ರಾಜ್ಯ

ಕುಣಿಗಲ್: ಧರ್ಮದರ್ಶಿಗಳ ಕಣ್ಣಿಗೆ ರಾಸಾಯನಿಕ ಎರಚಿ 13 ಲಕ್ಷ ದರೋಡೆ

ದೇವಾಲಯ ಧರ್ಮದರ್ಶಿಗಳು ಪ್ರಯಾಣಿಸುತ್ತಿದ್ದ ಕಾರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಕಾರಿನಲಿದ್ದ 13 ಲಕ್ಷ ಹಣ ಗಾಊ ಕಾರನ್ನೂ ಅಪಹರಿಸಿದ ಘಟನೆ ತುಮಕೂರಿನ ಕುಣಿಕಲ್ ನಲ್ಲಿ ನಡೆದಿದೆ.

ಕುಣಿಗಲ್: ಧರ್ಮದರ್ಶಿಗಳ ಕಣ್ಣಿಗೆ ರಾಸಾಯನಿಕ ಎರಚಿ 13 ಲಕ್ಷ ದರೋಡೆ
ಕುಣಿಗಲ್: ಧರ್ಮದರ್ಶಿಗಳ ಕಣ್ಣಿಗೆ ರಾಸಾಯನಿಕ ಎರಚಿ 13 ಲಕ್ಷ ದರೋಡೆ
Published On :
ಕುಣಿಗಲ್: ದೇವಾಲಯ ಧರ್ಮದರ್ಶಿಗಳು ಪ್ರಯಾಣಿಸುತ್ತಿದ್ದ ಕಾರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಕಾರಿನಲಿದ್ದ 13 ಲಕ್ಷ ಹಣ ಗಾಊ ಕಾರನ್ನೂ ಅಪಹರಿಸಿದ ಘಟನೆ ತುಮಕೂರಿನ ಕುಣಿಕಲ್ ನಲ್ಲಿ ನಡೆದಿದೆ.
ಕುಣಿಗಲ್ ಪಟ್ಟಣ ಸತ್ಯ ಶನೇಶ್ವರ ದೇವಸ್ಥಾನದ ಧರ್ಮದರ್ಶಿ ಧನಂಜಯಸ್ವಾಮಿ, ಕಾರಿನ ಚಾಲಕ ಶ್ರೀಧರ್ ಹಾಗೂ ಅವರೊಂದಿಗೆ ಇದ್ದ ನಯಾಜ್ ಎನ್ನುವವರ ಮೇಲೆ ದರೋಡೆಕೋರರು ದಾಳಿ ನಡೆಸಿದ್ದಾರೆ.
ಶನಿವಾರ ರಾತ್ರಿ 11ರ ವೇಳೆಗೆ ದೇವಸ್ಥಾನದಿಂದ ಹೊರಟ ಧನಂಜಯಸ್ವಾಮಿಮೇಲೆ ಈ ದಾಳಿ ನಡೆದಿದೆ.  ಭಕ್ತರ ಸೋಗಿನಲ್ಲಿ ಬಂದ 6 ಮಂದಿ ದುಷ್ಕರ್ಮಿಗಳು ಕಾರನ್ನು ತಡೆದು 'ನಾವು ಹೊಸ ಕಾರ್ ಖರೀದಿಸಿದ್ದೇವೆ, ಪೂಜೆ ಮಾಡಿಸಬೇಕು’ಎಂದು ಮನವಿ ಮಾಡಿದ್ದಾರೆ.
ತಮ್ಮ ಕಾರಿನಿಂದ ಇಳಿದ ಧನಂಜಯಸ್ವಾಮಿ ಮುಖಕ್ಕೆ ರಾಸಾಯನಿಕ ಎರಚಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಮತ್ತು ಕಾರಿನಲ್ಲಿದ್ದ 13 ಲಕ್ಷ ಹಾಗೂ ಎಸ್‍ಯುವಿ ಕಾರ್ ದರೋಡೆ ಮಾಡಿದ್ದಾರೆ.
ಹಲ್ಲೆಗೊಳಗಾದ ಧರ್ಮದರ್ಶಿಗಳು ಮಾರ್ಗದಲ್ಲಿ ಸಿಕ್ಕಿದ ಬೇರೆ ವಾಹನವೇರಿ ಬೆಂಗಳೂರಿಗೆ ಬಂದಿದ್ದು ಅಲ್ಲಿನ ಖಾಸಗಿ ಅಸ್ಪತ್ರೆಗೆ ದಾಖಲಾಗಿದ್ದಾರೆ.
ಘಟನೆ ವೇಳೆ ಕಾರಿನಲ್ಲಿದ್ದ ಚಾಲಕ ಶ್ರೀಧರ್ ಮತ್ತು ನಯಾಜ್ ಅವರ ಮೇಲೆ ಸಹ ಹಲ್ಲೆ ನಡೆದಿದ್ದು ದುಷ್ಕರ್ಮಿಗಳು ಅವರನ್ನು ಕಾರಿನ ಸಮೇತ ಅಪಹರಣ ನಡೆಸಿ ಬೇಳೂರು ಕ್ರಾಸ್ ಬಳಿ ಬಿಟ್ಟು ಪರಾರಿಯಾಗಿದ್ದಾರೆ.
ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.