ಬೆಳಗಾವಿ: ಪ್ರವಾಹಕ್ಕೆ ಕೊಚ್ಚಿ ಹೋಗಿ ವ್ಯಕ್ತಿ ಸಾವು
ಮರದಡಿಯಲ್ಲಿ ನಿಂತಿದ್ದ ವ್ಯಕ್ತಿ ಪ್ರವಾಹಕ್ಕೆ ಕೊಚ್ಚಿ ಹೋಗಿರುವ ಘಟನೆ ಬೆಳಗಾವಿ ನಗರದ ...

ಬೆಳಗಾವಿ: ಮರದಡಿಯಲ್ಲಿ ನಿಂತಿದ್ದ ವ್ಯಕ್ತಿ ಪ್ರವಾಹಕ್ಕೆ ಕೊಚ್ಚಿ ಹೋಗಿರುವ ಘಟನೆ ಬೆಳಗಾವಿ ನಗರದ ಹೊರವಲಯದಲ್ಲಿ ನಡೆದಿದೆ. ಭೂತರಾಮನಹಟ್ಟಿ ಸಮೀಪ ಈ ಘಟನೆ ನಡೆದಿದ್ದು ಬೆಳಗಾವಿ ನಗರದಿಂದ 18 ಕಿಲೋ ಮೀಟರ್ ದೂರದಲ್ಲಿದೆ.
ಹುಕ್ಕೇರಿ ತಾಲ್ಲೂಕಿನ ಕೋಟಬಾಗಿ ಸಮೀಪ ಬೈಕ್ ನಲ್ಲಿ ಹೋಗುತ್ತಿದ್ದ ಅಮೀರ್ ಮತ್ತು ಇಮ್ರಾನ್ ಎಂಬ ಸೋದರರು ಮಳೆ ಜೋರಾಗಿ ಸುರಿಯುತ್ತಿದೆ ಎಂದು ಕಾಕಟಿ ಗ್ರಾಸ್ ಸಮೀಪ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಮರದಡಿಯಲ್ಲಿ ನಿಂತಿದ್ದರು. ಭೂತರಾಮಹಟ್ಟಿ ಪರ್ವತದ ಮೇಲ್ಭಾಗದಲ್ಲಿ ಭಾರೀ ಮಳೆಯಿಂದಾಗಿ ಹೆದ್ದಾರಿಯಲ್ಲಿ ಮೇಲಿನಿಂದ ರಭಸವಾಗಿ ನೀರು ಹರಿದು ಬರುತ್ತಿತ್ತು. ರಸ್ತೆ ಬದಿಯಲ್ಲಿ ನೀರು ಸೊಂಟದ ಭಾಗದವರೆಗೆ ಬರುತ್ತಿದ್ದಂತೆ ಸೋದರರು ಮರ ಹತ್ತಿದರು. ಆದರೆ ಇಮ್ರಾನ್ ಜಾರಿ ಕೆಳಗೆ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇಮ್ರಾನ್ ನನ್ನು ರಕ್ಷಿಸಲು ಸ್ಥಳೀಯರು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ.
ಅಮೀರ್ ನನ್ನು ಸ್ಥಳೀಯರು ಮತ್ತು ಪೊಲೀಸರು ರಕ್ಷಿಸಿದರು. ನೀರಿನ ಮಟ್ಟ ತಗ್ಗಿದ ನಂತರ ಇಮ್ರಾನ್ ನ ಶವ ಹೆದ್ದಾರಿ ಸಮೀಪ ಪತ್ತೆಯಾಯಿತು.ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನು ನಿಲ್ಲಿಸಲು ಕೈ ತೋರಿಸಿದರೂ ಯಾರೂ ನಿಲ್ಲಿಸಲಿಲ್ಲ. ಸಮಯಕ್ಕೆ ಸರಿಯಾಗಿ ವಾಹನ ಸಿಕ್ಕಿ ಹಗ್ಗ ನೀಡಿ ಸೋದರರನ್ನು ಕಾಪಾಡಬಹುದಾಗಿತ್ತು, ಸಹಾಯ ಮಾಡುವ ಬದಲು ಹಲವರು ವಿಡಿಯೊ ಮಾಡಿಕೊಂಡು ನಿಂತರು. ಕೊನೆಗೆ ಯಾರೋ ಸಹಾಯಕ್ಕೆ ಬಂದಾಗ ಸಮಯ ಮೀರಿ ಹೋಗಿತ್ತು. ನಮಗೆ ಒಬ್ಬನನ್ನು ಮಾತ್ರ ಕಾಪಾಡಲಾಯಿತು ಎನ್ನುತ್ತಾರೆ ಸ್ಥಳೀಯ ಪ್ರತ್ಯಕ್ಷದರ್ಶಿಗಳು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


