ವಿಜೃಂಭಣೆಯಿಂದ ನಡೆಯಿತು ಪುರಾಣ ಪ್ರಸಿದ್ಧ ಬೆಂಗಳೂರು ಕರಗ ಮಹೋತ್ಸವ
ವಿಳಂಬ ನಾಮ ಸಂವತ್ಸರದ ಚೈತ್ರ ಹುಣ್ಣಿಮೆ ದಿನವಾದ ಶನಿವಾರ ರಾತ್ರಿ ಇತಿಹಾಸ ಪ್ರಸಿದ್ಧ ಬೆಂಗಳೂರು ಕರಗ ಮಹೋತ್ಸವವು ಭಕ್ತಿ, ವಿಜೃಂಭಣೆ ಹಾಗೂ ವೈವಭಯುತವಾಗಿ ನಡೆಯಿತು...

Published On :
ಬೆಂಗಳೂರು: ವಿಳಂಬ ನಾಮ ಸಂವತ್ಸರದ ಚೈತ್ರ ಹುಣ್ಣಿಮೆ ದಿನವಾದ ಶನಿವಾರ ರಾತ್ರಿ ಇತಿಹಾಸ ಪ್ರಸಿದ್ಧ ಬೆಂಗಳೂರು ಕರಗ ಮಹೋತ್ಸವವು ಭಕ್ತಿ, ವಿಜೃಂಭಣೆ ಹಾಗೂ ವೈವಭಯುತವಾಗಿ ನಡೆಯಿತು.
ಇದೇ ಮೊದಲ ಬಾರಿಗೆ ಕರಗ ಹೊತ್ತ ದ್ರೌಪತಿ ಸ್ವರೂಪದಲ್ಲಿದ್ದ ಮನು ಸಕಲ ವಿಧಿ ವಿಧಾನಗಳೊಂದಿಗೆ ಶಾಸ್ತ್ರೋಕ್ತವಾಗಿ ಪೂಜಾ ಕಾರ್ಯಗಳನ್ನು ನಡೆಸಿದರು.
11 ದಿನಗಳ ಕಾಲ ನಡೆಯುವ ಕರಗ ಉತ್ಸವದಲ್ಲಿ ಹೂಲಿನ ಕರಗ ಉತ್ಸವದ ಪ್ರಮುಖವಾದದ್ದು. ಕರಗ ಶಕ್ತ್ಯೋತ್ಸವ ನಡೆಸಿಕೊಡುವ ಮನು ಅವರಿಗೆ ಅರಿಸಿನ ಬಣ್ಣದ ಸೀರೆ ಉಡಿಲಿ, ಬಲೆ ತೊಡಿಸಿ ದ್ರೌಪದಿಯಂತೆ ಅಲಂಕಾರ ಮಾಡಲಾಗಿತ್ತು.
ಧರ್ಮರಾಯ ಸ್ವಾಮಿ ದೇವನಸ್ಥಾನದಿಂದ ಹೊರಟ ದ್ರೌಪದಿ ದೇವಿ ಪ್ರತೀಕವಾದ ಹೂವಿನ ಕರಗ ಕೆಂಪೇಗೌಡರ ಕೋಟೆಯ ಸರಹದ್ದಿನ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಫಲ, ಪುಷ್ಮ, ತಳಿರು ತೋರಣಗಳಿಂದ ವೈಭವಯುತವಾಗಿ ಸಿಂಗಾರಗೊಂಡಿದ್ದ ರಥದಲ್ಲಿ ಅರ್ಜುನ, ದ್ರೌಪದಿದೇವಿ ಉತ್ಸವ ಮೂರ್ತಿಗಳು ಹಾಗೂ ಮುತ್ಯಾಲಮ್ಮ ದೇವಿಯ ಉತ್ಸವ ಮೂರ್ತಿಗಳು ಸಾಗಿದವು.
ಹೂವಿನ ಕರಗ ಶಕ್ತ್ಯೋತ್ಸವವನ್ನು ಸಹಸ್ರಾರು ಭಕ್ತರು ವೀಕ್ಷಿಸಿದರು. ಉತ್ಸವ ಸಾಗಿದ ರಸ್ತೆಗಳಲ್ಲಿ ಸಾಲುಗಟ್ಟಿ ನಿಂತಿದ್ದ ಭಕ್ತರು ಕರಗದ ದರ್ಶನ ಪಡೆದು ಧನ್ಯತೆ ಅನುಭವಿಸಿದರು. ಜನರು ವಿವಿಧ ಬಗೆಯ ಹೂಗಳನ್ನು ಕರಗದ ಮೇಲೆ ಎಸೆಯುತ್ತಿದ್ದ ದೃಶ್ಯಗಳಂತೂ ಮನಮೋಹಕವಾಗಿತ್ತು.
ಕರಗ ಮಹೋತ್ಸವ ತಿಗಳರಪೇಟೆ, ಬಳೇಪೇಟೆ, ಕುಂಬಾರ ಪೇಟೆ, ಚಿಕ್ಕಪೇಟಿ ಸೇರಿದಂದೆ ವಿವಿಧ ಭಾಗಗಳಲ್ಲಿ ಸಾಗಿತು. ಅರಳಿಪೇಟೆಯಲ್ಲಿರುವ ಮಸ್ತಾನ್ ದರ್ಗಾಕಗ್ಕೆ ಕರಗ ಭೇಟಿ ಸಾಗಿತು. ಟಿಪ್ಪು ಸುಲ್ತಾನರ ಕಾಲದಲ್ಲಿ ಸಂತರಾಗಿದ್ದ ಮಸ್ತಾನ್ ಸಾಹೇಬ್, ಧರ್ಮರಾಯ ಸ್ವಾಮಿ ದೇವಾಲಯಕ್ಕೆ ಪ್ರತಿ ನಿತ್ಯ ಭೇಟಿ ನೀಡಿ ಪೂಡೆ ಸಲ್ಲಿಸುತ್ತಿದ್ದರು.
ಅವರ ಮರಣದ ನಂತರವೂ ಕರಗ ಅವರ ದರ್ಗಾಕ್ಕೆ ಭೇಟಿ ನೀಡುವ ಸಂಪ್ರದಾಯ ಬೆಳೆಸಿಕೊಕಂಡು ಬರಲಾಗಿದೆ. ಅದರಂತೆ ಉತ್ಸವದಲ್ಲಿ ಹಿಂದೂಗಳ ಜತೆಗೂಡಿ ಮುಸ್ಲಿಂ ಬಾಂಧವರೂ ಸಹ ಉತ್ಸವದಲ್ಲಿ ಪಾಲ್ಗೊಂಡು ಧನ್ಯತೆ ಮೆರೆದರು.
ನಂತರ ಕಬ್ಬನ್ ಪೇಟೆ ಮೂಲಕ ಸುಣಕಲ್ ಪೇಟೆ ಮಾರ್ಗವಾಗಿ ಕುಲಪುರೋಹಿತರ ಮನೆಯಲ್ಲಿ ಪೂಜೆ ಸ್ವೀಕರಿಸಿ ಭಾನುವಾರ ಸೂರ್ಯೋದಯದ ವೇಳೆದೆ ಧರ್ಮರಾಯ ದೇವಾಲಯ ಸೇರಿತು.
ಕರಗದ ಸಂದರ್ಭದಲ್ಲಿ ದ್ರೌಪದಿ ದೇವಿಯ ಮಾಸನ ಪುತ್ರರೆಂದೇ ಕರೆಯಲಾಗುವ ವೀರಕುಮಾರರು ಕರಗಕ್ಕೆ ಬೆಂಗಾವಲಾಗಿ ನಿಂತಿದ್ದರು. ದಾರಿಯೂದ್ದಕ್ಕೂ ಕಿಕ್ಕಿರಿದು ತುಂಬಿದ್ದ ಭಕ್ತಸಾಗರ ಗೋವಿಂದ ನಾಮ ಸ್ಮರಣೆ ಜಪಿಸಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


