ಮಕ್ಕಳ ಚಲನಚಿತ್ರೋತ್ಸವ: ಸಿನಿಮಾ ನೋಡಲು ರಾಜ್ಯ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಬ್ರೇಕ್!
ಅಂತರಾಷ್ಚ್ರೀಯ ಮಕ್ಕಳ ಸಿನಿಮೋತ್ಸವ ಅಂಗವಾಗಿ ರಾಜ್ಯದ 23 ಜಿಲ್ಲೆಗಳ ಸರ್ಕಾರಿ ಶಾಲೆ ಮಕ್ಕಳಿಗೆ ಸಿನಿಮಾ ನೋಡುವ ಸಲುವಾಗಿ ಬುಧವಾರ ರಜೆ ನೀಡಲಾಗಿತ್ತು...

Published On :
ಬೆಂಗಳೂರು: ಅಂತರಾಷ್ಚ್ರೀಯ ಮಕ್ಕಳ ಸಿನಿಮೋತ್ಸವ ಅಂಗವಾಗಿ ರಾಜ್ಯದ 23 ಜಿಲ್ಲೆಗಳ ಸರ್ಕಾರಿ ಶಾಲೆ ಮಕ್ಕಳಿಗೆ ಸಿನಿಮಾ ನೋಡುವ ಸಲುವಾಗಿ ಬುಧವಾರ ರಜೆ ನೀಡಲಾಗಿತ್ತು.
ಅಂತರಾಷ್ಟ್ರೀಯ ಮಕ್ಕಳ ಸಿನಿಮೋತ್ಸವ ಅಂಗವಾಗಿ ನವೆಂಬರ್ 14 ರಿಂದ ಆರಂಭವಾಗಿರುವ ಉತ್ಸವ, ನವೆಂಬರ್ 23ರ ವರೆಗೂ ನಡೆಯಲಿದೆ,.ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಈ ಒಂದು ಯೋಜನೆ ಕೈಗೊಂಡಿದೆ. ಈ ಸಿನಿಮೋತ್ಸವ ಅಂಗವಾಗಿ ಹಲವು ಚಿತ್ರಗಳನ್ನು ಪ್ರದರ್ಶಿಸಲಾಗುವುದು.
ಸಿನಿಮೋತ್ಸವ ಮುಗಿಯುವವರೆಗೂ ರಾಜ್ಯದ ಹಲವು ಜಿಲ್ಲೆಗಳ ಶಾಲೆಗಳಲ್ಲಿ ಚಿತ್ರ ಪ್ರದರ್ಶನ ನಡೆಯಲಿದೆ. ಆಯ್ದ ಸರ್ಕಾರಿ ಶಾಲೆಗಳಲ್ಲಿ ಸ್ಯಾಟ್ ಲೈಟ್ ಮೂಲಕ ಸಿನಿಮಾ ಪ್ರದರ್ಶನ ಮಾಡಲಾಗುವುದು, ಮಕ್ಕಳಿಗೆ 20 ಭಾಷೆಗಳ ಸಿನಿಮಾಗಳನ್ನ ಪ್ರದರ್ಶಿಸಲಾಗುವುದು, ಜ್ವಲಂತ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವ ವಿವಿಧ ಭಾಷೆಗಳ ಸಿನಿಮಾಗಳನ್ನು ನೋಡುವ ಅವಕಾಶ ಸಿಗುವುದಿಲ್ಲ, ಹೀಗಾಗಿ ಈ ಸಿನಿಮೋತ್ಸವ ಆಯೋಜಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Karnatakaಕರ್ನಾಟಕschool studentsಶಾಲಾ ವಿದ್ಯಾರ್ಥಿಗಳುFilm screeningಸಿನಿಮಾ ಪ್ರದರ್ಶನInternational Kids Film Festivalಅಂತರಾಷ್ಟ್ರೀಯ ಮಕ್ಕಳ ಚಲಚಿತ್ರೋತ್ಸವ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


