ರಾಜ್ಯ

ಒತ್ತಡಕ್ಕೆ ಮಣಿದ ರಾಣಿ ಚನ್ನಮ್ಮ ವಿವಿ ಉಪ ಕುಲಪತಿ: ಅಪರಿಚಿತರ ವಿರುದ್ಧ ದೂರು ದಾಖಲು!

ತಮ್ಮ ಮೇಲೆ ಹಲ್ಲೆ ಹಾಗೂ ಕ್ಯಾಂಪಸ್ ನಲ್ಲಿ ನಡೆಸಿದ ದಾಂಧಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒತ್ತಡಕ್ಕೆ ಮಣಿದಿರುವ ರಾಣಿ ಚನ್ನಮ್ಮ ವಿವಿ ಉಪಕುಲಪತಿ ಶಿವಾನಂದ ...

ಒತ್ತಡಕ್ಕೆ ಮಣಿದ ರಾಣಿ ಚನ್ನಮ್ಮ ವಿವಿ ಉಪ ಕುಲಪತಿ: ಅಪರಿಚಿತರ ವಿರುದ್ಧ ದೂರು ದಾಖಲು!
ಸಾಂದರ್ಭಿಕ ಚಿತ್ರ
Published On :
ಬೆಳಗಾವಿ: ತಮ್ಮ ಮೇಲೆ ಹಲ್ಲೆ ಹಾಗೂ ಕ್ಯಾಂಪಸ್ ನಲ್ಲಿ ನಡೆಸಿದ ದಾಂಧಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒತ್ತಡಕ್ಕೆ ಮಣಿದಿರುವ ರಾಣಿ ಚನ್ನಮ್ಮ ವಿವಿ ಉಪಕುಲಪತಿ  ಶಿವಾನಂದ ಹೊಸಮನಿ ಕೊನೆಗೂ ಬೆಳಗಾವಿಯ ಕಾಕತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಅಪರಿಚಿತ ಗುಂಪೊಂದು ರಾಣಿ ಚನ್ನಮ್ಮ ವಿವಿಯಲ್ಲಿ ಅಕ್ಟೋಬರ್ 1 ರಂದು ಗಲಾಟೆ ನಡೆಸಿ ದಾಂಧಲೆ ನಡೆಸಿದರು ಎಂದು ವಿವಿ ಶಿವಾನಂದ ಹೊಸಮನಿ ಮತ್ತಿ ವಿವಿ ರಿಜಿಸ್ಚ್ರಾರ್ ಸಿದ್ದು ಅಲಗೂರ್ ದೂರು ದಾಖಲಿಸಿದ್ದಾರೆ, ಆದರೆ ಯಾರು ಎಂಬ ಬಗ್ಗೆ ಮಾತ್ರ ಉಲ್ಲೇಖಿಸಿಲ್ಲ, ಆದರೆ ಸತೀಶ್ ಜಾರಕಿಹೊಳಿ ಬೆಂಬಲಿಗರು ಎಂದು ಆರೋಪ ಕೇಳಿ ಬರುತ್ತಿದೆ.
ಆರ್ ಸಿಯು ಪ್ರಾಧಿಕಾರ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ, ಈ ಸಂಬಂಧ ಸಿಸಿಟಿವಿ ಫೂಟೇಜ್ ಆಧರಿಸಿ ಕ್ರಮಕೈಗೊಳ್ಳಲು ಪೊಲೀಸರು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ,
ಉಪಕುಲಪತಿ ಅವರ ಮೇಲೆ ನಡೆದ ಹಲ್ಲೆ ಹಾಗೂ ದಾಂಧಲೆಗೆ ಯಮನಕರಡಿ ಶಾಸಕ ಸತೀಶ್ ಜಾರಕಿಹೊಳಿ ಬೆಂಬಲಿಗರು ಕಾರಣ ಎಂದು ಹೇಳಲಾಗಿದೆ. ಕ್ಯಾಂಪಸ್ ನಲ್ಲಿ ನಡೆದ ಕೆಲವು ಕಾರ್ಯಕ್ರಮ ಹಾಗೂ ಹೆದ್ದಾರಿ ಮೇಲ್ಸೇತುವೆ ಉದ್ಘಾಟನೆ ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕರನ್ನು ಆಹ್ವಾನಿಸಿಲ್ಲ ಎಂಬ ಕಾರಣಕ್ಕೆ ಈ ದಾಂಧಲೆ ನಡೆಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.