ರಾಜ್ಯ

ಬೆಂಗಳೂರು: ಒಣಗಿದ ನೀರಿನ ಟ್ಯಾಪ್ ನಿಂದ ಶಾಲಾ ಸಿಬ್ಬಂದಿಗೆ ನೀರಿನ ಹೊಡೆತ

ಫ್ರೆಜರ್ ಟೌನ್ ನ ಸರ್ಕಾರಿ ಅನುದಾನಿತ ಪ್ರೌಢಶಾಲೆಯ ಆಡಳಿತ ಮಂಡಳಿ ನೀರಿನ ಬಿಲ್ ಪಾವತಿಸದ ಕಾರಣ ಪ್ರತಿದಿನ ವಿದ್ಯಾರ್ಥಿಗಳು ನೀರಿಗಾಗಿ ಪರದಾಡುವಂತಾಗಿದೆ.

ಬೆಂಗಳೂರು:  ಒಣಗಿದ ನೀರಿನ ಟ್ಯಾಪ್ ನಿಂದ  ಶಾಲಾ   ಸಿಬ್ಬಂದಿಗೆ ನೀರಿನ ಹೊಡೆತ
ಮುಚ್ಚಿಲ್ಲದ ಪಾತ್ರೆಗಳಲ್ಲಿ ನೀರು ಸಂಗ್ರಹಿಸಿಟ್ಟಿರುವ ಚಿತ್ರ
Published On :

ಬೆಂಗಳೂರು :ಫ್ರೆಜರ್ ಟೌನ್ ನ ಸರ್ಕಾರಿ ಅನುದಾನಿತ ಪ್ರೌಢಶಾಲೆಯ ಆಡಳಿತ ಮಂಡಳಿ ನೀರಿನ ಬಿಲ್ ಪಾವತಿಸದ ಕಾರಣ ಪ್ರತಿದಿನ ವಿದ್ಯಾರ್ಥಿಗಳು ನೀರಿಗಾಗಿ ಪರದಾಡುವಂತಾಗಿದೆ.

ಪಾತಿಮಾ ಬಾಲಕಿಯರ ಪ್ರೌಢಶಾಲೆಯಲ್ಲಿ  149 ವಿದ್ಯಾರ್ಥಿನಿಯರು ವಿವಿಧ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಕಳೆದೊಂದು ವಾರದಿಂದ  ನಗರ ನೀರು ಪೂರೈಕೆ ಮಂಡಳಿಯಿಂದ  ನೀರಿನ ಸಂಪರ್ಕವನ್ನು ಕಡಿತಗೊಳಿಸಲಾಗಿದ್ದು, ಕುಡಿಯುವ ನೀರಿಲ್ಲದೆ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವಂತಾಗಿದೆ. ಶೌಚಾಲಯ ಕೂಡಾ ಬಳಸದಂತಾಗಿದೆ.

ವರದಿಗಾರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ,ನೆರೆಹೊರೆಯವರಿಂದ ನೀರನ್ನು ತಂದು ಶಾಲಾ ಸಿಬ್ಬಂದಿ ನೀಡುತ್ತಿದ್ದಾರೆ.  ಪಾತ್ರೆಗಳ ಮೂಲಕ ನೀರನ್ನು ಸಂಗ್ರಹಿಸಿಟ್ಟಿರುವ ದೃಶ್ಯ ಕಂಡುಬಂದಿತ್ತು.

ಕುಡಿಯುವ ನೀರಿನ ಟ್ಯಾಪ್ ಗಳು ಒಣಗಿದ್ದು, ಶೌಚಾಲಯಗಳಲ್ಲಿ ನೀರು ಬರುತ್ತಿರಲಿಲ್ಲ.  ಕಿರಿದಾದ ಕಾರಿಡಾರ್ ನಲ್ಲಿ ಐದು ಮುಚ್ಚಿಲ್ಲದ ಪಾತ್ರೆಗಳಲ್ಲಿ ನೀರು ತುಂಬಿಸಿಟ್ಟಿರುವ ದೃಶ್ಯ ಕಂಡುಬಂದಿತ್ತು. ಶಾಲೆಯಲ್ಲಿ ಇಂತಹ ಪರಿಸ್ಥಿತಿ ಮುಂದುವರೆದಿದ್ದರೂ ಯಾರೋಬ್ಬರು ಅದರ ಬಗ್ಗೆ ಗಮನ ನೀಡುತ್ತಿರಲಿಲ್ಲ.

ಶಾಲೆಯಿಂದ 83 ಸಾವಿರ ರೂ ನೀರಿನ ಬಿಲ್ ಪಾವತಿಸಬೇಕಾಗಿದೆ ಎಂದು ಮೇಲ್ವಿಚಾರಣಾ ವಿಭಾಗದ ಮುಖ್ಯ ಎಂಜಿನಿಯರ್ ಹೆಚ್. ಎಂ. ರವೀಂದ್ರ ಹೇಳುತ್ತಾರೆ. ಎಲ್ಲರಿಗೂ ಒಂದೇ ಕಾನೂನಾಗಿದ್ದು, ಬಿಲ್ ಪಾವತಿಸದೆ ಹೇಗೆ ನೀರು ಪೂರೈಸಲು ಸಾಧ್ಯ ಎಂದು ಪ್ರಶ್ನಿಸುತ್ತಾರೆ.

ಈ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸರಿಯಾದ ಸ್ಥಳವಕಾಶವೂ ಇಲ್ಲ ಎಂದು ಪೋಷಕರು ಆಡಳಿತ ಮಂಡಳಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 ಶಾಲಾ ಮುಖ್ಯಸ್ಥರಾಗಿರುವ ವೈದ್ಯ, ಎನ್, ಅಶೋಕ್ ಕುಮಾರ್ , ಶಾಲೆಯ ಮುಖ್ಯೋಪಾಧ್ಯಾಯನಿ ಎಲ್ಲಾ ವಿದ್ಯಾರ್ಥಿನಿಯರಿಂದ ಹಣ ಸಂಗ್ರಹಿಸಿ ನೀರಿನ ಬಿಲ್ ಪಾವತಿಸುವಂತೆ ಹೇಳುತ್ತಾರೆ.

ಈ ಶಾಲೆಯ ಭೂಮಿಯ ಮಾಲೀಕತ್ವ ಮತ್ತು ಶಾಲೆಯ ಬಗ್ಗೆ ದಶಕದಿಂದಲೂ ಕೇಸ್ ನಡೆಯುತ್ತಿದೆ ಎಂಬಂತಹ ವಿಚಾರವೂ ತಿಳಿದುಬಂದಿದೆ
 

 



 





Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.