ರಾಜ್ಯ

ಅಪಹರಣ ಪ್ರಕರಣಕ್ಕೆ ಟ್ವಿಸ್ಟ್: ಸ್ನೇಹಿತನ ಲವ್ ಮಾಡುವಂತೆ ಮಹಿಳೆಯ ಒತ್ತಾಯಿಸಿದ್ದ ಸಪ್ಲೈಯರ್?

ಬಿಗ್ ಬಾಸ್ ಖ್ಯಾತಿಯ ನಟ ಸುನಾಮಿ ಕಿಟ್ಟಿಯ ಅಪಹರಣ ಪ್ರಕರಣಕ್ಕೆ ಹೊಸದೊಂದು ಟ್ವಿಸ್ಟ್ ದೊರೆತಿದ್ದು, ಪ್ರಕರಣದ ಪ್ರಮುಖ ಆರೋಪಿ ಸುನಿಲ್ ಎಂಬಾತನ ಪತ್ನಿಗೆ ಸಪ್ಲೈಯರ್ ಗಿರೀಶ್ ಮತ್ತು ತೌಶಿಕ್ ಕಿರುಕುಳ ನೀಡಿದ್ದರಂತೆ.

ಅಪಹರಣ ಪ್ರಕರಣಕ್ಕೆ ಟ್ವಿಸ್ಟ್: ಸ್ನೇಹಿತನ ಲವ್ ಮಾಡುವಂತೆ ಮಹಿಳೆಯ ಒತ್ತಾಯಿಸಿದ್ದ ಸಪ್ಲೈಯರ್?
ಸಂಗ್ರಹ ಚಿತ್ರ
Published On :
ಬೆಂಗಳೂರು: ಬಿಗ್ ಬಾಸ್ ಖ್ಯಾತಿಯ ನಟ ಸುನಾಮಿ ಕಿಟ್ಟಿಯ ಅಪಹರಣ ಪ್ರಕರಣಕ್ಕೆ ಹೊಸದೊಂದು ಟ್ವಿಸ್ಟ್ ದೊರೆತಿದ್ದು, ಪ್ರಕರಣದ ಪ್ರಮುಖ ಆರೋಪಿ ಸುನಿಲ್ ಎಂಬಾತನ ಪತ್ನಿಗೆ ಸಪ್ಲೈಯರ್ ಗಿರೀಶ್ ಮತ್ತು ತೌಶಿಕ್ ಕಿರುಕುಳ ನೀಡಿದ್ದರಂತೆ.
ಈ ಬಗ್ಗೆ ಸುನಿಲ್ ಪತ್ನಿ ಎಂದು ಹೇಳಿಕೊಂಡ ಮಹಿಳೆಯೊಬ್ಬರು ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದು, ತೌಶಿಕ್ ಸ್ನೇಹಿತನಾದ್ದರಿಂದ ಆತನೊಂದಿಗೆ ಸಲುಗೆಯಿಂದ ಇದ್ದೆ. ಆದರೆ ಆತ ಅದನ್ನೇ ದುರ್ಬಳಕೆ ಮಾಡಿಕೊಂಡು ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದ. ಈ ಬಗ್ಗೆ ನಾನು ನಾನು ನನ್ನಪತಿ ಸುನಿಲ್ ಅವರಿಗೂ ಮಾಹಿತಿ ನೀಡಿದ್ದೆ. ತೌಶಿಕ್ ರನ್ನು ಕರೆಸಿಕೊಂಡಿದ್ದ ನನ್ನ ಪತಿ ಆತನ ಕಪಾಳಕ್ಕೆ ಹೊಡೆದು ಕಳುಹಿಸಿದ್ದರು. 
ತೌಶಿಕ್ ಮತ್ತು ನಾನು ಸ್ನೇಹಿತರಾದ್ದರಿಂದ ಆಗಾಗ ಭೇಟಿ ಮಾಡುತ್ತಿದ್ದೆವು. ಅದರಂತೆ ಕಳೆದ ಫೆ. 25ರಂದು ಮರಿಯಪ್ಪನಪಾಳ್ಯದ ಕುಟೀರ್ ಪಾರ್ಕ್‌ ಬಳಿಯ ‘ಲ್ಯಾಂಡ್‌ ಬಾರ್‌ ಆ್ಯಂಡ್ ರೆಸ್ಟೊರೆಂಟ್‌’ಗೆ ಹೋಗಿದ್ದೆವು. ಅಂದು ಕೈ ತೊಳೆಲೆಂದು ನಾನು ವಾಶ್ ರೂಂಗೆ ಎದ್ದು ಹೋಗಿದ್ದಾಗ ತೌಶಿಕ್ ನನ್ನ ಮೊಬೈಲ್ ಅನ್ನು ತೆಗೆದುಕೊಂಡು ಅದರಲ್ಲಿ ನಾನು ನನ್ನ ಪತಿಗೆ ಕಳುಹಿಸಿದ್ದ ಮೆಸೇಜ್ ಗಳನ್ನು ತನಗೆ ಫಾರ್ವರ್ಡ್ ಮಾಡಿಕೊಂಡಿದ್ದಾನೆ. ಬಳಿಕ ಇದೇ ಮೆಸೇಜ್ ಗಳನ್ನು ತೋರಿ ನನ್ನನ್ನು ಹೆದರಿಸುತ್ತಿದ್ದ. ಈ ಬಗ್ಗೆಯೂ ನನ್ನ ಪತಿ ಸುನಿಲ್ ಗೆ ಹೇಳಿದ್ದೆ ಎಂದು ಮಹಿಳೆ ಆರೋಪಿಸಿದ್ದಾರೆ.
ಮಹಿಳೆಯ ಪತಿ ಸುನಿಲ್, ಕಿಟ್ಟಿ ಅವರ ಸ್ನೇಹಿತರಾಗಿದ್ದು, ಕಿಟ್ಟಿ ಮತ್ತು ಸಂಗಡಿಗರು ಸಪ್ಲೈಯರ್ ಗಿರೀಶ್ ಹಾಗೂ ತೌಶಿಕ್ ರನ್ನು ಕರೆಸಿ ಬೆದರಿಕೆ ಹಾಕಿದ್ದಾರೆ. ಅಲ್ಲದೆ ಈ ಸಂಬಂಧ ಇದೀಗ ಪೊಲೀಸರಿಂದ ಬಂಧನಕ್ಕೂ ಒಳಗಾಗಿದ್ದಾರೆ.
ಕಿಟ್ಟಿ ಐದು ದಿನ ಪೊಲೀಸ್ ವಶಕ್ಕೆ
ಇನ್ನು ಪ್ರಕರಣ ಸಂಬಂಧ ಬಂಧನಕ್ಕೀಡಾಗಿರುವ ಆರೋಪಿ ಸುನಾಮಿ ಕಿಟ್ಟಿಯನ್ನು ಐದು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಲಾಗಿದೆ. ನಿನ್ನೆ ಬಂಧನವಾಗಿದ್ದ ಕಿ್ಟ್ಟಿಯನ್ನು ಇಂದು ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ಈ ವೇಳೆ ನ್ಯಾಯಾಧೀಶರು ಕಿಟ್ಟಿ ಮತ್ತು ಗ್ಯಾಂಗ್ ಅನ್ನು ಐದು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.