ಇದೇ ಮೊದಲ ಬಾರಿಗೆ ಜನರಿಗಾಗಿ ಗ್ರಂಥಾಲಯ ತೆರೆದ ಗದಗ ಉಪ ಆಯುಕ್ತರ ಕಚೇರಿ
ಉಪ ಆಯುಕ್ತರನ್ನು ಭೇಟಿ ಮಾಡುವ ಸಲುವಾಗಿ ಗಂಟೆಗಟ್ಟಲೆ ಕಚೇರಿ ಎದುರು ಕಾದು ಕುಳಿತುಕೊಳ್ಳುವ ಜನರಿಗಾಗಿ ಗದಗದಲ್ಲಿರುವ ಉಪ ಆಯುಕ್ತರ ಕಚೇರಿ ಗ್ರಂಥಾಲಯವೊಂದರನ್ನು ತೆರೆದಿದೆ...

Published On :
ಗದಗ: ಉಪ ಆಯುಕ್ತರನ್ನು ಭೇಟಿ ಮಾಡುವ ಸಲುವಾಗಿ ಗಂಟೆಗಟ್ಟಲೆ ಕಚೇರಿ ಎದುರು ಕಾದು ಕುಳಿತುಕೊಳ್ಳುವ ಜನರಿಗಾಗಿ ಗದಗದಲ್ಲಿರುವ ಉಪ ಆಯುಕ್ತರ ಕಚೇರಿ ಗ್ರಂಥಾಲಯವೊಂದರನ್ನು ತೆರೆದಿದೆ.
ಪ್ರತೀನಿತ್ಯ ನೂರಾರೂ ಜನರು ಕಚೇರಿ ಎದುರು ಗಂಟೆಗಟ್ಟಲೆ ಕಾಯುವುದನ್ನು ನೋಡಿದ ಗದಗ ಜಿಲ್ಲೆಯ ಉಪ ಆಯುಕ್ತ ಮನೋಜ್ ಜೈನ್ ಅವರು ಜನರಿಗಾಗಿ ಗ್ರಂಥಾಲಯ ತೆರೆಯುವ ಪ್ರಸ್ತಾವನೆಯನ್ನು ಸಿಬ್ಬಂದಿಗಳ ಮುಂದಿಟ್ಟರು. ಇದಕ್ಕೆ ಧನಾತ್ಮಕ ಸ್ಪಂದನೆ ನೀಡಿದ ಸಿಬ್ಬಂದಿಗಳು ಬಿಡುವಿಲ್ಲದ ಸಮಯದಲ್ಲೂ ಗ್ರಂಥಾಲಯ ತೆರೆಯಲು ಸಹಾಯ ಮಾಡಿದ್ದಾರೆ.
ಇದರಂತೆ ಇದೇ ಮೊದಲಬಾರಿಗೆ ಜನರಿಗಾಗಿ ಗ್ರಂಥಾಲಯ ತೆರೆದ ಗದಗ ಉಪ ಆಯುಕ್ತರ ಕಚೇರಿ ಎಂಬ ಹೆಗ್ಗಳಿಕೆಗೆ ಗದಗ ಜಿಲ್ಲೆ ಪಾತ್ರವಾಗಿದೆ.
ಗ್ರಂಥಾಲಯ ತೆರೆಯುವ ಸಲುವಾಗಿ ಕಚೇರಿಯ ಸಿಬ್ಬಂದಿಗಳು ಕಳೆದ ಮೇ ತಿಂಗಳಿನಿಂದಲೇ ಪುಸ್ತಕಗಳನ್ನು ಸಂಗ್ರಹಿಸಲು ಆರಂಭಿಸಿದ್ದರು. ಇಂದು ಗ್ರಂಥಾಲಯದಲ್ಲಿ 2 ಸಾವಿರಕ್ಕೂ ಅಧಿಕ ಪುಸ್ತಕಗಳಿವೆ. ಇತಿಹಾಸ, ಆರ್ಥಶಾಸ್ತ್ರಸ ಸಮಾಜಶಾಸ್ತ್ರ, ಜೀವಶಾಸ್ತ್ರ, ಸಂಗೀತ, ಸಾಹಿತ್ಯ ಸೇರಿದಂತೆ ಹಲವು ವಿಷಯಗಳು ಕುರಿತ ಪುಸ್ತಕಗಳು ಈ ಗ್ರಂಥಾಲಯದಲ್ಲಿ ದೊರಕುತ್ತವೆ. ಇದಲ್ಲದೆ 12 ಕನ್ನಡ ದಿನ ಪತ್ರಿಕೆಗಳು, 4 ಆಂಗ್ಲ ಪತ್ರಿಕೆಗಳು ಹಾಗೂ 1 ಮಾಸಿಕ ನಿಯತಕಾಲಿಕೆಗೆ ಕೂಡ ಗ್ರಂಥಾಲಯದಲ್ಲಿ ಲಭ್ಯವಿರಲಿದೆ.
ಗ್ರಂಥಾಲಯ ನಿರ್ಮಿಸಲು ಸರ್ಕಾರದಿಂದ ಯಾವುದೇ ರೀತಿಯ ಹಣ ಬಿಡುಗಡೆಯಾಗಿಲ್ಲ. ಸ್ವತಃ ಸಿಬ್ಬಂದಿಗಳೇ ಶ್ರಮ ವಹಿಸಿ ಗ್ರಂಥಾಲಯವನ್ನು ಸ್ಥಾಪನೆ ಮಾಡಿದ್ದಾರೆ. ಧಾರವಾಡ ಕೇಂದ್ರೀಯ ಗ್ರಂಥಾಲಯದಿಂದ ಬುಕ್ ರ್ಯಾಕ್ ಗಳನ್ನು ತರಲಾಗಿದ್ದು, ಗದಗ-ಬೆಟಗೆರಿ ಸೇರಿ ಹಲವೆಡೆಯಿಂದ ಪುಸ್ತಕಗಳನ್ನು ತರಲಾಗಿದೆ.
ಡಿಸಿ ಕಚೇರಿ ಬಳಿಯಿದ್ದ ಕುರ್ಚಿಗಳನ್ನು ರಿಪೇರಿ ಮಾಡಿದ್ದ ಸಿಬ್ಬಂದಿಗಳು, ಓದುಗರಿಗೆ ಕುರ್ಚಿಗಳನ್ನು ನೀಡಿದ್ದಾರೆ. ಇದೀಗ ಗ್ರಂಥಾಲಯದಲ್ಲಿ ಒಮ್ಮೆಲೆ 30 ಮಂದಿ ಕೂರಬಹುದಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಸಿ ಮನೋಜ್ ಜೈನ್ ಅವರು, ತಮ್ಮ ತಮ್ಮ ಕೆಲಸಗಳಿಗಾಗಿ ಕಚೇರಿ ಬಳಿ ಬರುವ ಜನರು ಕೆಲವೊಮ್ಮೆ ಗಂಟೆಗಟ್ಟಲೆ ಕಾಯಬೇಕಾಗುತ್ತದೆ. ಈ ವೇಳೆ ರಸ್ತೆಗಳಲ್ಲಿ ಓಡಾಡಿಕೊಂಡು ಸಮಯವನ್ನು ವ್ಯರ್ಥ ಮಾಡುತ್ತಿರುತ್ತಾರೆ. ಹೀಗಾಗಿ ಜನರು ತಮ್ಮ ಸಮಯವನ್ನು ಸದುಪಯೋಗ ಮಾಡಿಕೊಳ್ಳಬೇಕೆಂಬ ಉದ್ದೇಶದೊಂದಿಗೆ ನಾವು ಗ್ರಂಥಾಲಯವನ್ನು ಸ್ಥಾಪನೆ ಮಾಡಿದ್ದೇವೆಂದು ಹೇಳಿದ್ದಾರೆ.
ಗ್ರಂಥಾಲಯದ ಸಿಬ್ಬಂದಿ ಮುತ್ತಣ್ಣ ಹೊಸಳ್ಳಿಯವರು ಮಾತನಾಡಿ, ಪ್ರತೀನಿತ್ಯ 40ಕ್ಕೂ ಹೆಚ್ಚು ಮಂದಿ ಗ್ರಂಥಾಲಯಕ್ಕೆ ಬರುತ್ತಾರೆ. ಗ್ರಂಥಾಲಯ ಸ್ಥಾಪನೆ ಕುರಿತ ಮಾಹಿತಿ ತಿಳಿಯುತ್ತಿದ್ದಂತೆಯೇ ಗ್ರಂಥಾಲಯಕ್ಕೆ ಬರುವ ಜನರ ಸಂಖ್ಯೆ ಕೂಡ ಹೆಚ್ಚಾಗಿದೆ. ದಿನ ಪತ್ರಿಕೆಗಳನ್ನು ಓದುವ ಸಲುವಾಗಿ ಕಚೇರಿಯ ಸಿಬ್ಬಂದಿಗಳೂ ಕೂಡ ಗ್ರಂಥಾಲಯಕ್ಕೆ ಬರುತ್ತಿರುತ್ತಾರೆ. ಕರ್ನಾಟಕದಲ್ಲಿಯೇ ಇದೊಂದು ಹೊಸ ಪ್ರಯೋಗ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


