ನಷ್ಟದಲ್ಲಿ ಸಾಗುತ್ತಿರುವ 'ನಮ್ಮ ಮೆಟ್ರೊ', ಆಶಾಕಿರಣವಾಗಿರುವ ಕಾರ್ಯಾಚರಣೆ ಲಾಭ
ಕಳೆದ ಮಾರ್ಚ್ ಹಣಕಾಸು ವರ್ಷದ ಅಂತ್ಯದಲ್ಲಿ ಬೆಂಗಳೂರು ಮೆಟ್ರೊ ರೈಲು ನಿಗಮಕ್ಕೆ 538.05 ಕೋಟಿ...

ಬೆಂಗಳೂರು: ಕಳೆದ ಮಾರ್ಚ್ ಹಣಕಾಸು ವರ್ಷದ ಅಂತ್ಯದಲ್ಲಿ ಬೆಂಗಳೂರು ಮೆಟ್ರೊ ರೈಲು ನಿಗಮಕ್ಕೆ 538.05 ಕೋಟಿ ರೂಪಾಯಿ ನಷ್ಟವಾಗಿದೆ. ಕಳೆದ ವರ್ಷದ ಈ ಸಮಯದ ವಹಿವಾಟಿಗಿಂತ ಈ ವರ್ಷ 80.17 ಕೋಟಿ ರೂಪಾಯಿ ನಷ್ಟವಾಗಿದೆ. ಆದರೆ ಕಳೆದ 2017ರ ಜೂನ್ ನಿಂದ ಮೆಟ್ರೊ ಮೊದಲ ಹಂತ ಕಾರ್ಯಾಚರಣೆ ಆರಂಭವಾದಾಗಿನಿಂದ ಕಾರ್ಯಾಚರಣೆ ಲಾಭ ಜಾಸ್ತಿಯಾಗಿದೆ.
ಮೆಟ್ರೊ ನಿಗಮದ ಸಂಪತ್ತಿನಲ್ಲಿ ಇಳಿಕೆ ಮತ್ತು ಟೆಂಡರ್ ಗೆ ಅಧಿಕ ಮೊತ್ತ ಪಾವತಿಯಿಂದಾಗಿ ಕಂಪೆನಿಗೆ ನಷ್ಟವಾಗಿದೆ ಎಂದು ಬಿಎಂಆರ್ ಸಿಎಲ್ ನ ಅಧಿಕಾರಿಗಳು ಹೇಳುತ್ತಾರೆ.
ಮೆಟ್ರೊ ಮೊದಲ ಹಂತ ಸಂಪೂರ್ಣವಾಗಿ ಕಾರ್ಯನಿರ್ವಹಿಸುವುದರಿಂದ ವಾರ್ಷಿಕ ಬಡ್ಡಿದರದಲ್ಲಿ ಏರಿಕೆಯಾಗಿದೆ. ಅದು 110 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದ್ದು ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ 44 ಕೋಟಿ ರೂಪಾಯಿಗಳಾಗಿದ್ದವು ಎನ್ನುತ್ತಾರೆ ಅಧಿಕಾರಿಗಳು. 42.3 ಕಿಲೋ ಮೀಟರ್ ಉದ್ದದ ಮೊದಲ ಹಂತದ ಕಾಮಗಾರಿಗೆ 5,600 ಕೋಟಿ ರೂಪಾಯಿ ಸಾಲ ಪಡೆಯಲಾಗಿತ್ತು ಎನ್ನುತ್ತಾರೆ.
ಮೆಟ್ರೊ ಕಾರ್ಯಾಚರಣೆ ಆದಾಯ ಉತ್ತರ-ದಕ್ಷಿಣ ಮತ್ತು ಪೂರ್ವ-ಪಶ್ಚಿಮ ಕಾರಿಡಾರ್ ಗಳಿಂದ ಹೆಚ್ಚಾಗಿದೆ. ಕಾರ್ಯಾಚರಣೆ ಆದಾಯ 2017-18ರಲ್ಲಿ 324.95 ಕೋಟಿ ರೂಪಾಯಿಗಳಿದ್ದರೆ, 2016-17ರಲ್ಲಿ 130.27 ಕೋಟಿ ರೂಪಾಯಿಗಳಿದ್ದವು. ಮೆಟ್ರೊಗೆ ಪ್ರತಿದಿನ ಸುಮಾರು 1 ಕೋಟಿ ರೂಪಾಯಿ ಆದಾಯ ಬರುತ್ತದೆ. 6 ಬೋಗಿಗಳ ರೈಲು ಆರಂಭವಾದ ಮೇಲೆ ಆದಾಯ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಕಾರ್ಯಾಚರಣೆ ದೃಷ್ಟಿಯಿಂದ ಮೆಟ್ರೊ ಕಾರ್ಯನಿರ್ವಹಣೆ ಸಾಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


