ಬೆಂಗಳೂರು: ನಂದಿ ಬೆಟ್ಟದಿಂದ ಕಾಲು ಜಾರಿ ಬಿದ್ದ ಮಹಿಳೆ ಸಾವು
ನಂದಿ ಬೆಟ್ಟಕ್ಕೆ ತೆರಳಿದ್ದ ಮಹಿಳೆಯೊಬ್ಬರು ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

Published On :
ಬೆಂಗಳೂರು/ಚಿಕ್ಕಬಳ್ಳಾಪುರ: ನಂದಿ ಬೆಟ್ಟಕ್ಕೆ ತೆರಳಿದ್ದ ಮಹಿಳೆಯೊಬ್ಬರು ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಹಾಸನದ ಜೆ.ಸುನೀತಾ(54) ದುರ್ದೈವಿ ಮಹಿಳೆಯಾಗಿದು ಅವರ ಪತಿ, ಹೋಟೆಲ್ ಉದ್ಯೋಗಿ ಎಂ.ಕುಮಾರ್(53) ಪ್ರಾಣಾಪಾಯದಿಂದ ಪಾರಾಗಿದ್ದಾರೆ
ಹಾಸದದಿಂದ ಬೆಂಗಳುರಿನ ತಮ್ಮ ಸಂಬಂಧಿಕರ ಮನೆಗೆ ಬಂದಿದ್ದ ಈ ದಂಪತಿ ಮಂಗಳವಾರ (ಮೇ 1) ನಂದಿ ಬೆಟ್ಟಕ್ಕೆ ತೆರಳಿದ್ದಾರೆ.
ಬೆಟ್ಟದ ಹೋಟೆಲ್ ಮಯೂರ ಹಿಂಬಾಗದಲ್ಲಿ ಬಂಡೆಯೊಂದರ ಮೇಲೆ ಕುಳಿತಿದ್ದ ದಂಪತಿ ಸಂಜೆ 6.30ರ ಸುಮಾರು ಹಿಂತಿರುಗಲಿಕ್ಕಾಗಿ ಏಳುವಾಗ ಸುನೀತಾ ಚಪ್ಪಲಿಯೊಂದು ಕೆಳಗೆ ಬಿದ್ದಿದೆ.ಅದನ್ನು ತೆಗೆದುಕೊಳ್ಳಲೆನ್ನುವಂತೆ ಆಕೆ ಬಾಗಿದ್ದಾಗ ಆಧಾರ ತಪ್ಪಿದಂತಾಗಿ ಇಳಿಜಾರಿದ್ದ ಬಂಡೆಯಿಂದ ಉರುಳಿ ಕಂದಕಕ್ಕೆ ಬಿದ್ದಿದ್ದಾರೆ. ಆಕೆಯ ರಕ್ಷಣೆಗೆ ಮುಂದಾದ ಪತಿ ಕುಮಾರ್ ಸಹ ಕಂದಕಕ್ಕೆ ಜಾರಿದ್ದಾರೆ.

ಕುಮಾರ್ ಹತ್ತಿರದ ಬಂಡೆಯೊಂದನ್ನು ಆಧಾರವಾಗಿಟ್ಟುಕೊಂಡು ಬದುಕುಳಿದರೆ ಸುನೀತಾ ಕೆಳಗೆ ಬಿದ್ದು ಕಾಣೆಯಾಗಿದ್ದರು. ರಾತ್ರಿ 10ರ ವೇಳೆಗೆ ಚೇತರಿಸಿಕೊಂಡ್ ಅಕುಮಾರ್ ಮಯೂರ ಹೋಟೆಲ್ ಗೆ ತೆರಳಿ ಘಟನೆ ಕುರಿತು ವಿವರಿಸಿದ್ದಾರೆ. ಆ ಬಳಿಕ ಸ್ಥಳಕ್ಕೆ ಆಗಮಿಸಿದ್ದ ಪೋಲೀಸರು ಕಾರ್ಯಾಚರಣೆ ನಡೆಸಿ ಸುಮಾರು 350 ಅಡಿ ಆಳದಲ್ಲಿ ಮುನೇಶ್ವರ ದೇವಾಲಯ ಸಮೀಪ ಸುನೀತಾ ಅವರ ಶವವನ್ನು ಪತ್ತೆ ಮಾಡಿದ್ದಾರೆ.
ಕುಮಾರ್ ಅವರ ತಲೆ ಹಾಗೂ ಮೂಗಿಗೆ ಗಂಭೀರ ಸ್ವರೂಪದ ಗಾಯಗಳಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೋಲೀಸರು ತನಿಖೆ ಕೈಗೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


