ಉಪ ಮೇಯರ್ ರಮೀಳಾ ನಿಧನ: ಪ್ರಶ್ನೆ ಮೂಡಿಸುವ ವೈದ್ಯಕೀಯ ವರದಿ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಉಪ ಮೇಯರ್ ರಮೀಳಾ ಉಮಾಶಂಕರ್(44 ವ) ...

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಉಪ ಮೇಯರ್ ರಮೀಳಾ ಉಮಾಶಂಕರ್(44 ವ) ಹಠಾತ್ತಾಗಿ ನಿಧನರಾಗಿದ್ದು, ಅವರ ಸಾವಿನ ಬಗ್ಗೆ ಆಸ್ಪತ್ರೆ ನೀಡುತ್ತಿರುವ ಹೇಳಿಕೆಗಳು ಗೊಂದಲ ಸೃಷ್ಟಿ ಮಾಡಿದೆ.
ಗುರುವಾರ ತಡರಾತ್ರಿ 12.50 ರ ಸುಮಾರಿಗೆ ಉಸಿರಾಡಲು ಸಾಧ್ಯವಾಗುತ್ತಿಲ್ಲ ಎಂದು ರಮೀಳಾ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಾಗಲೇ ಅವರು ಮೃತಪಟ್ಟಿದ್ದರು ಮತ್ತು ಅಲ್ಲಿ ಅವರನ್ನು ಕೆಲವು ಗಂಟೆಗಳವರೆಗೆ ಇರಿಸಲಾಗಿದ್ದರೂ ಕೂಡ ಸಾವಿಗೆ ನಿಖರ ಕಾರಣಗಳನ್ನು ಹೇಳಲು ಸಾಧ್ಯವಾಗುತ್ತಿಲ್ಲ ಎನ್ನುತ್ತಿರುವುದು ಹಲವು ಪ್ರಶ್ನೆ ಮತ್ತು ಸಂದೇಹಗಳನ್ನು ಹುಟ್ಟುಹಾಕಿದೆ.
ನಂತರ ಆಸ್ಪತ್ರೆ ಜೊತೆ ಸಂಬಂಧವಿರದ ಮತ್ತೊಬ್ಬ ವೈದ್ಯರು ರಮೀಳಾ ಅವರು ಸಹಜವಾಗಿ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ವರದಿ ನೀಡಿದ್ದಾರೆ.
ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಸಿಕ್ಕಿರುವ ಮಾಹಿತಿ ಪ್ರಕಾರ, ಗೋವಿಂದರಾಜನಗರದ ಕಾವೇರಿಪುರ ವಾರ್ಡ್ ನಿಂದ ಮೊದಲ ಬಾರಿಗೆ ಕೌನ್ಸಿಲರ್ ಆಗಿ ಆಯ್ಕೆಯಾಗಿದ್ದ ರಮೀಳಾ ಅವರನ್ನು ಕಾರ್ಡ್ ರೋಡ್ ಆಸ್ಪತ್ರೆಗೆ ಮಧ್ಯರಾತ್ರಿ 12.50ರ ಸುಮಾರಿಗೆ ಕರೆತಂದಾಗಲೇ ಮೃತಪಟ್ಟಿದ್ದರು ಎಂದು ಹೇಳಲಾಗುತ್ತಿದೆ.
ಆಸ್ಪತ್ರೆ ಶಿಷ್ಟಾಚಾರದಂತೆ ಬಸವೇಶ್ವರನಗರ ವ್ಯಾಪ್ತಿಯ ಪೊಲೀಸ್ ಠಾಣೆಗೆ ಮಾಹಿತಿ ನೀಡುವಾಗ ಹೃದಯಾಘಾತದಿಂದ ನಿಧನರಾಗಿದ್ದರು ಎಂದು ಪ್ರಮಾಣಪತ್ರ ನೀಡಲು ಸಾಧ್ಯವಾಗಿರಲಿಲ್ಲ. ಸಾವಿನ ಬಗ್ಗೆ ನಿಖರ ಕಾರಣ ನೀಡಲು ಯಾವುದೇ ಮರಣೋತ್ತರ ಪರೀಕ್ಷೆಗಳನ್ನು ಸಹ ನಡೆಸಿರಲಿಲ್ಲ. ರಮೀಳಾ ಅವರ ಕುಟುಂಬಕ್ಕೆ ಗೊತ್ತಿರುವ ಬೇರೊಬ್ಬ ವೈದ್ಯರು ಸಾವಿನ ಕಾರಣದ ಪ್ರಮಾಣಪತ್ರವನ್ನು ನೀಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


