ಕೆಎಟಿ ಅಧ್ಯಕ್ಷರಿಗೆ ಮುಖ್ಯ ನ್ಯಾಯಮೂರ್ತಿಗಳ ಸಮಾನ ವೇತನ ನೀಡಲು ಸಾಧ್ಯವಿಲ್ಲ: ಕೇಂದ್ರ ಸರ್ಕಾರ
ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶರ ವೇತನಕ್ಕೆ ಸಮನಾದ ವೇತನ ನೀಡಬೇಕೆಂದು ಕೇಂದ್ರ ಮತ್ತು ...

ಬೆಂಗಳೂರು: ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶರ ವೇತನಕ್ಕೆ ಸಮನಾದ ವೇತನ ನೀಡಬೇಕೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಆದೇಶ ನೀಡಬೇಕೆಂದು ರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿ ಅಧ್ಯಕ್ಷ(ಕೆಎಟಿ) ನ್ಯಾಯಮೂರ್ತಿ ಕೆ.ಭಕ್ತವತ್ಸಲ ಅವರು ಸಲ್ಲಿಸಿರುವ ಅರ್ಜಿಗೆ ಪ್ರತಿಕ್ರಿಯಿಸಿರುವ ಕೇಂದ್ರ ಸರ್ಕಾರ ಹೈಕೋರ್ಟ್ ನ್ಯಾಯಾಧೀಶರ ಹುದ್ದೆಗೆ ಸಮನಾಗಿದ್ದರೂ ಕೂಡ ಕಾನೂನಿನಲ್ಲಿ ಸಮಾನ ವೇತನ ನೀಡುವ ಅವಕಾಶವಿಲ್ಲ ಎಂದು ಹೈಕೋರ್ಟ್ ಗೆ ತಿಳಿಸಿದೆ.
ಡಾ.ಭಕ್ತವತ್ಸಲ ಅವರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಕಳೆದ ವರ್ಷ ಅಕ್ಟೋಬರ್ ನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನೊಟೀಸ್ ಜಾರಿ ಮಾಡಿತ್ತು.
ಅರ್ಜಿ ಸಲ್ಲಿಕೆ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಸರ್ಕಾರ, ಆಡಳಿತಾತ್ಮಕ ನ್ಯಾಯಮಂಡಳಿ ಕಾಯ್ದೆ 1985 ನ್ನು 2007ರಲ್ಲಿ ತಿದ್ದುಪಡಿ ಮಾಡಿರುವ ಸೆಕ್ಷನ್ 83ರ ಪ್ರಕಾರ, ಹೈಕೋರ್ಟ್ ನ ನ್ಯಾಯಾಧೀಶರುಗಳ ಸೇವೆಗೆ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯರ ಸೇವೆಗಳು ಇರುತ್ತವೆ. ಹೈಕೋರ್ಟ್ ನ್ಯಾಯಾಧೀಶರು (ವೇತನ ಮತ್ತು ಸೇವೆಗಳ )ಕಾಯ್ದೆ 1954ರ ಪ್ರಕಾರ ಹೈಕೋರ್ಟ್ ನ್ಯಾಯಾಧೀಶರಿಗೆ 80,000 ತಿಂಗಳ ವೇತನ ಇರುತ್ತದೆ. ಅದರಂತೆ ತಿದ್ದುಪಡಿ ಮಾಡಿರುವ ಆಡಳಿತಾತ್ಮಕ ಕಾಯ್ದೆ ಪ್ರಕಾರ ಅಧ್ಯಕ್ಷರು ಮತ್ತು ಸದಸ್ಯರಿಗೆ ತಿಂಗಳಿಗೆ 80,000 ವೇತನ ನೀಡಬಹುದು ಎಂದು ತಿಳಿಸಿದೆ.
ಕಾಯ್ದೆಯ ಸಾಧ್ಯತೆ ಪ್ರಕಾರ ಕಾನೂನಿನಲ್ಲಿ ವಿವರಿಸಿದಂತೆ ರಾಜ್ಯ ಆತಳಿತಾತ್ಮಕ ನ್ಯಾಯಮಂಡಳಿಯ ಅಧ್ಯಕ್ಷರಿಗೆ ಹೆಚ್ಚಿನ ವೇತನ ನೀಡುವಂತಿಲ್ಲ. ಆಡಳಿತಾತ್ಮಕ ನ್ಯಾಯಮಂಡಳಿ ಕಾಯ್ದೆ 1985ರ ಸೆಕ್ಷನ್ 8(3)ರಡಿಯಲ್ಲಿ 2007ರಲ್ಲಿ ತಿದ್ದುಪಡಿ ಮಾಡಿರುವಂತೆ ಹೈಕೋರ್ಟ್ ನ್ಯಾಯಾಧೀಶರ ಸೇವೆಗಳಿಗೆ ಸಮನಾಗಿ ಕೆಎಟಿ ಅಧ್ಯಕ್ಷರು ಮತ್ತು ಸದಸ್ಯರುಗಳ ಸೇವೆಯಿರುತ್ತದೆ. ಅದರಂತೆ ಎರಡೂ ಸೇವೆಗಳ ಅಧ್ಯಕ್ಷರಿಗೆ ಪ್ರತಿ ತಿಂಗಳು ಸಮಾನ ವೇತನ ನೀಡಲಾಗುತ್ತದೆ ಎಂದು ಹೈಕೋರ್ಟ್ ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ನ್ಯಾಯವಾದಿ ಭಕ್ತವತ್ಸಲ ಕರ್ನಾಟಕ ಹೈಕೋರ್ಟ್ ನ ಮಾಜಿ ನ್ಯಾಯಾಧೀಶರು. ಇವರು 2015ರ ಡಿಸೆಂಬರ್ 15ರಂದು ಕೇಂದ್ರ ಸರ್ಕಾರದಿಂದ ಕೆಎಸ್ ಎಟಿಯ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಇದೀಗ ಅವರ ತಿಂಗಳ ವೇತನವನ್ನು ತಿಂಗಳಿಗೆ 90,000 ನಿಗದಿಪಡಿಸುವಂತೆ ಆದೇಶಿಸಬೇಕೆಂದು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಪ್ರಸ್ತುತ ಕೆಎಸ್ ಎಟಿ ಅಧ್ಯಕ್ಷರು ಮತ್ತು ಸದಸ್ಯರಿಗೆ ತಿಂಗಳಿಗೆ 80,000 ವೇತನವಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


