ಬೆಂಗಳೂರು ವಿಶ್ವವಿದ್ಯಾನಿಲಯ, ಆರ್.ಜಿ.ಎಚ್.ಎಚ್.ಎಸ್ ಗೆ ನೂತನ ಉಪಕುಲಪತಿಗಳ ನೇಮಕ
ದೀರ್ಘ ಕಾಲದ ನಿರೀಕ್ಷೆ ಬಳಿಕ ಬೆಂಗಳೂರು ವಿಶ್ವವಿದ್ಯಾನಿಲ್ಲಯ ಹಾಗೂ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯಗಳಿಗೆ ಕೊನೆಗೂ ನೂತನ ಉಪಕುಲಪತಿಗಳ ನೇಮಕವಾಗಿದೆ.

Published On :
ಬೆಂಗಳೂರು: ದೀರ್ಘ ಕಾಲದ ನಿರೀಕ್ಷೆ ಬಳಿಕ ಬೆಂಗಳೂರು ವಿಶ್ವವಿದ್ಯಾನಿಲ್ಲಯ ಹಾಗೂ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯಗಳಿಗೆ ಕೊನೆಗೂ ನೂತನ ಉಪಕುಲಪತಿಗಳ ನೇಮಕವಾಗಿದೆ.
ವಿಶ್ವವಿದ್ಯಾನಿಲಯಗಳ ಕುಲಪತಿಗಳಾದ ರಾಜ್ಯಪಾಲ ವಜುಭಾಯಿ ವಾಲಾ ಮಂಗಳವಾರ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್ ವಿಶ್ವವಿದ್ಯಾನಿಲಯದ ಮಾಜಿ ಪ್ರಾಂಶುಪಾಲ ಕೆ ಆರ್ ವೇಣುಗೋಪಾಲ್ ಅವರನ್ನು ಬೆಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳನ್ನಾಗಿ, ಪ್ರಸ್ತುತ ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕರಾಗಿರುವ ಡಾ. ಸಚ್ಚಿದಾನಂದ ಅವರನ್ನು ಆರ್.ಜಿ.ಎಚ್.ಎಚ್.ಎಸ್ ನ ಉಪಕುಲಪತಿಗಳನ್ನಾಗಿಯೂ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಪ್ರೊಫೆಸರ್ ಈಶ್ವರ ಭಟ್ ಅವರು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯದ ನೂತನ ಉಪಕುಲಪತಿಗಳಾಗಿ ನೇಮಕವಾಗಿದ್ದಾರೆ.
ಡಾ. ಬಿ. ತಿಮ್ಮೇಗೌಡ ಅವರ ಅವಧಿ ಫೆಬ್ರವರಿ 6, 2017ರಂದು ಕೊನೆಗೊಂಡ ಬಳಿಕ ಬೆಂಗಳೂರು ವಿಶ್ವವಿದ್ಯಾನಿಲಯವು ಸುಮಾರು ಒಂದೂವರೆ ವರ್ಷಗಳ ಕಾಲ ಐದು ತಾತ್ಕಾಲಿಕ ವಿಸಿ ಗಳನ್ನು ಕಂಡಿತ್ತು.
ಇನ್ನು ಆರ್.ಕೆ.ಎಚ್.ಎಚ್.ಎಸ್ ನವಿಚಾರವಾಗಿ ಹೇಳುವುದಾದರೆ ಜುಲೈ 14, 2017ರಿಂದಲೂ ಇಲ್ಲಿನ ಉಪಕುಲಪತಿಗಳ ಹುದ್ದೆ ಖಾಲಿ ಉಳಿದಿತ್ತು. ಡಾ. ಕೆ ಎಸ್ ರವೀಂದ್ರನಾಥ್ ಅವರ ಸೇವಾವಧಿ ಪೂರ್ಣಗೊಂಡ ಬಳಿಕ ಯಾವುದೇ ಉಪಕುಲಪತಿಗಳ ನೇಮಕವಾಗಿರಲಿಲ್ಲ. ಬದಲಿಗೆ ಮೌಲ್ಯಮಾಪನ ರಿಜಿಸ್ಟರ್ ಆಗಿರುವ ಡಾ.ಎಂ. ಕೆ. ರಮೇಶ್, ಅವರನ್ನೇ ತಾತ್ಕಾಲಿಕ ವಿಸಿ ಆಗಿ ನೇಮಕ ಮಾಡಿ ಆದೇಶ ನೀಡಲಾಗಿತ್ತು.
ಬೆಂಗಳೂರು ವಿಶ್ವವಿದ್ಯಾನಿಲಯದ ನೂತನ ಉಪಕುಲಪತಿಗಳಾಗಿ ವೇಣುಗೋಪಾಲ್ ಮಂಗಳವಾರದಂದು ಅಧಿಕಾರ ಸ್ವೀಕರಿಸಿದ್ದು "ನಾನು ವಿಶ್ವವಿದ್ಯಾನಿಲಯದಗುಣಮಟ್ಟದ ಅಭಿವೃದ್ಧಿಯತ್ತ ಗಮನ ಹರಿಸುತ್ತೇನೆ ಮತ್ತು ಇದಾಗಲೇ ಬೆಂಗಳೂರು ವಿಶ್ವವಿದ್ಯಾನಿಲಯದೊಡನೆ ಸೇರಿ ಕಾರ್ಯಾಚರಿಸುತ್ತಿರುವ ಇನ್ನೆರಡು ವಿವಿಗಳ ಕಾರ್ಯಕ್ರಮಗಳಿಗೆ ಸಹಕಾರ ನೀಡುತ್ತೇನೆ" ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Bangalore UniversityVice-Chancellorಬೆಂಗಳೂರು ವಿಶ್ವವಿದ್ಯಾನಿಲಯಉಪಕುಲಪತಿRajiv Gandhi University of Health ScienceProf K R Venugopalರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


