ರಾಜ್ಯ

ಕುಡಿದ ಮತ್ತಿನಲ್ಲಿ ನಾದಿನಿ ತುಟಿಗೆ ಚುಂಬನ; ವಾಟ್ಸ್‌ಆ್ಯಪ್‌ನಲ್ಲಿ ಫೋಟೋ ಹರಿಬಿಟ್ಟು ಪೇಚಿಗೆ ಸಿಲುಕಿದ ಪುರಸಭೆ ಸದಸ್ಯ!

ಹಡಗಲಿ ಪುರಸಭೆ ಸದಸ್ಯನೋರ್ವ ತನ್ನ ಪತ್ನಿಯ ಸಹೋದರಿ ತುಟಿಗೆ ಚುಂಬನ ನೀಡಿರುವ ಫೋಟೋವನ್ನು ತಾನೇ ವಾಟ್ಸ್ಆ್ಯಪ್ ನಲ್ಲಿ ಹರಿಬಿಟ್ಟು ಪೇಚಿಗೆ ಸಿಲುಕಿದ್ದಾನೆ...

ಕುಡಿದ ಮತ್ತಿನಲ್ಲಿ ನಾದಿನಿ ತುಟಿಗೆ ಚುಂಬನ; ವಾಟ್ಸ್‌ಆ್ಯಪ್‌ನಲ್ಲಿ ಫೋಟೋ ಹರಿಬಿಟ್ಟು ಪೇಚಿಗೆ ಸಿಲುಕಿದ ಪುರಸಭೆ ಸದಸ್ಯ!
ಸಂಗ್ರಹ ಚಿತ್ರ
Published On :
ಬಳ್ಳಾರಿ: ಹಡಗಲಿ ಪುರಸಭೆ ಸದಸ್ಯನೋರ್ವ ತನ್ನ ಪತ್ನಿಯ ಸಹೋದರಿ ತುಟಿಗೆ ಚುಂಬನ ನೀಡಿರುವ ಫೋಟೋವನ್ನು ತಾನೇ ವಾಟ್ಸ್ಆ್ಯಪ್ ನಲ್ಲಿ ಹರಿಬಿಟ್ಟು ಪೇಚಿಗೆ ಸಿಲುಕಿದ್ದಾನೆ. 
ಕುಡಿದ ಮತ್ತಿನಲ್ಲಿ ನಾದಿನಿಗೆ ಪುರಸಭೆ ಸದಸ್ಯ ಮುತ್ತು ನೀಡಿದ್ದಾನೆ. ಅಲ್ಲದೇ ಅದನ್ನು ತನ್ನ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾನೆ. ಇಷ್ಟೇ ಆಗಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ. ತಾನು ಕ್ಲಿಕ್ಕಿಸಿದ ಫೋಟೋವನ್ನು ವಾಟ್ಸ್ ಆ್ಯಪ್ ಮೂಲಕ ಹರಿಬಿಟ್ಟಿದ್ದಾನೆ. ಈ ಫೋಟೋ ಇದೀಗ ವೈರಲ್ ಆಗಿದೆ. 
ನಾಲ್ಕು ದಿನಗಳ ಹಿಂದೆಯಷ್ಟೇ ನಾದಿನಿ ತನ್ನ ಮನೆಗೆ ಬಂದಿದ್ದಳು. ಮನೆಯಲ್ಲಿ ಯಾರೂ ಇರದ ಕಾರಣ, ಪಾನಮತ್ತರಾಗಿದ್ದ ಪುರಸಭೆ ಸದಸ್ಯ ಆಕೆಯ ತುಟಿಗೆ ಮುತ್ತು ನೀಡಿದ್ದರು ಎನ್ನಲಾಗುತ್ತಿದೆ. 
ಫೋಟೋ ವೈರಲ್ ಆಗುತ್ತಿದ್ದಂತೆ ಕುಟುಂಬದಲ್ಲಿ ಅಸಮಾಧಾನದ ಹೊಗೆ ಎದ್ದಿದೆ. ವಿಷಯ ತಿಳಿದ ಪೊಲೀಸರು ಪುರಸಭೆ ಸದಸ್ಯನನ್ನು ಠಾಣೆಗೆ ಕರೆಸಿದ್ದರು. ಅಲ್ಲಿಗೆ ಬಂದ ಕುಟುಂಬಸ್ಥರು ಇದು ನಮ್ಮ ಮನೆ ವಿಷಯ ಎಂದು ಹೇಳಿ ಸದಸ್ಯನನ್ನು ಮನೆಗೆ ಕರೆದುಕೊಂಡು ಬಂದಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.