ಪ್ಯಾಕೇಜ್ ಟೂರ್ ಗಳ ಮೇಲಿನ 5% ಜಿಎಸ್ಟಿ ತೆರಿಗೆಯನ್ನು ಹಿಂಪಡೆಯಬೇಕು: ಆನಂದ್ ವಿಹಾರಿಯ ಸ್ಥಾಪಕ ಡಿ.ಬಿ. ರವೀಂದ್ರನಾಥ್
ಕಳೆದ ಇಪ್ಪತ್ತು ವರ್ಷಗಳಿಂದ ಗ್ರಾಹಕ ಸೇವೆಯಲ್ಲಿ ತೊಡಗಿದ, 1.2 ಲಕ್ಷ ತೃಪ್ತ ಗ್ರಾಹಕರನ್ನು ಹೊಂದಿದ ಆನಂದ್ ವಿಹಾರಿ ಟೂರ್ಸ್ ಆಂಡ್ ಟ್ರಾವೆಲ್ಸ್ ಆಂಸ್ಥೆ ದೇಶದ ನಾನಾ ತಾಣಗಳಿಗೆ ಪ್ಯಾಕೇಜ್ ............

Published On :
ಬೆಂಗಳೂರು: ಕಳೆದ ಇಪ್ಪತ್ತು ವರ್ಷಗಳಿಂದ ಗ್ರಾಹಕ ಸೇವೆಯಲ್ಲಿ ತೊಡಗಿದ, 1.2 ಲಕ್ಷ ತೃಪ್ತ ಗ್ರಾಹಕರನ್ನು ಹೊಂದಿದ ಆನಂದ್ ವಿಹಾರಿ ಪ್ಯಾಕೇಜ್ ಟೂರ್ಸ್ ಸಂಸ್ಥೆ ದೇಶದ ನಾನಾ ತಾಣಗಳಿಗೆ ಪ್ಯಾಕೇಜ್ ಪ್ರವಾಸಗಳು ಸಮೂಹ ಪ್ಯಾಕೇಜು, ಕಸ್ಟಮೈಸ್ ಪ್ರವಾಸಗಳನ್ನು ಆಯೋಜಿಸುತ್ತಿದೆ. ಈ ಸಂಸ್ಥೆ ಪ್ರಾರಂಭವಾಗಿ 20 ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಆನಂದ್ ವಿಹಾರಿಯ ಸ್ಥಾಪಕ ನಿರ್ದೇಶಕ ಡಿ.ಬಿ. ರವೀಂದ್ರನಾಥ್ ಎಕ್ಸ್ ಪ್ರೆಸ್ ನೊಡನೆ ಮಾತನಾಡಿದ್ದಾರೆ.
ಕಳೆದ 20 ವರ್ಷಗಳಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಿಮ್ಮ ಅನುಭವ ತಿಳಿಸಿ
ನಾವು ಪ್ರವಾಸಿಗರು, ಗ್ರಾಹಕರ ನಿರ್ದಿಷ್ಟ ಅಗತ್ಯಗಳನ್ನು ಪೂರೈಸಲು ಬದ್ದರಾಗಿದ್ದೇವೆ. ನಾವು ಸುಧಾರಿತ ಸೇವೆಗಳನ್ನು ಒದಗಿಸುತ್ತೇವೆ. ಇದು ನಮ್ಮ ಇಪ್ಪತ್ತನೇ ವರ್ಷ. ನಾವು ಅತ್ಯುತ್ತಮ ಪ್ಯಾಕೇಜ್ ಒದಗಿಸಲು ನಿರಂತರವಾಗಿ ಪ್ರಯತ್ನ ನಡೆಸುತ್ತೇವೆ. ಪ್ರಾರಂಭದಿಂದ ಇಂದಿನವರೆಗೆ ನಾವು ಅತ್ಯುತ್ತಮ ತರಬೇತಿ ಹೊಂದಿದ ಸಿಬ್ಬಂದಿಗಳನ್ನು ಇರಿಸಿಕೊಂಡು ಉತ್ತಮವಾಗಿ ಪ್ರವಾಸಗಳನ್ನು ಆಯೋಜಿಸಿದ್ದೇವೆ. ರೋಟರಿ ಮತ್ತು ಲಯನ್ ಕ್ಲಬ್ ಸದಸ್ಯರು, ಕಾರ್ಪೊರೇಟ್ ಅಧಿಕಾರಿಗಳು, ಶಾಲೆ ಮತ್ತು ಕಾಲೇಜುಗಳ ಪ್ರವಾಸಗಳನ್ನು ಸಹ ಆಯೋಜನೆಗೊಳಿಸುತ್ತೇವೆ.ಗ್ರಾಹಕರ ಆಯ್ಕೆ ಹಾಗೂ ಬಜೆಟ್ ಅನುಸಾರ ನಾವು ಪ್ಯಾಕೇಜ್ ನೀಡುತ್ತೇವೆ.

ಬೆಂಗಳೂರಿಗರ ಪ್ರವಾಸ ಪ್ರವೃತ್ತಿಗಳಲ್ಲಿ ಯಾವ ರೀತಿಯ ಬದಲಾವಣೆಗಳನ್ನು ನೀವು ಗಮನಿಸಿದ್ದೀರಿ?
ಹಿಂದೆಲ್ಲಾ ಜನರು ಬೆಂಗಳೂರಿನಿಂದ ದಕ್ಷಿಣ ಭಾರತಕ್ಕೆ ಹೆಚ್ಚು ಪ್ರವಾಸದ ಪ್ಯಾಕೇಜ್ ಗೆ ಬೇಡಿಕೆ ಇಡುತ್ತಿದ್ದರು, ಆದರೆ ಇಂದು ಉತ್ತರ ಭಾರತ, ಅಮರನಾಥ, ಚಾರ್ ಧಾಮ್ ಯಾತ್ರೆಗೆಳಿಗೆ ಸಾಕಷ್ಟು ಜನ ಬೇಡಿಕೆ ಸಲ್ಲಿಸುತ್ತಾರೆ.
ಹೆಚ್ಚು ಬೇಡಿಕೆ ಇರುವ ವಿದೇಶೀ ಪ್ಯಾಕೇಜ್ ಗಳು ಹಾಗೂ ದೇಶೀ ತಾಣಗಳು ಯಾವುದು?
ವಿದೇಶದ ಕುರಿತಾಗಿ ಹೇಳುವುದಾದಲ್ಲಿ ಆಸ್ಟ್ರೇಲಿಯಾ, ಸಿಂಗಪೂರ್, ಮಲೇಷ್ಯಾ, ದುಬೈ, ಯುರೋಪ್, ಮತ್ತು ಚೀನಾ. ಭೂತಾನ್ ಗಳ ಪ್ರವಾಸಕ್ಕೆ ಸಾಕಷ್ಟು ಜನ ಆಸಕ್ತಿ ತಾಳುತ್ತಾರೆ. ಭಾರತದಲ್ಲಿ, ಲೆಹ್-ಲಡಾಖ್ ಶಿಮ್ಲಾ-ಮನಾಲಿ ಪ್ರವಾಸಗಳಿಗೆ ಬಹಳ ಬೇಡಿಕೆ ಇದೆ.
ಬ್ರ್ಯಾಂಡಿಂಗ್ ಹಾಗೂ ಮೂಲಭೂತ ಸೌಕರ್ಯದ ವಿಷಯದಲ್ಲಿ ಭಾರತೀಯ ಪ್ರವಾಸೋದ್ಯಮವು ವಿದೇಶೀ ಪ್ರವಾಸೋದ್ಯಮಕ್ಕೆ ಸರಿಸಾಟಿಯಾಗಲಿದೆ ಎಂದು ನಿಮಗೆ ಅನಿಸಿದೆಯೆ?
ಸಿಂಗಪುರ್, ಚೀನಾ, ಯುಎಇ ಗಳಿಗೆ ಹೋಲಿಸಿದರೆ ನಾವು ಸಾಕಷ್ಟು ಹಿಂದುಳಿದಿದ್ದೇವೆ. ದೆಹಲಿ, ಮಹಾರಾಷ್ಟ್ರ, ಗುಜರಾತ್ ನ ಅನೇಕ ಸ್ಥಳಗಳಲ್ಲಿ ಮೂಲಭೂತ ಸೌಕರ್ಯವಿಲ್ಲ, ಅದೆಷ್ಟೋ ಸ್ಥಳಗಳ ಬಗೆಗೆ ಸರಿಯಾದ ಮಾಹಿತಿ ಸಹ ಸಿಗಲಾರದು. . ಪ್ರವಾಸೋದ್ಯಮ ಇಲಾಖೆಯು ಈ ಕುರಿತಂತೆ ಸಾಕಷ್ಟು ಮುತುವರ್ಜಿವಹಿಸಿಲ್ಲ.
ಜಿಎಸ್ಟಿ ತೆರಿಗೆಯು ನಿಮ್ಮ ಉದ್ಯಮದ ಮೇಲೆ ಹೇಗೆ ಪರಿನಾಮ ಬೀರಿದೆ?
ದೇಶೀಯ, ವಿದೇಶೀ ಪ್ರವಾಸೋದ್ಯಮದ ಉತ್ತೇಜನಕ್ಕಾಗಿ ಪ್ಯಾಕೇಜ್ ಪ್ರವಾಸದ ಮೇಲಿನ 5% ಜಿಎಸ್ಟಿ ಅನ್ನು ರದ್ದುಗೊಳಿಸಬಹುದು ಜಿಎಸ್ಟಿ ಹೇರಿಕೆಯಿಂಡ ಪ್ರವಾಸಿಗರಿಗೆ ಹೆಚ್ಚುವರಿ ಹೊರೆ ಬೀಳುತ್ತಿದೆ. ಇದರಿಂಡ ಗ್ರಾಹಕರಲ್ಲಿ ಪ್ರವಾಸದ ಕುರಿತ ಆಸಕ್ತಿ ಕಡಿಮೆಯಾಗುವ ಸಂಭವವಿದೆ.
ನಿಮ್ಮ ಬೇಡಿಕೆಗಳನ್ನು ಸರ್ಕಾರಕ್ಕೆ ತಿಳಿಸಲು ಯಾವುದಾದರೂ ಸಂಘಟನೆ ಕಾರ್ಯಾಚರಿಸುತ್ತಿದೆಯೆ?
ಪ್ಯಾಕೇಜ್ ಟೂರ್ ಆಪರೇಟರ್ಗಳಿಗಾಗಿ ಕರ್ನಾಟಕದಲ್ಲಿ ಯಾವುದೇ ಸಂಘಟನೆ ಇಲ್ಲ. ನಮ್ಮ ಹಲವಾರು ಸಮಸ್ಯೆಗಳ ಕುರಿತಂತೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


