ನಿಭರ್ಯಾ ತಾಯಿಯ ಅಂದ ಚೆಂದ ವರ್ಣಿಸಿ ವಿವಾದಕ್ಕೀಡಾದ ಸಾಂಗ್ಲಿಯಾನ
ದೆಹಲಿಯಲ್ಲಿ ಕಾಮುಕರಿಂದ ಭೀಕರವಾಗಿ ಅತ್ಯಾಚಾರಕ್ಕೀಡಾಗಿ, ಅಮಾನುಷವಾಗಿ ಕೊಲೆಗೀಡಾದ ನಿರ್ಭಯಾ ಮತ್ತು ಆಕೆಯ ತಾಯಿ ಚೆಂದವನ್ನು ವರ್ಣಿಸಿ...

Published On :
ಬೆಂಗಳೂರು: ದೆಹಲಿಯಲ್ಲಿ ಕಾಮುಕರಿಂದ ಭೀಕರವಾಗಿ ಅತ್ಯಾಚಾರಕ್ಕೀಡಾಗಿ, ಅಮಾನುಷವಾಗಿ ಕೊಲೆಗೀಡಾದ ನಿರ್ಭಯಾ ಮತ್ತು ಆಕೆಯ ತಾಯಿ ಚೆಂದವನ್ನು ವರ್ಣಿಸಿ ನಿವೃತ್ತ ಪೊಲೀಸ್ ಅಧಿಕಾರಿ ಎಚ್ ಟಿ ಸಾಂಗ್ಲಿಯಾನ ವಿವಾದಕ್ಕೀಡಾಗಿದ್ದಾರೆ.
ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಅಸಾಧಾರಣ ಸೇವೆ ಸಲ್ಲಿಸಿದ್ದ ಮಹಿಳಾ ಅಧಿಕಾರಿಗಳ ಸನ್ಮಾನ ಸಮಾರಂಭದಲ್ಲಿ ನಿರ್ಭಯಾ ತಾಯಿ ಕೂಡ ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಸಾಂಗ್ಲಿಯಾನ ಅವರು ನಿರ್ಭಯಾ ತಾಯಿ ಇಲ್ಲಿಗೆ ಬಂದಿದ್ದು. ನಮ್ಮ ಜತೆ ಮಾತನಾಡಿದ್ದು ತುಂಬಾ ಸಂತಸ ತಂದಿದೆ. ನಿರ್ಭಯ ತಾಯಿ ಇಷ್ಟು ಚೆನ್ನಾಗಿದ್ದರೆ, ಇನ್ನು ನಿರ್ಭಯಾ ಇನ್ನೆಷ್ಟು ಚೆಂದ ಇರಬೇಕು ಎಂದು ಹೇಳಿದ್ದಾರೆ.
ಇದೇ ವೇಳೆ ಯಾರಾದರೂ ದೌರ್ಜನ್ಯ ಮಾಡಲ ಬಂದರೆ ಅವರು ನಿಮಗಿಂತ ಹೆಚ್ಚು ಶಕ್ತಿಶಾಲಿಯಾಗಿದ್ದರೆ. ಸುಮ್ಮನೆ ಅವರಿಗೆ ಶರಣಾಗುವುದು ಒಳ್ಳೆಯದ್ದು ಆಗ ಕೊಲೆಯಾಗುವುದನ್ನಾದರೂ ತಪ್ಪಿಸಬಹುದು ಎಂದು ಹೇಳಿದ್ದರು.
ತಮ್ಮ ಹೇಳಿಕೆಯನ್ನು ಸಮರ್ಥಿಕೊಂಡಿರುವ ಸಾಂಗ್ಲಿಯಾನ ಯಾವುದೇ ಕೆಟ್ಟ ಉದ್ದೇಶದಿಂದ ಈ ರೀತಿ ಹೇಳಲಿಲ್ಲ. ಯಾರಾದರೂ ನನ್ನ ಹತ್ತಿರ ಬಂದು ನೀವು ಎಷ್ಟು ಚೆನ್ನಾಗಿದ್ದೀರಾ. ಇನ್ನು 40 ವರ್ಷದ ವ್ಯಕ್ತಿಯಂತೆ ಕಾಣಿಸುತ್ತೀರಾ ಎಂದು ಹೇಳಿದರೆ ನನಗೆ ಸಂತೋಷವಾಗತ್ತದೆ. ಅದೇ ಅರ್ಥದಲ್ಲಿ ನಾನು ಅವರಿಗೂ ಹೇಳಿದ್ದು ಒಬ್ಬ ವ್ಯಕ್ತಿಯ ಮೆಚ್ಚುಗೆ ವ್ಯಕ್ತಪಡಿಸುವುದರಲ್ಲಿ ತಪ್ಪೇನು ಎಂದು ಪ್ರಶ್ನಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


