

ಬೆಂಗಳೂರು: ಆಸ್ತಿ ವಿವಾದ, ಮಕ್ಕಳ ನೆರವಿನಿಂದ ಪತಿಯನ್ನೇ ಅಪಹರಿಸಿದ ಪತ್ನಿ; ವಿಷ ಹಾಕಿ ಕೊಲಲ್ಲು ಯತ್ನ!

ಆಸ್ತಿ ವಿವಾದದ ಹಿನ್ನೆಲೆಯಲ್ಲಿ ತನ್ನೀಬ್ಬರು ಮಕ್ಕಳ ಸಹಾಯದಿಂದ ತನ್ನ ಗಂಡನನ್ನೇ ಅಪಹರಿಸಿದ ಹೆಂಡತಿ, ಮನೆಯೊಂದರಲ್ಲಿ ಕೂಡಿ ಹಾಕಿ ವಿಷ ನೀಡಿ ಕೊಲ್ಲಲು ಯತ್ನಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರು: ಆಸ್ತಿ ವಿವಾದ, ಮಕ್ಕಳ ನೆರವಿನಿಂದ ಪತಿಯನ್ನೇ ಅಪಹರಿಸಿದ ಪತ್ನಿ; ವಿಷ ಹಾಕಿ ಕೊಲಲ್ಲು ಯತ್ನ!
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ಆಸ್ತಿ ವಿವಾದದ ಹಿನ್ನೆಲೆಯಲ್ಲಿ  ತನ್ನೀಬ್ಬರು ಮಕ್ಕಳ ಸಹಾಯದಿಂದ ತನ್ನ ಗಂಡನನ್ನೇ ಅಪಹರಿಸಿದ ಹೆಂಡತಿ, ಮನೆಯೊಂದರಲ್ಲಿ ಕೂಡಿ ಹಾಕಿ ವಿಷ ನೀಡಿ ಕೊಲ್ಲಲು ಯತ್ನಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಅಪಹರಣಗೊಂಡಿದ್ದ ರಾಮಚಂದ್ರ  ಅವರನ್ನು ಹೆಚ್ ಎಎಲ್ ಠಾಣೆ ಪೊಲೀಸರು ರಕ್ಷಿಸಿದ್ದು, ಆತನ ಹೆಂಡತಿ ಮುನಿರತ್ನಮ್ಮ ಹಾಗೂ ಮಕ್ಕಳಾದ ಅಭಿಷೇಕ್ , ಚೇತನ್  ಜೊತೆಗೆ ಮುನಿರತ್ನಮ್ಮನ ಮೂವರು ಸಂಬಂಧಿಕರನ್ನು ಬಂಧಿಸಿದ್ದಾರೆ.

ಅಕ್ಟೋಬರ್ 5 ರಂದು ಈ ಘಟನೆ ನಡೆದಿದೆ.ಮಿನಿ ಲಾರಿ ಹೊಂದಿರುವ ರಾಮಚಂದ್ರ ಕುಟುಂಬವೊಂದರ ಹೊಸ ಮನೆಗೆ  ಸಾಮಾಗ್ರಿಗಳನ್ನು  ಇಳಿಸಿದ ಬಳಿಕ   ಅಪರಿಚಿತ ನಂಬರ್ ನಿಂದ ಕರೆ ಮಾಡಿದ ರಮೇಶ್ ನಗರಕ್ಕೆ ಕರೆಸಿಕೊಂಡ ಪತ್ನಿ ಹಾಗೂ ಮಕ್ಕಳು ಕಬ್ಬಿಣದ ರಾಡು ಹಾಗೂ ಬ್ಯಾಟ್ ನಿಂದ ತಲೆಗೆ ಹೊಡೆದು, ನಂತರ ಬೊಮ್ಮಸಂದ್ರ ಬಳಿ ಇರುವ ತಮ್ಮ ಮನೆಗೆ ಬಿಡಲಾಗಿದೆ ಎಂದು ಎಫ್ ಐಆರ್ ನಲ್ಲಿ ಅವರು ತಿಳಿಸಿದ್ದಾರೆ.

ಈ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ರಾಮಚಂದ್ರ ಸಹೋದರ ಮಹಾದೇವ್, ಹಲ್ಲೆ ತಿಳಿದ ನಂತರ ಪೊಲೀಸರಿಗೆ ದೂರ ನೀಡಿರುವುದಾಗಿ ತಿಳಿಸಿದರು. ಆಸ್ತಿ ವಿವಾದ ಹಿನ್ನೆಲೆಯಲ್ಲಿ ರಾಮಚಂದ್ರ ಅವರ ಅತ್ತೆ ಹಾಗೂ ಅವರ ಮಕ್ಕಳು ಹೀಗೆ ಹಲ್ಲೆ ಮಾಡಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

ರಾಮಚಂದ್ರ ಅಕ್ರಮವಾಗಿ ತನ್ನ ಹೆಸರಿಗೆ ಮನೆ ನೋಂದಾಣಿ ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ಮುನಿರತ್ನ  ಕೋರ್ಟ್ ನಲ್ಲಿ ವಂಚನೆ ದೂರು ದಾಖಲಿಸಿದ್ದಾರೆ. ಇದೇ ತಿಂಗಳ 22 ರಂದು ಈ ಪ್ರಕರಣದ ವಿಚಾರಣೆ ನಡೆಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 ರಾಮಚಂದ್ರ ಅವರನ್ನು ಕೊಂದರೆ ಆಸ್ತಿ ಸಿಗಲಿದೆ ಎಂಬ ಯೋಚನೆಯಿಂದ  ಅವರನ್ನು ಅಪಹರಿಸಲಾಗಿದ್ದು, ಬಲವಂತವಾಗಿ ವಿಷ ನೀಡಲು ಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.