ಬಹುನಿರೀಕ್ಷಿತ ಬೆಂಗಳೂರು-ಕೊಯಮ್ಮತ್ತೂರು ಡಬಲ್ ಡೆಕ್ಕರ್ ಎಕ್ಸ್ ಪ್ರೆಸ್ ರೈಲು ನಾಳೆಯಿಂದ ಸಂಚಾರ!
ಬೆಂಗಳೂರು-ಕೊಯಮ್ಮತ್ತೂರು ನಡುವಿನ ಡಬಲ್ ಡೆಕ್ಕರ್ ಎಕ್ಸ್ ಪ್ರೆಸ್ ರೈಲಿಗೆ ರಾಜ್ಯ ರೈಲ್ವೆ ಸಚಿವ ರಾಜೇನ್ ಗೋಹೈನ್ ಉದ್ಘಾಟಿಸಿದ್ದು ನಾಳೆ ಮಧ್ಯಾಹ್ನದಿಂದ ರೈಲು ಸಂಚಾರ ಆರಂಭಿಸಲಿದೆ...

Published On :
ಬೆಂಗಳೂರು: ಬೆಂಗಳೂರು-ಕೊಯಮ್ಮತ್ತೂರು ನಡುವಿನ ಡಬಲ್ ಡೆಕ್ಕರ್ ಎಕ್ಸ್ ಪ್ರೆಸ್ ರೈಲಿಗೆ ರಾಜ್ಯ ರೈಲ್ವೆ ಸಚಿವ ರಾಜೇನ್ ಗೋಹೈನ್ ಉದ್ಘಾಟಿಸಿದ್ದು ನಾಳೆ ಮಧ್ಯಾಹ್ನದಿಂದ ರೈಲು ಸಂಚಾರ ಆರಂಭಿಸಲಿದೆ.
ಕೆಎಸ್ಆರ್ ಬೆಂಗಳೂರು-ಕೊಯಮ್ಮತ್ತೂರು ಉದಯ್ ಎಕ್ಸ್ ಪ್ರೆಸ್ ರೈಲು ಕೆಎಸ್ಆರ್ ಬೆಂಗಳೂರು ರೈಲು ನಿಲ್ದಾಣದಿಂದ ಮಧ್ಯಾಹ್ನ 2.15ಕ್ಕೆ ಹೊರಟು ರಾತ್ರಿ 9 ಗಂಟೆಗೆ ಕೊಯಮ್ಮತ್ತೂರಿಗೆ ಸೇರಲಿದೆ. ಸೋಮವಾರ ಬಿಟ್ಟು ಪ್ರತಿದಿನ ರೈಲು ಸಂಚಾರ ನಡೆಸಲಿದೆ.
ಕೊಯಮ್ಮತ್ತೂರಿನಲ್ಲಿ ಇಂದು ಉದ್ಘಾಟನೆಗೊಂಡಿರುವ ಉದಯ್ ಎಕ್ಸ್ ಪ್ರೆಸ್ ರೈಲು ಬೆಳಗ್ಗೆ 10.30ರ ಸುಮಾರಿಗೆ ಕೊಯಮ್ಮತ್ತೂರಿಂದ ಹೊರಟ್ಟಿದ್ದು ಸಂಜೆ 5.20ರ ಸುಮಾರಿಗೆ ಬೆಂಗಳೂರಿಗೆ ಬಂದು ತಲುಪಲಿದೆ. ಈ ರೈಲು ತಿರುಪುರ್, ಇರೋಡ್, ಸೇಲಂ, ಕುಪ್ಪಂ ಮತ್ತು ಕೃಷ್ಣರಾಜಪುರದಲ್ಲಿ ನಿಲ್ಲಲಿದೆ.
ಸೋಮವಾರ ರೈಲು ಸಂಚಾರ ಇಲ್ಲದಿರುವುದರಿಂದ ಜೂನ್ 10ರಿಂದ ರೈಲು ಬೆಳಗ್ಗೆ 5.45ಕ್ಕೆ ಹೊರಡಲಿದ್ದು ಮಧ್ಯಾಹ್ನ 12.40ಕ್ಕೆ ಬೆಂಗಳೂರಿನ ಕೆಎಸ್ಆರ್ ರೈಲು ನಿಲ್ದಾಣಕ್ಕೆ ಬಂದು ತಲುಪಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಬೆಂಗಳೂರುBengaluruCoimbatoredouble deckerಡಬಲ್ ಡೆಕ್ಕರ್Rajen GohainUday Express Trainಉದಯ್ ಎಕ್ಸ್ ಪ್ರೆಸ್ ರೈಲುಕೊಯಮ್ಮತ್ತೂರುರಾಜೇನ್ ಗೋಹೈನ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


