ರಾಜ್ಯ

ಚಿನ್ನಸ್ವಾಮಿಯಲ್ಲಿ ಆರ್ ಸಿಬಿ ಮ್ಯಾಚ್ ವೇಳೆ 15 ಬೈಕ್ ಕಳ್ಳತನ, ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು!

ಐಪಿಎಲ್ ಪ್ರಿಯರಿಗೆ ಬೆಂಗಳೂರಿನಲ್ಲಿ ಬೈಕ್ ಕಳ್ಳರ ಕಾಟ ಶುರುವಾಗಿದ್ದು, ಎಂ ಚಿನ್ನಸ್ವಾಮಿ ಸ್ಟೇಡಿಯಂಗೆ ಮ್ಯಾಚ್ ನೋಡಲು ಆಗಮಿಸಿದ್ದ ಪ್ರೇಕ್ಷಕರ 15 ಬೈಕ್‍ಗಳನ್ನು ಕಳ್ಳರು ಕದ್ದು ಪರಾರಿಯಾಗಿರುವ ಘಟನೆ ಕಬ್ಬನ್ ಪಾರ್ಕ್ ನಲ್ಲಿ ನಡೆದಿದೆ.

ಚಿನ್ನಸ್ವಾಮಿಯಲ್ಲಿ ಆರ್ ಸಿಬಿ ಮ್ಯಾಚ್ ವೇಳೆ 15 ಬೈಕ್ ಕಳ್ಳತನ, ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು!
ಸಂಗ್ರಹ ಚಿತ್ರ
Published On :
ಬೆಂಗಳೂರು: ಐಪಿಎಲ್ ಪ್ರಿಯರಿಗೆ ಬೆಂಗಳೂರಿನಲ್ಲಿ ಬೈಕ್ ಕಳ್ಳರ ಕಾಟ ಶುರುವಾಗಿದ್ದು, ಎಂ ಚಿನ್ನಸ್ವಾಮಿ ಸ್ಟೇಡಿಯಂಗೆ ಮ್ಯಾಚ್ ನೋಡಲು ಆಗಮಿಸಿದ್ದ ಪ್ರೇಕ್ಷಕರ 15 ಬೈಕ್‍ಗಳನ್ನು ಕಳ್ಳರು ಕದ್ದು ಪರಾರಿಯಾಗಿರುವ ಘಟನೆ ಕಬ್ಬನ್ ಪಾರ್ಕ್ ನಲ್ಲಿ ನಡೆದಿದೆ.
ಮೂಲಗಳ ಪ್ರಕಾರ ಇಲ್ಲಿಯವರೆಗೂ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೂರು ಪಂದ್ಯಗಳು ನಡೆದಿದ್ದು, ಈ ಮೂರು ಪಂದ್ಯಗಳ ಅವಧಿಯಲ್ಲಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಒಟ್ಟು 15 ಬೈಕ್ ಪ್ರಕರಣಗಳು ದಾಖಲಾಗಿವೆಯಂತೆ.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಳೆದ 3 ಪಂದ್ಯಗಳ ವೇಳೆ ಈ ಘಟನೆ ನಡೆದಿದ್ದು, ಅಭಿಮಾನಿಗಳು ಕಬ್ಬನ್ ಪಾರ್ಕ್ ನಲ್ಲಿ ಬೈಕ್ ಪಾರ್ಕಿಂಗ್ ಮಾಡಿ ಆರ್‌ಸಿಬಿ ಪಂದ್ಯಗಳನ್ನು ನೋಡಲು ತೆರಳಿದ್ದಾಗೆ ಬೈಕ್ ಕಳ್ಳರು ತಮ್ಮ ಕೈ ಚಳಕ ತೋರಿದ್ದಾರೆ. ಪ್ರಮುವಾಗಿ ಕಳೆದ ಭಾನುವಾರ ನಡೆದ ಆರ್ ಸಿಬಿ- ಚೆನ್ನೈ ಮ್ಯಾಚ್ ನೋಡಲು ಹೋಗಿದ್ದ ಪ್ರೇಕ್ಷಕರ ಹಲವು ಬೈಕ್ ಗಳು ಕಳ್ಳತನವಾಗಿದೆ. ಪ್ರೇಕ್ಷಕರು ಅತ್ತ ಬೈಕ್ ಪಾರ್ಕ್ ಮಾಡಿ ಚಿನ್ನಸ್ವಾಮಿ ಕ್ರೀಡಾಂಗಣದತ್ತ ಹೆಜ್ಜೆ ಹಾಕುತ್ತಿದ್ದಂತೆಯೇ ಇತ್ತ ಬೈಕ್ ಕಳ್ಳರು ಕಬ್ಬನ್ ಪಾರ್ಕ್ ನಲ್ಲಿ ಪಾರ್ಕಿಂಗ್ ಮಾಡಿದ್ದ ಬೈಕ್ ಗಳನ್ನ ಕದ್ದು ಎಸ್ಕೇಪ್ ಆಗಿದ್ದಾರೆ. ಕಳೆದ 3 ಪಂದ್ಯಾವಳಿಗಳು ಸೇರಿ ಕಳ್ಳರು ಒಟ್ಟು 15 ಬೈಕ್ ಗಳನ್ನ ಕದ್ದು ಎಸ್ಕೇಪ್ ಆಗಿದ್ದಾರೆ. 
ಪೊಲೀಸರು ಅಭಿಪ್ರಾಯಪಟ್ಟಿರುವಂತೆ ಕಳ್ಳರ ಪಾಲಿಗೆ ಐಪಿಎಲ್ ದೊಡ್ಡ ಅವಕಾಶವಾಗಿ ಮಾರ್ಪಟ್ಟಿದ್ದು, ಇದನ್ನೇ ಬಂಡವಾಳ ಮಾಡಿಕೊಂಡ ಖರ್ತನಾಕ್ ಕಳ್ಳರು ಬೈಕ್ ಗಳನ್ನೇ ಕಳ್ಳತನ ಮಾಡುತ್ತಿದ್ದಾರೆ. ಈ ಬಗ್ಗೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ಗಂಭೀರವಾಗಿರುವ ಪೊಲೀಸರು ಐಪಿಎಲ್ ಪಂದ್ಯಾವಳಿ ವೇಳೆ ಕಬ್ಬನ್ ಪಾರ್ಕ್ ನಲ್ಲಿ ಹೆಚ್ಚುವರಿ ಸಿಬ್ಬಂದಿಗಳ ಹಾಕಲು ಚಿಂತನೆಯಲ್ಲಿ ತೊಡಗಿದ್ದಾರೆ ಎನ್ನಲಾಗಿದೆ. ಇನ್ನು ಪ್ರಸ್ತುತ ಕರ್ನಾಟಕ ವಿಧಾನಸಭೆ ಚುನಾವಣೆ ಸಂದರ್ಭ ಸಿಬ್ಬಂದಿ ಹೊಂದಾಣಿಕೆ ಕಷ್ಟ ಎಂಬ ಮಾತುಗಳೂ ಕೇಳಿಬರುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.