ರಾಜ್ಯ

ಹಾವೇರಿ: ಕಾಂಗ್ರೆಸ್ ಅಭ್ಯರ್ಥಿ ಶಿವನಗೌಡ ಆರ್ . ಪಾಟೀಲ್ ಸಂಬಂಧಿಕರು ಧರ್ಮಸ್ಥಳದಲ್ಲಿ ಆತ್ಮಹತ್ಯೆ!

ಬ್ಯಾಡಗಿ ಕಾಂಗ್ರೆಸ್ ಅಭ್ಯರ್ಥಿ ಎಸ್.ಆರ್ ಪಾಟೀಲ್ ಸೋದರ ಸಂಬಂಧಿ ಮತ್ತವರ ಪತ್ನಿ ಧರ್ಮಸ್ಥಳದಲ್ಲಿ ಬುಧವಾರ ಆತ್ಮಹತ್ಯೆಗೆ ...

ಹಾವೇರಿ: ಕಾಂಗ್ರೆಸ್ ಅಭ್ಯರ್ಥಿ ಶಿವನಗೌಡ ಆರ್ . ಪಾಟೀಲ್ ಸಂಬಂಧಿಕರು ಧರ್ಮಸ್ಥಳದಲ್ಲಿ ಆತ್ಮಹತ್ಯೆ!
ಆತ್ಮಹತ್ಯೆಗೆ ಶರಣಾದ ದಂಪತಿ
Published On :
ಹಾವೇರಿ: ಬ್ಯಾಡಗಿ ಕಾಂಗ್ರೆಸ್ ಅಭ್ಯರ್ಥಿ ಎಸ್.ಆರ್ ಪಾಟೀಲ್ ಸೋದರ ಸಂಬಂಧಿ ಮತ್ತವರ ಪತ್ನಿ ಧರ್ಮಸ್ಥಳದಲ್ಲಿ ಬುಧವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮೃತ್ಯುಂಜಯ ಪಾಟೀಲ್ ಮತ್ತು ಪತ್ನಿ ನೇತ್ರಾವತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಮೃತ್ಯುಂಜಯ ಮೆಣಸಿನಕಾಯಿ ವ್ಯಾಪಾರಿಯಾಗಿದ್ಜರು. 
ಸಾವಿಗೂ ಮುನ್ನ ಮೃತ್ಯುಂಜಯ ಪಾಟೀಲ್ ಡೆತ್ ನೋಟ್ ಬರೆದಿದ್ದಾರೆ. ರಾಜ್ಯ ರಾಜಕೀಯ ಹಣ, ಹೆಂಡದಿಂದ ಕೀಳುಮಟ್ಟಕ್ಕೆ ಇಳಿದಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಹಾಳಾಗಿದೆ. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆಂದು ಉಲ್ಲೇಖಿಸಿದ್ದಾರೆ.
ಹಾಳಾದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ನೋಡಿಕೊಳ್ಳಬೇಕು. ಅವರು ಸರಿದಾರಿಗೆ ತರಬೇಕೆಂಬ ನಿರೀಕ್ಷೆಯಿಂದ ಇಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಅಂತಾ ಡೆತ್‍ನೋಟ್‍ನಲ್ಲಿ ಬರೆದಿಟ್ಟಿದ್ದಾರೆ.
ಮೃತ್ಯುಂಜಯ ಪತ್ನಿ ಕಲಾವಿದೆಯಾಗಿದ್ದು ಮೆಹಂದಿ, ವಧುವಿನ ಮೇಕಪ್ ಮಾಡುತ್ತಿದ್ದರು.  ವಿಷಯ ತಿಳಿಯುತ್ತಿದ್ದಂತೆ ನೂರಾರು ಮಂದಿ ಬ್ಯಾಡಗಿಯ ಬಸವೇಶ್ವರ ನಗರ ನಿವಾಸಕ್ಕೆ ಆಗಮಿಸಿದರು.
ಮೃತ ದಂಪತಿ ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಪುತ್ರನನ್ನು ಹೊಂದಿದ್ದಾರೆ. ಮೀನಾ ಎಂಬುವರು ಅಮೆರಿಕಾದಲ್ಲಿದ್ದು ಮತ್ತೊಬ್ಬ ಮಗಳು ಕೃಪಾ ಬೆಂಗಳೂರಿನಲ್ಲಿದ್ದಾರೆ, ಮಗ ಅನೂಪ್ ಲಂಡನ್ ನಲ್ಲಿ ಎಂಜಿನೀಯರಿಂಗ್ ವ್ಯಾಸಂಗ ಮಾಡುತ್ತಿದ್ದಾರೆ.
ಮೇ 13 ರಂದು ಪುತ್ರ ಅನೂಪ್ ಆಗಮಿಸಲಿದ್ದು ಅನಂತರ ಅಂತಿಮ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಲಾಗುವುದು. ಈ ಸಂಬಂಧ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.