ನಮ್ಮ ಮೆಟ್ರೋ ಮುಷ್ಕರ: ಲೇಬರ್ ಕಮಿಷನ್ ಆದೇಶ ಪಾಲನೆಗೆ ಹೈಕೋರ್ಟ್ ನಿರ್ದೇಶನ
ಬೆಂಗಳೂರು ಮೆಟ್ರೋ ರೈಲು ನೌಕರರ ಒಕ್ಕೂಟ ಮತ್ತು ನಮ್ಮ ಮೆಟ್ರೋ ಆಡಳಿತ ಹೈಕೋರ್ಟ್ ನಲ್ಲಿ ಮಂಗಳವಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಲೇಬರ್ ಕಮಿಷನ್......

Published On :
ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ನೌಕರರ ಒಕ್ಕೂಟ ಮತ್ತು ನಮ್ಮ ಮೆಟ್ರೋ ಆಡಳಿತ ಹೈಕೋರ್ಟ್ ನಲ್ಲಿ ಮಂಗಳವಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಲೇಬರ್ ಕಮಿಷನ್ ನೀಡುವ ತೀರ್ಪನ್ನು ಪಾಲಿಸುವಂತೆ ಹೇಳಿದೆ. ಬುಧವಾರ ನಡೆದ ವಿಚಾರಣೆ ವೇಳೆ ನ್ಯಾಯಾಲಯ ಈ ತೀರ್ಪು ನೀಡಿದೆ.
ಲೇಬರ್ ಕಮಿಷನ್ ಕೊಟ್ಟ ಆದೇಶ ಪಾಲನೆಯಾಗಿರುವ ಕುರಿತ ವರದಿಯನ್ನು ಜೂನ್ 4 ರಂದು ಹೈಕೋರ್ಟ್ ಗೆ ಸಲ್ಲಿಸಬೇಕು ಎಂದು ಯಾಲಯವು ಆದೇಶಿಸಿದೆ. ಈ ದಿನ ಬೆಳಿಗ್ಗೆ 11.30ಕ್ಕೆ ಬೆಂಗಳೂರು ಗೊರಗುಂಟೆಪಾಳ್ಯ ಆಯೋಗದ ಕಚೇರಿಯ ಎರಡೂ ಪಕ್ಷಗಳ ನಡುವೆ ಸಭೆ ನಡೆಯಲಿದೆ.
ಎಕ್ಸ್ ಪ್ರೆಸ್ ಜತೆ ಮಾತನಾಡಿದ ಮೆಟ್ರೋ ನೌಕರ ಒಕ್ಕೂಟದ ಉಪಾಧ್ಯಕ್ಷ ಸೂರ್ಯನಾರಾಯಣ ಮೂರ್ತಿನಮ್ಮ ಬೇಡಿಕೆಗಳು ಯಾವುದೇ ರೀತಿಯಲ್ಲಿ ಈಡೇರಿಲ್ಲ, ನಾವು ಮುಷ್ಕರವನ್ನು ನಡೆಸುವುದಕ್ಕೆ ಮುಂದಾಗಿದ್ದೇವೆ.ಜೂನ್ 4 ರ ಬೆಳಿಗ್ಗೆ ಹೈಕೋರ್ಟ್ ವಿಚಾರಣೆಯು ನಿಗದಿಯಾಗಿರುವುದರಿಂದ, ವಿಚಾರಣೆಯ ಮುಗಿಯುವವರೆಗೂ ನಾವು ಕಾಯಬೇಕಾಗಿದೆ. ಎಲ್ಲಾ ವಿಭಾಗದ ಮೆಟ್ರೋ ನೌಕರರೊಡನೆ ಸಂವಹನ ನಡೆಸಲು ಸಮಯಾವಕಾಶ ಬೇಕಾಗಿರುವ ಕಾರಣ ಅಂದು ಬಿಎಂಆರ್ಸಿಎಲ್ ಮೂರನೇ ಶಿಫ್ಟ್ ನಿಂದ ನಮ್ಮ ಮುಷ್ಕರ ಮುಂದುವರಿಯುವುದು"
ನಮ್ಮ ಮೆಟ್ರೋ ನೌಕರರ ಮೂರನೇ ಶಿಫ್ಟ್ ಬೆಳಿಗ್ಗೆ 9.30 ಕ್ಕೆ ಆರಂಭವಾಗುತ್ತದೆ. ಇದಕ್ಕೂ ಮೊದಲು ಒಕ್ಕೂಟವು ಜೀನ್ 4 ಬೆಳಿಗ್ಗೆಯಿಂದ ಮುಷ್ಕರಕ್ಕೆ ಕರೆ ನೀಡಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
High Courtಕರ್ನಾಟಕ ಹೈಕೋರ್ಟ್Bangalore Metro Rail Employees Unionlabour panelಬೆಂಗಳೂರು ಮೆಟ್ರೋ ರೈಲು ನೌಕರರ ಒಕ್ಕೂಟಕಾರ್ಮಿಕ ಸಮಿತಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


