ಬುಡಕಟ್ಟು ಜನರಿಗಾಗಿ ಸಾಂಪ್ರದಾಯಿಕ ಮತಕೇಂದ್ರ ಸ್ಥಾಪನೆ: ಚುನಾವಣಾ ಆಯೋಗ
ಬುಡಕಟ್ಟು ಜನಾಂಗ ಅಧಿಕವಾಗಿರುವ ರಾಜ್ಯದ ಎಂಟು ಜಿಲ್ಲೆಗಳಲ್ಲಿ ಬುಡಕಟ್ಟು ಸಮುದಾಯ ವಾಸವಿರುವ ಪ್ರದೇಶದ ಎರಡು ಕಿ.ಮೀ. ಅಂತರದಲ್ಲಿ ಸಾಂಪ್ರದಾಯಿಕ ಮತಕೇಂದ್ರಗಳ ಸ್ಥಾಪನೆಗೆ....

Published On :
ಬೆಂಗಳೂರು: ಬುಡಕಟ್ಟು ಜನಾಂಗ ಅಧಿಕವಾಗಿರುವ ರಾಜ್ಯದ ಎಂಟು ಜಿಲ್ಲೆಗಳಲ್ಲಿ ಬುಡಕಟ್ಟು ಸಮುದಾಯ ವಾಸವಿರುವ ಪ್ರದೇಶದ ಎರಡು ಕಿ.ಮೀ. ಅಂತರದಲ್ಲಿ ಸಾಂಪ್ರದಾಯಿಕ ಮತಕೇಂದ್ರಗಳ ಸ್ಥಾಪನೆಗೆ ಭಾರತೀಯ ಚುನಾವಣಾ ಆಯೋಗ ನಿರ್ಧರಿಸಿದೆ. ಬುಡಕಟ್ಟು ಸಮುದಾಯ ಮತ ಚಲಾಯಿಸಲು ಈ ಸಾಂಪ್ರದಾಯಿಕ ಕೇಂದ್ರಗಳಿಗೆ ತೆರಳಬಹುದು ಎಂದು ಚುನಾವಣಾ ಆಯೋಗದ ಪ್ರಧಾನ ಕಾರ್ಯದರ್ಶಿ ಸಂಜೀವ್ ಕುಮಾರ್ ಹೇಳಿದ್ದಾರೆ.
ಮೇ 12ರಂದು ನಡೆಯುವ ಚುನಾವಣೆಯಲ್ಲಿ ಬುಡಕಟ್ಟು ಜನಾಂಗ ಹೆಚ್ಚು ಪ್ರಮಾಣದಲ್ಲಿ ಬಾಗವಹಿಸಿ ಮತ ಚಲಾಯಿಸಲು ಪ್ರೋತ್ಸಾಹ ನೀಡಬೇಕಿದೆ. ಆ ನಿಟ್ಟಿನಲ್ಲಿ ನಿರ್ಮಿಸಲಾದ ಸಾಕ್ಷ ಚಿತ್ರ ಹಾಗೂ ಇತರೆ ಸಾಮಗ್ರಿಗಳನ್ನು ಬಿಡುಗಡೆಗೊಳಿಸಿದ ಸಂಜೀವ್ ಕುಮಾರ್ ಚಾಮರಾಜನಗರ, ಉಡುಪಿ, ಕೊಡಗು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಮೈಸೂರು, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ 28 ಸಾಂಪ್ರದಾಯಿಕ ಮತಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದರು.
ಎಂಟು ಜಿಲ್ಲೆಗಳಲ್ಲಿ ಬುಡಕಟ್ಟು ಮತದಾರರ ಸಂಖ್ಯೆಯು 5,15,190ರಷ್ಟಿದೆ. ಇದರಲ್ಲಿ 2,58,395 ಮಹಿಳೆಯರು, 2,56,795 ಪುರುಷರು ಸೇರಿದ್ದಾರೆ.ಈ ವರ್ಷ, 3,559 ಹೊಸ ಮತದಾರರನ್ನು ಮತಪಟ್ಟಿಗೆ ಸೇರ್ಪಡಿಸಲಾಗಿದೆ ಈ ಜನ ಸಮುದಾಯಕ್ಕೆ ."ಸಮಾಜ ಕಲ್ಯಾಣ ಇಲಾಖೆಯಿಂದ ಇವಿಎಂಗಳ ಮೂಲಕ ಮತ ಚಲಾಯಿಸಲು ಜಾಗೃತಿ ಮೂಡಿಸಲಾಗಿದೆ" ಅವರು ಹೇಳಿದರು.
ಈ ಬಾರಿ ಚುನಾವಣೆಗಾಗಿ ಆಯೋಗವು 224 ವೀಕ್ಷಕರ ನೇಮಕ ಮಾಡಿದೆ. ಅವರು ರಾಜ್ಯಾದ್ಯಂತದ 33 ಚುನಾವಣಾ ಜಿಲ್ಲೆಗಳಲ್ಲಿ ಚುನಾವಣೆ ಮೇಲ್ವಿಚಾರಣೆ ನಡೆಸಲಿದ್ದಾರೆ. ಅಲ್ಲದೆ ಈ ಬಾರಿ 3.65 ಲಕ್ಷ ಸಿಬ್ಬಂದಿ ಚುನಾವಣೆ ಕಾರ್ಯಕ್ಕಾಗಿ ಸಿದ್ದವಾಗಿದಾರೆ. ಒಟ್ಟು 38 ಎಣಿಕೆಯ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಮತದಾನ ಪ್ರಕ್ರಿಯೆಯನ್ನು ತಿಳಿದುಕೊಳ್ಳಲು ಈ ಬಾರಿ ಐವರು ಸದಸ್ಯರ ಅಂತರರಾಷ್ಟ್ರೀಯ ನಿಯೋಗವು ಕರ್ನಾಟಕಕ್ಕೆ ಭೇಟಿ ನೀಡಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಚುನಾವಣಾ ಆಯೋಗElection Commission of IndiaSanjiv Kumarಸಂಜೀವ್ ಕುಮಾರ್Karnataka Assembly Electiontraditional polling stationsಸಾಂಪ್ರದಾಯಿಕ ಮತಕೇಂದ್ರಗಳುಕರ್ನಾಟಕ ವಿಧಾನಸಭಾ ಚುನಾವಣ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


