ಶಬರಿಮಲೆ ವಿವಾದ: ಸಮಿತಿಯಲ್ಲಿ ಕರ್ನಾಟಕದ ಸಂಸದರು
ಶಬರಿಮಲೆ ವಿವಾದ ಸಂಬಂಧ ಸತ್ಯಾಗ್ರಹ ಮಾಡುತ್ತಿರುವವರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಪ್ರತಿಭಟನಾಕಾರರನ್ನು ಬಂಧನಕ್ಕೊಳಪಡಿಸುತ್ತಿರುವ ಹಿನ್ನಲೆಯಲ್ಲಿ ಇವುಗಳನ್ನು ಪರಿಶೀಲನೆ ನಡೆಸಲು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ನಾಲ್ಕು...

ಬೆಂಗಳೂರು: ಶಬರಿಮಲೆ ವಿವಾದ ಸಂಬಂಧ ಸತ್ಯಾಗ್ರಹಮಾಡುತ್ತಿರುವವರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಪ್ರತಿಭಟನಾಕಾರರನ್ನುಬಂಧನಕ್ಕೊಳಪಡಿಸುತ್ತಿರುವ ಹಿನ್ನಲೆಯಲ್ಲಿ ಇವುಗಳನ್ನು ಪರಿಶೀಲನೆ ನಡೆಸಲು ಬಿಜೆಪಿರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ನಾಲ್ಕು ಸದಸ್ಯರ ತಂಡವೊಂದನ್ನು ರಚನೆ ಮಾಡಿದ್ದು, ಸಮಿತಿಯಲ್ಲಿ ಕರ್ನಾಟಕದ ಸಂಸದರು ಇರುವುದಾಗಿ ತಿಳಿದುಬಂದಿದೆ.
ಕರ್ನಾಟಕ ಇಬ್ಬರು ಸಂಸದರು ಸಮಿತಿಯಲ್ಲಿದ್ದಾರೆಂದುತಿಳಿದುಬಂದಿದೆ. ನಳೀನ್ ಕುಮಾರ್ ಕಟೀಲ್ ಮತ್ತು ಪ್ರಹ್ಲಾದ್ ಜೋಷಿಯವರು ಸಮಿತಿಯಲ್ಲಿದ್ದಾರೆಂದುವರದಿಗಳು ತಿಳಿಸಿವೆ.
ಸಮಿತಿಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಸರೋಜ್ ಪಾಂಡೆ ಮತ್ತು ವಿನೋದ್ ಸೊಂಕಾರ್ ಕೂಡ ಇದ್ದಾರೆಂದು ವರದಿಗಳು ತಿಳಿಸಿವೆ.
ದಕ್ಷಿಣ ರಾಜ್ಯಗಳಲ್ಲೂ ಶಬರಿಮಲೆ ಪ್ರತಿಭಟನೆಯನ್ನುಹೆಚ್ಚಿಸುವ ಸಲುವಾಗಿ ಕರ್ನಾಟಕದ ಸಂಸದರನ್ನುಸಮಿತಿಯಲ್ಲಿ ಸೇರ್ಪಡೆಗೊಳಿಸಲಾಗಿದ ಎಂದು ವರದಿಗಳಿಂದ ತಿಳಿದುಬಂದಿದೆ.
ಕಾಸರಗೋಡಿನಲ್ಲಿ ಈಗಾಗಲೇ ಹಿಂದೂ ಸಮಾಜೋತ್ಸವವನ್ನುಆಯೋಜಿಸಲಾಗಿದ್ದು, ಡಿ.16 ರಂದು ಈಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರುಮಾತನಾಡಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


