ರಾಜ್ಯ

60 ವರ್ಷಗಳ ನಂತರ ನಿರ್ಮಾಣಗೊಂಡ ಡಾಂಬರು ರಸ್ತೆ ಕೇವಲ 4 ತಿಂಗಳಲ್ಲಿ ಹಾನಿ

ಇಲ್ಲಿನ ಕ್ಯಾರಕೊಪ್ಪ ಮತ್ತು ಮುಗಡ್ ಗ್ರಾಮದ ನಡುವೆ 60 ವರ್ಷಗಳ ನಂತರ ನಿರ್ಮಿಸಲಾದ 2.5 ....

60 ವರ್ಷಗಳ ನಂತರ ನಿರ್ಮಾಣಗೊಂಡ ಡಾಂಬರು ರಸ್ತೆ ಕೇವಲ 4 ತಿಂಗಳಲ್ಲಿ ಹಾನಿ
ಹಾನಿಗೀಡಾದ ರಸ್ತೆ
Published On :

ಧಾರವಾಡ: ಇಲ್ಲಿನ ಕ್ಯಾರಕೊಪ್ಪ ಮತ್ತು ಮುಗಡ್ ಗ್ರಾಮದ ನಡುವೆ 60 ವರ್ಷಗಳ ನಂತರ ನಿರ್ಮಿಸಲಾದ 2.5 ಕಿಲೋ ಮೀಟರ್ ಉದ್ದದ ರಸ್ತೆ ನಿರ್ಮಾಣವಾಗಿ ಕೇವಲ 4 ತಿಂಗಳಲ್ಲಿ ಹಾನಿಗೀಡಾಗಿದೆ.

ರಸ್ತೆ ನಿರ್ಮಾಣ ಕಳೆದ ವರ್ಷ ಆರಂಭವಾಗಿ ಈ ವರ್ಷ ಜುಲೈಯಲ್ಲಿ ಪೂರ್ಣಗೊಂಡಿತ್ತು. ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿರುವಾಗ ಅದರ ಗುಣಮಟ್ಟದ ಬಗ್ಗೆ ಗ್ರಾಮಸ್ಥರು ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಆದರೆ ಅದರಿಂದ ಯಾವುದೇ ಪ್ರಯೋಜನವಾಗಿಲ್ಲ.

ಇದೀಗ ಗ್ರಾಮಸ್ಥರು ಬೇರೆ ದಾರಿ ಕಾಣದೆ ಹಳಿಯಾಳ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಗ್ರಾಮಸ್ಥರು ಹಲವಾರು ದಶಕಗಳಿಂದ ಡಾಂಬರು ರಸ್ತೆಯ ಕನಸು ಕಂಡ ನಂತರ ಕೊನೆಗೂ ಈಡೇರಿತ್ತು. ಆದರೆ ಆ ಆಸೆ ಹೆಚ್ಚು ಸಮಯ ಉಳಿಯಲಿಲ್ಲ. ರಸ್ತೆಯಲ್ಲಿನ ಹೊಂಡ ಗುಂಡಿಗಳಿಂದ ಇತ್ತೀಚೆಗೆ ಅಪಘಾತ ಕೂಡ ಆಗಿದೆ.

ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ರಸ್ತೆಯನ್ನು ದುರಸ್ತಿ ಮಾಡುವ ಕೆಲಸದಲ್ಲಿ ತೊಡಗಿದ್ದಾರೆ. ಗ್ರಾಮಸ್ಥರು ಈ ಬಗ್ಗೆ ಶಾಸಕ ಸಿ ಎಂ ನಿಂಬಣ್ಣನವರ್ ಅವರ ಗಮನಕ್ಕೆ ತಂದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ.

ಭಾರೀ ವಾಹನಗಳ ಸಂಚಾರದಿಂದ ರಸ್ತೆ ಹದಗೆಟ್ಟಿದೆ ಎನ್ನುತ್ತಾರೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಯೊಬ್ಬರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.