ಬೆಂಗಳೂರು: ಪಾರ್ಕಿಂಗ್ ಗಾಗಿ ಜಗಳ, ಉದ್ಯಮಿಯಿಂದ ಗಾಳಿಯಲ್ಲಿ ಗುಂಡು
ಪಾರ್ಕಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಉಂಟಾದ ವಾಗ್ವಾದದ ವೇಳೆ ಉದ್ಯಮಿಯೊಬ್ಬರು ಗಾಳಿಯಲ್ಲಿ ಗುಂಡು ಹಾರಿಸಿ ಕ್ಯಾಬ್ ಚಾಲಕನೊಬ್ಬರಿಗೆ ಜೀವ ಬೆದರಿಕೆ ಹಾಕಿರುವ ಘಟನೆ ....

Published On :
ಬೆಂಗಳೂರು: ಪಾರ್ಕಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಉಂಟಾದ ವಾಗ್ವಾದದ ವೇಳೆ ಉದ್ಯಮಿಯೊಬ್ಬರು ಗಾಳಿಯಲ್ಲಿ ಗುಂಡು ಹಾರಿಸಿ ಕ್ಯಾಬ್ ಚಾಲಕನೊಬ್ಬರಿಗೆ ಜೀವ ಬೆದರಿಕೆ ಹಾಕಿರುವ ಘಟನೆ ಬೆಂಗಳೂರಿನ ಹೆಬ್ಬಾಳದ ಕೆಂಪಣ್ಣ ಗಾರ್ಡನ್ ನಲ್ಲಿ ನಡೆದಿದೆ.
ಬೇಕರಿ ಉದ್ಯಮಿ ಸಂಜೀವ್ ಸಕ್ಸೇನಾ (42) ಪಾರ್ಕಿಂಗ್ ವಿಚಾರವಾಗಿ ನಡೆದ ಜಗಳದ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.. ಇದರಿಂದ ಅಕ್ಕಪಕ್ಕದ ಮನೆಯವರಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದ್ದು ಅವರು ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ಪೋಲೀಸರು ಸಕ್ಸೇನಾ ಅವರನ್ನು ಬಂಧಿಸಿದ್ದಾರೆ.
ಸಕ್ಸೇನಾ ಅವರು ಭಾನುವಾರ ರಾತ್ರಿ 10.40 ರ ವೇಳೆಗೆ ಕೆಲಸದಿಂದ ಮರಳಿದಾಗ ತನ್ನ ಕಾರಿಗೆ ಪಾರ್ಕಿಂಗ್ ಜಾಗ ನಿಡುವಂತೆ ಪಕ್ಕದ ಮನೆಯ ಟ್ಯಾಕ್ಸಿ ಚಾಲಕ ರವಿಕುಮಾರ್ ಗೆ ಕೇಳಿದ್ದಾರೆ. ಆದರೆ ರವಿಕುಮಾರ್ ಅದಕ್ಕೆ ನಿರಾಕರಿಸಿದ್ದು ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ ಎಂದು ಪೋಲೀಸರು ತಿಳಿಸಿದ್ದಾರೆ.
ಮನೆ ಎದುರಿಗೆ ಕಾರು ನಿಲ್ಲಿಸುವ ವಿಚಾರದಲಿ ಇಬ್ಬರಿಗೂ ಆಗಾಗ ಜಗಳವಾಗುತ್ತಿತ್ತು. ಅಂತೆಯೇ ಭಾನುವಾರವೂ ಜಗಳವಾಗಿದ್ದು ರವಿಇಕುಮಾರ್ ಉದ್ಯಮಿಯ ಕತ್ತಿನಲ್ಲಿರುವ ಚಿನ್ನದ ಸರ ಕಿತ್ತುಕೊಂಡಿದ್ದಾನೆ. ಆಗ ಕುಪಿತರಾದ ಸಂಜೀವ್ ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿದ್ದಾರೆ.ಇದರಿಂದ ಗಾಬರಿಗೊಂಡ ರವಿಕುಮಾರ್ ಪೋಲೀಸರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕಾಗಮಿಸಿದ ಹೆಬ್ಬಾಳ ಪೋಲೀಸರು ಸಂಜೀವ್ ಹಾಗು ರವಿಕುಮಾರ್ ವರನ್ನು ಬಂಧಿಸಿದ್ದಾರೆ. ಸಂಜೀವ್ ಮೇಲೆ ಜೀವ ಬೆದರಿಕೆ ಪ್ರಕರಣ ದಾಖಲಾದರೆ ರವಿಕುಮಾರ್ ಮೇಲೆ ಸರ ಅಪಹರಣ ಕೇಸ್ ಹಾಕಲಾಗಿದೆ. ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾಗಿ ಪೋಲೀಸರು ಮಾಹಿತಿ ನಿಡಿದ್ದಾರೆ.
20 ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ ಸಂಜೀವ್ ಬೇಕರಿ ಉದ್ಯಮ ನಡೆಸುತ್ತಿದ್ದಾರೆ. ಇವರು ಪರವಾನಗಿ ಇರುವ ಪಿಸ್ತೂಲ್ ಹೊಂದಿದ್ದಾರೆ.ಎಂದು ಪೋಲೀಸರು ವಿವರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


