ಈಗ, ಜೋಗ್ ಫಾಲ್ಸ್ ಸಮೀಪ ಜಲ ಕ್ರೀಡೆ ಆಡಿ, ಎಂಜಾಯ್ ಮಾಡಿ!
ಜೋಗ್ ಫಾಲ್ಸ್ ಸಮೀಪದ ಶಿರೂರು ಕೆರೆಯಲ್ಲಿ ಮೊಟ್ಟ ಮೊದಲ ಬಾರಿಗೆ ಎಲ್ಲಾ ರೀತಿಯ ಜಲಕ್ರೀಡೆಗೆ ವ್ಯವಸ್ಥೆ ಮಾಡಲಾಗಿದೆ, ಶಿವಮೊಗ್ಗ ನಗರದಿಂದ ಸುಮಾರು 110 ಕಿಮೀ .,..

Published On :
ಶಿವಮೊಗ್ಗ: ಜೋಗ್ ಫಾಲ್ಸ್ ಸಮೀಪದ ಶಿರೂರು ಕೆರೆಯಲ್ಲಿ ಮೊಟ್ಟ ಮೊದಲ ಬಾರಿಗೆ ಎಲ್ಲಾ ರೀತಿಯ ಜಲಕ್ರೀಡೆಗೆ ವ್ಯವಸ್ಥೆ ಮಾಡಲಾಗಿದೆ, ಶಿವಮೊಗ್ಗ ನಗರದಿಂದ ಸುಮಾರು 110 ಕಿಮೀ ದೂರವಿರುವ ಜೋಗ್ ಫಾಲ್ಸ್ ಪ್ರತಿ ವರ್ಷ ಸುಮಾರು 4 ಲಕ್ಷ ಪ್ರವಾಸಿಗರನ್ನು ಆಕರ್ಷಿಸುತ್ತದೆ.
ಬರುವ ಪ್ರವಾಸಿಗರಿಗೆ ಮತ್ತಷ್ಟು ಮೋಜಿಗಾಗಿ ಫಾಲ್ಸ್ ನಿಂದ 500 ಮೀಟರ್ ದೂರದಲ್ಲಿ ಜಲಕ್ರೀಡೆ ಕೇಂದ್ರ ಆರಂಭಿಸಲಾಗಿದೆ. ಶುಕ್ರವಾರದಿಂದ ಆರಂಭವಾಗಿದ್ದು, ಬೋಟಿಂಗ್ ಸೇರಿದಂತೆ ಆರು ರೀತಿಯ ಆಟಗಳನ್ನು ಆಡಿ ಆನಂದಿಸಬಹುದಾಗಿದೆ, ದಾಂಡೇಲಿ ಮೂಲದ ಕಂಪನಿ ಈ ಕ್ರೀಡಾ ಚಟುವಟಿಕೆಗಳ ಟೆಂಡರ್ ಪಡೆದುಕೊಂಡಿದೆ.
ಶಿವಮೊಗ್ಗ ಜಿಲ್ಲಾಧಿಕಾರಿ ಕೆ,ಸಿ ದಯಾನಂದ ಸ್ಥಳಕ್ಕೆ ಭೇಟಿ ನೀಡಿ ಇಲ್ಲಿನ ಕ್ರೀಡೆಗಳನ್ನು ಆಡಿ ಮೊದಲ ಸಂಭ್ರಮಿಸಿದರು, ನೀರಿನಲ್ಲಿ ಆಟ ಆಡುವಾಗ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಮನವಿ ಮಾಡಿದ್ದಾರೆ. ಮಲೆನಾಡು ಭಾಗದಲ್ಲಿ ಇದೇ ಮೊದಲ ಬಾರಿಗೆ ಎಲ್ಲಾ ರೀತಿಯ ಜಲ ಕ್ರೀಡೆಗಳನ್ನು ಒಂದೇ ಸ್ಥಳದಲ್ಲಿ ಆಡಬಹುದಾಗಿದೆ, ಜಲಾಶಯದಿಂದ ಶಿರೂರು ಕೆರೆಗೆ ನೀರು ಹರಿಯುವುದರಿಂದ ವರ್ಷಪೂರ್ತಿ ಕ್ರೀಡಾ ಚಟುವಟಿಕೆಗಳು ಇರುತ್ತವೆ,
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


