ಕರ್ನಾಟಕ: ರಾಜ್ಯದ ವಿವಿಧೆಡೆ ಎಸಿಬಿ ದಾಳಿ: ಕೋಟಿ ಮೌಲ್ಯದ ನಗದು, ಆಸ್ತಿ ಪತ್ತೆ
ಇಬ್ಬರು ರಾಜ್ಯ ಸರ್ಕಾರಿ ಅಧಿಕಾರಿಗಳ ನಿವಾಸದ ಮೇಲೆ ಭರಷ್ಟಾಚಾರ ನಿಗ್ರಹ ದಳ (ಎಸಿಬಿ) ನಡೆಸಿದ ದಾಳಿಯಲ್ಲಿ ಕೋಟಿಗಳ ಮೌಲ್ಯದ ಆಸ್ತಿ, ನಗದು ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ.

Published On :
ಬೆಂಗಳೂರು: ಇಬ್ಬರು ರಾಜ್ಯ ಸರ್ಕಾರಿ ಅಧಿಕಾರಿಗಳ ನಿವಾಸದ ಮೇಲೆ ಭರಷ್ಟಾಚಾರ ನಿಗ್ರಹ ದಳ (ಎಸಿಬಿ) ನಡೆಸಿದ ದಾಳಿಯಲ್ಲಿ ಕೋಟಿಗಳ ಮೌಲ್ಯದ ಆಸ್ತಿ, ನಗದು ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ.
ಕರ್ನಾಟಕದ ಉದ್ಯೋಗ ಮಿತ್ರದ ಜಂಟಿ ನಿರ್ದೇಶಕ ಮತ್ತು ಸಾರ್ವಜನಿಕ ಮಾಹಿತಿ ಅಧಿಕಾರಿಯಾದ ಎಚ್ ಎಂ ರೆವಣ್ಣ ಗೌಡ ಅವರಿಗೆ ಸೇರಿದ್ದ ಬೆಂಗಳೂರು ನಗರದಲ್ಲಿನ ಎರಡು ವಸತಿ ಕಟ್ಟಡಗಳು, ಎರಡು ವಸತಿ ಸ್ಥಳಗಳು, ಮೂರು ಕೈಗಾರಿಕಾ ಪ್ರದೇಶಗಳು ಮತ್ತು ನಾಲ್ಕು ಎಕರೆ ಕೃಷಿ ಭೂಮಿಯನ್ನು ಪತ್ತೆಹಚ್ಚಿರುವುದಾಗಿ ಎಸಿಬಿ ಪ್ರಕಟಣೆ ತಿಳಿಸಿದೆ.
ಇಷ್ಟೇ ಅಲ್ಲದೆ ದಾಳಿಯ ವೇಳೆ ಗೌಡ ಅವರಿಗೆ ಸೇರಿದ್ದ 1.5 ಕೆಜಿ ಚಿನ್ನ, 17.5 ಕೆಜಿ ಬೆಳ್ಳಿ, 12 ಲಕ್ಷ ನಗದು, 3 ಕಾರುಗಳು, 3 ದ್ವಿಚಕ್ರ, ಬ್ಯಾಂಕ್ ಬ್ಯಾಲನ್ಸ್, ಠೇವಣಿಗಳ ರೂಪದ ನಾಲ್ಕು ಕೋಟಿ ರು., ಅಲ್ಲದೆ 26 ಲಕ್ಷ ರೂ ಮೌಲ್ಯದ ಪೀಠೋಪಕರಣಗಳನ್ನು ಹೊಂದಿರುವುದು ತಿಳಿದುಬಂದಿದೆ.
ಕಲಬುರ್ಗಿಯಲ್ಲಿ ಆರೋಗ್ಯ ಶಿಕ್ಷಣಾಧಿಕಾರಿಯಾಗಿರುವ ದೇವೇಂದ್ರ ಅವರ ನಿವಾಸದ ಮೇಲೆ ನಡೆದ ದಾಳಿಯಲ್ಲಿ ಎರಡು ಮನೆಗಳು, ಐದು ಸೈಟ್ ಗಳು, 10.37 ಎಕರೆ ಭೂಮಿ, 222 ಗ್ರಾಂ ಚಿನ್ನ, 2.112 ಕೆಜಿ ಬೆಳ್ಳಿ, ಒಂದು ಕಾರು, ಎರಡು ದ್ವಿಚಕ್ರ ವಾಹನ, 2 ಲಕ್ಷ ಫಿಕ್ಸೆಡ್ ಡೆಪಾಸಿಟ್ ಹಾಗೂ 23.77 ಲಕ್ಷ ಮೌಲ್ಯದ ಪೀಠೋಪಕರಣವನ್ನು ಎಸಿಬಿ ಪತ್ತೆ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


