ಚಂದ್ರ ಗ್ರಹಣ: ರಕ್ತಕಾರಿ ಸಾಯುತ್ತೀರಾ, ಜ್ಯೋತಿಷಿ ಮಾತು ಕೇಳಿ ರಾತ್ರೋರಾತ್ರಿ ಗ್ರಾಮ ತೊರೆದ 60 ಕುಟುಂಬ!
ಈ ಶತಮಾನದ ಸುದೀರ್ಘ ಚಂದ್ರ ಗ್ರಹಣ ಇಂದು ಸಂಭವಿಸುತ್ತಿದ್ದು ಇಂದಿನ ಚಂದ್ರ ಗ್ರಹಣದಿಂದ ಗ್ರಾಮದಲ್ಲಿ ಕೇಡು ಸಂಭವಿಸುತ್ತದೆ ಎಂದು ಜ್ಯೋತಿಷಿ...

Published On :
ಚಿಕ್ಕಮಗಳೂರು: ಈ ಶತಮಾನದ ಸುದೀರ್ಘ ಚಂದ್ರ ಗ್ರಹಣ ಇಂದು ಸಂಭವಿಸುತ್ತಿದ್ದು ಇಂದಿನ ಚಂದ್ರ ಗ್ರಹಣದಿಂದ ಗ್ರಾಮದಲ್ಲಿ ಕೇಡು ಸಂಭವಿಸುತ್ತದೆ ಎಂದು ಜ್ಯೋತಿಷಿ ಹೇಳಿದ್ದರಿಂದ 60ಕ್ಕೂ ಹೆಚ್ಚು ಕುಟುಂಬಗಳು ರಾತ್ರೋರಾತ್ರಿ ಗ್ರಾಮವನ್ನೇ ತೊರೆದು ಹೊಲಸೆ ಹೋಗಿವೆ.
ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ಬಾಳೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಚಂದ್ರ ಗ್ರಹಣ ವೇಳೆ ನೀವು ಗ್ರಾಮವನ್ನು ತೊರೆಯದಿದ್ದರೆ ರಕ್ತಕಾರಿ ಸಾಯುತ್ತೀರಾ ಎಂದು ಹೆದರಿಸಿದ್ದರಿಂದ 60ಕ್ಕೂ ಹೆಚ್ಚು ಕುಟುಂಬಗಳು ತಾವು ಸಾಕಿದ್ದ ಜಾನುವಾರುಗಳನ್ನು ಬಿಟ್ಟು ರಾತ್ರೋರಾತ್ರಿ ಗ್ರಾಮವನ್ನು ತೊರೆದ್ದು ಗುಳೆ ಹೊರಟು ಹೋಗಿದ್ದಾರೆ.
ಕೇರಳ ಮೂಲದ ಜ್ಯೋತಿಷಿಯೊಬ್ಬ ಈ ರೀತಿ ಹೆದರಿಸಿದ್ದಾನೆ ಎಂದು ತಿಳಿದುಬಂದಿದೆ. ಇನ್ನು ತಾವು ಮತ್ತೆಂದು ಈ ಗ್ರಾಮಕ್ಕೆ ಬರದಿರಲು ಗ್ರಾಮಸ್ಥರು ನಿರ್ಣಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


