ಡಿಸೆಂಬರ್ ನಲ್ಲಿ ಬೆಳಗಾವಿ, ಕಲಬುರಗಿಯಲ್ಲಿ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ ಆರಂಭ
ಉತ್ತರ ಕರ್ನಾಟಕ ಜನರ ಬಹುಸಮಯದ ಕನಸು ಈಡೇರುವ ಸಮಯ ಬಂದಿದೆ. ಕರ್ನಾಟಕ ರಾಜ್ಯ ...

ಬೆಂಗಳೂರು: ಉತ್ತರ ಕರ್ನಾಟಕ ಜನರ ಬಹುಸಮಯದ ಕನಸು ಈಡೇರುವ ಸಮಯ ಬಂದಿದೆ. ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿ(ಕೆಎಸ್ಎಟಿ) ಕಲಬುರಗಿ ಮತ್ತು ಬೆಳಗಾವಿಯಲ್ಲಿ ಮುಂದಿನ ತಿಂಗಳು ಆರಂಭವಾಗಲಿದೆ.
ಪ್ರಸ್ತುತ ರಾಜ್ಯ ಸರ್ಕಾರದ ನೌಕರರು ಮತ್ತು ಅಧಿಕಾರಿಗಳ ನೇಮಕಾತಿ, ವರ್ಗಾವಣೆ, ನಿವೃತ್ತಿ ಸೌಲಭ್ಯ, ಬಡ್ತಿ ಇತ್ಯಾದಿಗಳೆಲ್ಲವೂ ಬೆಂಗಳೂರಿನ ಕೆಎಸ್ಎಟಿಯಲ್ಲಿ ನಡೆಯುತ್ತದೆ. ಇನ್ನು ಮುಂದೆ ಉತ್ತರ ಕರ್ನಾಟಕದ ಎರಡು ಜಿಲ್ಲೆಗಳಲ್ಲಿ ಆರಂಭವಾಗಲಿರುವುದರಿಂದ ಸರ್ಕಾರದ ಕೆಲಸಗಳು ಹೆಚ್ಚು ಸಲೀಸಾಗಿ ಮತ್ತು ಶೀಘ್ರವಾಗಿ ನಡೆಯಲಿದೆ.
ಮುಂದಿನ ತಿಂಗಳು ಡಿಸೆಂಬರ್ 17ರಂದು ಬೆಳಗಾವಿಯಲ್ಲಿ ಮತ್ತು ಕಲಬುರಗಿಯಲ್ಲಿ ಡಿಸೆಂಬರ್ 21ರಂದು ಕೆಎಸ್ಎಟಿ ಕಾರ್ಯ ಆರಂಭವಾಗಲಿದೆ. ಹೊಸ ವಕೀಲರು ಮತ್ತು ನ್ಯಾಯಾಧೀಶರ ನೇಮಕಕ್ಕೆ ಕಾಯದೆ ಈಗಿರುವ ಸಿಬ್ಬಂದಿಯನ್ನಿಟ್ಟುಕೊಂಡೇ ಕೆಲಸ ಆರಂಭಿಸುವುದಾಗಿ ನ್ಯಾಯಮಂಡಳಿಯ ಅಧ್ಯಕ್ಷ ನ್ಯಾಯಮೂರ್ತಿ ಕೆ ಭಕ್ತವತ್ಸಲ ತಿಳಿಸಿದ್ದಾರೆ.
ಬೆಳಗಾವಿ ಮತ್ತು ಕಲಬುರಗಿಯಲ್ಲಿ ಕೆಎಸ್ಎಟಿಗೆ ರಾಜ್ಯ ಸರ್ಕಾರ 2015ರ ಆಗಸ್ಟ್ 13ರಂದು ಅನುಮೋದನೆ ನೀಡಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


