ಕರ್ನಾಟಕದಲ್ಲಿ ಮೊದಲ ಸಂಪೂರ್ಣ ಮಹಿಳಾ ಸಿಬ್ಬಂದಿಯ ರೈಲು ನಿಲ್ದಾಣ ಬಾಣಸವಾಡಿ
ನೈರುತ್ಯ ರೈಲ್ವೆ ವಲಯದಲ್ಲಿ ಬೆಂಗಳೂರಿನ ಬಾಣಸವಾಡಿ ರೈಲು ನಿಲ್ದಾಣ ಇನ್ನು ಮುಂದೆ ಸಂಪೂರ್ಣ ...

ಬೆಂಗಳೂರು: ನೈರುತ್ಯ ರೈಲ್ವೆ ವಲಯದಲ್ಲಿ ಬೆಂಗಳೂರಿನ ಬಾಣಸವಾಡಿ ರೈಲು ನಿಲ್ದಾಣ ಇನ್ನು ಮುಂದೆ ಸಂಪೂರ್ಣ ಮಹಿಳಾ ಸಿಬ್ಬಂದಿಯಿಂದಲೇ ನಿರ್ವಹಣೆಯಾಗಲಿದೆ. ಇದಕ್ಕೆ ಇಂದು ಮಹಿಳಾ ದಿನಾಚರಣೆಯಂದು ಚಾಲನೆ ಸಿಗಲಿದೆ.
ದೇಶದ ಕೆಲವು ರೈಲು ನಿಲ್ದಾಣಗಳು ಸಂಪೂರ್ಣ ಮಹಿಳಾ ಸಿಬ್ಬಂದಿ ಕೇಂದ್ರಿತ ನಿಲ್ದಾಣವಾಗಿ ಮಾರ್ಪಡುತ್ತಿದೆ.
ಮಹಿಳಾ ದಿನಾಚರಣೆ ಪ್ರಯುಕ್ತ ದೇಶದ ಮಹಿಳಾ ಶಕ್ತಿಪಡೆಗೆ ಗೌರವದ ದ್ಯೋತಕವಾಗಿ ಕೆಲವು ರೈಲ್ವೆ ನಿಲ್ದಾಣಗಳನ್ನು ಸಂಪೂರ್ಣ ಮಹಿಳಾ ಸಿಬ್ಬಂದಿ ಕೇಂದ್ರಿತವಾಗಿ ಮಾರ್ಪಡಿಸಲಾಗುತ್ತಿದೆ ಎಂದು ಬೆಂಗಳೂರು ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಎನ್.ಆರ್.ಶ್ರೀಧರಮೂರ್ತಿ ತಿಳಿಸಿದ್ದಾರೆ.
ಬಾಣಸವಾಡಿ ರೈಲು ನಿಲ್ದಾಣದಲ್ಲಿ ಎಲ್ಲಾ ಹತ್ತು ಮಂದಿ ಸಿಬ್ಬಂದಿ ಮಹಿಳೆಯರಿರುತ್ತಾರೆ. ಕಾಯ್ದಿರಿಸದ ಟಿಕೆಟ್ ಬುಕ್ ಮಾಡಲು ಮೂವರು ಮಹಿಳೆಯರು, ರೈಲ್ವೆ ಹಳಿಗಳನ್ನು ಬದಲಾಯಿಸಲು ಮೂವರು ಪಾಯಿಂಟ್ಸ್ ವುಮನ್ ಮತ್ತು ಮೂವರು ರೈಲ್ವೆ ಸ್ಟೇಷನ್ ಮಾಸ್ಟರ್ ಗಳು ಮಹಿಳೆಯರಿರುತ್ತಾರೆ. ಅಲ್ಲದೆ ಕಾಯ್ದಿರಿಸಿದ ಟಿಕೆಟ್ ಬಗ್ಗೆ ನಿಗಾವಹಿಸಲು ಮಹಿಳಾ ಕ್ಲರ್ಕ್ ವೊಬ್ಬರು ಇರುತ್ತಾರೆ ಎಂದು ಅವರು ತಿಳಿಸಿದರು.
ಕಳೆದ ಫೆಬ್ರವರಿ 20ರಂದು ರಾಜಸ್ತಾನದ ಗಾಂಧಿನಗರ ರೈಲ್ವೆ ನಿಲ್ದಾಣ ಸಂಪೂರ್ಣ ಮಹಿಳಾ ಸಿಬ್ಬಂದಿಯಾಗಿ ಮಾರ್ಪಟ್ಟಿತ್ತು. ಮುಂಬೈಯ ಮಾತುಂಗ ಸಬ್ ಅರ್ಬನ್ ರೈಲ್ವೆ ನಿಲ್ದಾಣ ಈ ನಿಟ್ಚಿನಲ್ಲಿ ಮೊದಲ ಹೆಜ್ಜೆಯನ್ನಿಟ್ಟಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


