ರಾಜ್ಯ

ರಾಜ್ಯದ ಇಬ್ಬರು ಸರ್ಕಾರಿ ಶಾಲಾ ಶಿಕ್ಷಕರಿಗೆ ಅಮೆರಿಕದ ಫುಲ್ ಬ್ರೈಟ್‌ ಸ್ಕಾಲರ್ ಶಿಪ್‌

ರಾಜ್ಯದ ಸರ್ಕಾರಿ ಶಾಲೆಯ ಇಬ್ಬರು ಶಿಕ್ಷಕರು ಅಮೆರಿಕದ ಪ್ರತಿಷ್ಠಿತ ಫುಲ್ ಬ್ರೈಟ್‌ ಸ್ಕಾಲರ್ ಶಿಪ್‌ ಗೆ ಆಯ್ಕೆಯಾಗಿದ್ದಾರೆ.

ರಾಜ್ಯದ ಇಬ್ಬರು ಸರ್ಕಾರಿ ಶಾಲಾ ಶಿಕ್ಷಕರಿಗೆ ಅಮೆರಿಕದ ಫುಲ್ ಬ್ರೈಟ್‌ ಸ್ಕಾಲರ್ ಶಿಪ್‌
ಸಾಂದರ್ಭಿಕ ಚಿತ್ರ
Published On :
ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಯ ಇಬ್ಬರು ಶಿಕ್ಷಕರು ಅಮೆರಿಕದ ಪ್ರತಿಷ್ಠಿತ ಫುಲ್ ಬ್ರೈಟ್‌ ಸ್ಕಾಲರ್ ಶಿಪ್‌ ಗೆ ಆಯ್ಕೆಯಾಗಿದ್ದಾರೆ. 
ಬೆಂಗಳೂರಿನ ಜಾಲಹಳ್ಳಿಯ ಏರ್ ಫೋರ್ಸ್‌ ಸ್ಟೇಷನ್ ನಲ್ಲಿರುವ ಕೇಂದ್ರೀಯ ವಿದ್ಯಾಲಯದ ಶಿಕ್ಷಕಿ ರೇಣುಕಾ ಕೃಷ್ಣಗಿರಿ ಹಾಗೂ ಮೈಸೂರು ಜಿಲ್ಲೆಯ ನಂಜನಗೂಡು ಬಳಿಯ ಮಲ್ಲುಪುರಜ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ರಾಜೇಶ್‌ ವೈ.ಎನ್‌ ಅವರು ಅಮೆರಿಕದ ಪ್ರತಿಷ್ಠಿತ ಗೌರವಕ್ಕೆ ಪಾತ್ರರಾಗಿದ್ದಾರೆ.
ಫುಲ್ ಬ್ರೈಟ್‌ ಸ್ಕಾಲರ್ ಶಿಪ್‌ ಪಡೆದಿರುವ ಈ ಇಬ್ಬರು ಶಿಕ್ಷಕರು 2019ರಲ್ಲಿ ಆರು ವಾರಗಳ ಕಾಲ ಅಮೆರಿಕ್ಕಕ್ಕೆ ತೆರಳಿ, ಅಲ್ಲಿನ ಶಾಲಾ, ಕಾಲೇಜ್ ಗಳು ಹಾಗೂ ವಿಶ್ವವಿದ್ಯಾಲಯಗಳಲ್ಲಿರುವ ಶಿಕ್ಷಣ ಪದ್ಧತಿ ಬಗ್ಗೆ ತಿಳಿದುಕೊಳ್ಳಲಿದ್ದಾರೆ.
ನಮ್ಮ ದೇಶದಿಂದ ಆಯ್ಕೆಯಾದ ಮೂವರು ಶಿಕ್ಷಕರ ಪೈಕಿ ನಮ್ಮ ರಾಜ್ಯದಿಂದಲೇ ಇಬ್ಬರು ಶಿಕ್ಷಕರು ಈ ಸ್ಕಾಲರ್ ಶಿಪ್ ಆಯ್ಕೆಯಾಗಿದ್ದಾರೆ.
ಗಣಿತ ಹಾಗೂ ವಿಜ್ಞಾನದ ವಿಷಯಗಳನ್ನು ಪಾಠ ಮಾಡುವ ರಾಜೇಶ್‌ ಹಾಗೂ ಶಿಕ್ಷಕಿ ರೇಣುಕಾ ವಿದ್ಯಾರ್ಥಿಗಳಿಗೆ ಹೊಸ ಹೊಸ ರೀತಿಯಲ್ಲಿ ಬೋಧನೆ ಮಾಡಿ ಹೆಸರುವಾಸಿಯಾಗಿದ್ದರು. ಈ ಇಬ್ಬರು ಶಿಕ್ಷಕರು ಪ್ರಬಂಧಗಳನ್ನು ಬರೆದು, ಸಂದರ್ಶನ ಎದುರಿಸಿ ಫುಲ್ ಬ್ರೈಟ್‌ ಸ್ಕಾಲರ್ ಶಿಪ್‌ ಗೆ ಆಯ್ಕೆಯಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.