ರಾಜ್ಯ

ಬೆಂಗಳೂರಿನಲ್ಲಿ 41 ಚಿಕುನ್ ಗುನ್ಯಾ, 368 ಡೆಂಗ್ಯು ಪ್ರಕರಣಗಳು ವರದಿ

ಈ ವರ್ಷ ನಗರದಲ್ಲಿ 368 ಡೆಂಗ್ಯು ಹಾಗೂ 41 ಚಿಕುನ್ ಗುನ್ಯಾ ಪ್ರಕರಣಗಳು ದೃಢಪಟ್ಟಿವೆ...

ಬೆಂಗಳೂರಿನಲ್ಲಿ 41 ಚಿಕುನ್ ಗುನ್ಯಾ, 368 ಡೆಂಗ್ಯು ಪ್ರಕರಣಗಳು ವರದಿ
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ಈ ವರ್ಷ ನಗರದಲ್ಲಿ 368 ಡೆಂಗ್ಯು ಹಾಗೂ 41 ಚಿಕುನ್ ಗುನ್ಯಾ ಪ್ರಕರಣಗಳು ದೃಢಪಟ್ಟಿವೆ. ಮುಂಗಾರು ಮಳೆ ಮುಗಿಯುವ ಹೊತ್ತಿಗೆ ಈ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಸೋಂಕು ಜ್ವರಗಳ ಸಂಖ್ಯೆ ಕಡಿಮೆಯಾಗಿದೆ.

ಬೆಂಗಳೂರು ಪೂರ್ವದಲ್ಲಿ ಅತಿ ಹೆಚ್ಚು ಡೆಂಗ್ಯು ಪೀಡಿತರ ಸಂಖ್ಯೆ ವರದಿಯಾಗಿದ್ದು 142 ರೋಗಿಗಳಿಗೆ ಪತ್ತೆಯಾಗಿದೆ. ಬೆಂಗಳೂರು ದಕ್ಷಿಣದಲ್ಲಿ 18 ಚಿಕುನ್ ಗುನ್ಯಾ ಪ್ರಕರಣಗಳು ವರದಿಯಾಗಿವೆ.

ಬಿಬಿಎಂಪಿಯ ಸಾರ್ವಜನಿಕ ಆರೋಗ್ಯ ಇಲಾಖೆಯ ಮುಖ್ಯ ವೈದ್ಯಾಧಿಕಾರಿ ಡಾ ಎಂಎನ್ ಲೋಕೇಶ್, ನಗರದಲ್ಲಿ ಪ್ರತಿ ವಾರ್ಡ್ ಗೆ ಮೂವರು ಸೊಳ್ಳೆ ನಿಯಂತ್ರಿತ ಗ್ಯಾಂಗ್ ಮೆನ್ ಗಳಿದ್ದು ಅವರು ಮದ್ದು ಸಿಂಪಡಣೆ ಮಾಡುವ, ನಿಂತ ನೀರು ಇರುವ ಪ್ರದೇಶಗಳಲ್ಲಿ ಮೀನುಗಳನ್ನು ಹಾಕುವ ಕೆಲಸದಲ್ಲಿ ತೊಡಗಿದ್ದಾರೆ. ವೆಕ್ಟರ್ ಹರಡುವ ರೋಗಗಳು ವರದಿಯಾದ ಆಸ್ಪತ್ರೆಗಳ ಸಂಖ್ಯೆ ಕಳೆದ ವರ್ಷಕ್ಕಿಂತ ಜಾಸ್ತಿಯಾಗಿದೆ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.