ಭಯೋತ್ಪಾದಕರ ಬಿಡುಗಡೆ: ಎಚ್.ಡಿ. ಕುಮಾರಸ್ವಾಮಿಗೆ ಪಂಜಾಬ್ ಸಿಎಂ ಪತ್ರ
ಉಗ್ರ ಗುರುದೀಪ್ ಸಿಂಗ್ ಖೇರಾ ಅಕಾಲಿಕ ಬಿಡುಗಡೆ ಸಂಬಂಧ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಸಿ.ಎಂ ಎಚ್.ಡಿ ಕುಮಾರ ಸ್ವಾಮಿ ಅವರಿಗೆ ಪತ್ರ ...

Published On :
ಚಿತ್ರದುರ್ಗ: ಉಗ್ರ ಗುರುದೀಪ್ ಸಿಂಗ್ ಖೇರಾ ಅಕಾಲಿಕ ಬಿಡುಗಡೆ ಸಂಬಂಧ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಸಿ.ಎಂ ಎಚ್.ಡಿ ಕುಮಾರ ಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ.
ಖೇರಾ ಒಳ್ಳೆಯ ನಡತೆಯನ್ನು ಪರಿಗಣಿಸಿ ಅನುಕಂಪದ ಮೇಲೆ ಆತನನ್ನು ಬಿಡುಗಡೆ ಮಾಡಲಾಗಿದೆ, ಸದ್ಯ ಆತನನ್ನು ಪಂಜಾಬ್ ಅಮೃತಸರ ಕೇಂದ್ರೀಯ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ.2015 ರಲ್ಲಿ ಅತನನ್ನು ಅಲ್ಲಿಗೆ ಸ್ಥಳಾಂತರಿಸಲಾಗಿತ್ತು.
ದೆಹಲಿ ಮತ್ತು ಬೀದರ್ ನಲ್ಲಿ ನಡೆದ ಎರಡು ಸ್ಫೋಟ ಪ್ರಕರಣ ಸಂಬಂಧ ಟಾಡಾ ಕಾಯ್ದೆಯ ವಿವಿಧ ಐಪಿಸಿ ಸೆಕ್ಷನ್ ಅನುಸಾರ ಬಂತಾ ಸಿಂಗ್ ಪುತ್ರ ಗುರ್ದೀಪ್ ಸಿಂಗ್ ಅಲಿಯಾಸ್ ದೀಪ್ ಕಳೆದ 25 ವರ್ಷಗಳಿಂದ ಶಿಕ್ಷೆ ಅನುಭವಿಸುತ್ತಿದ್ದು, ಕಾರಾಗೃಹ ಇಲಾಖೆಯ ಜೊತೆ ಚರ್ಚಿಸಿ ಆತನ ಬಿಡುಗಡೆ ಸಂಬಂಧ ಮರು ಪರಿಶೀಲನೆ ನಡೆಸಬೇಕು ಎಂದು ಪತ್ರದಲ್ಲಿ ಬರೆದಿದ್ದಾರೆ.
55 ವರ್ಷದ ಖೇರಾ 1990 ರಿಂದ 2015ರ ವರೆಗೆ ಕಲಬುರಗಿ ಜೈಲಿನಲ್ಲಿದ್ದ, ಆತ ಪಂಜಾಬಿನ ಅಮೃತಸರ ಜಿಲ್ಲೆಯ ರಯ್ಯಾ ಗ್ರಾಮದವನಾಗಿದ್ದಾನೆ.
2016ರ ಏಪ್ರಿಲ್ ನಲ್ಲಿ ಆತ ಆರು ವಾರಗಳ ಕಾಲ ಪೆರೋಲ್ ಮೇಲೆ ಬಿಡುಗಡೆಯಾಗಿದ್ದ. ಆತನ ವಿರುದ್ಧ 1996ರಲ್ಲಿ ನಡೆದ ದೆಹಲಿ ಮತ್ತು ಕರ್ನಾಟಕದ ಬೀದರ್ ನಲ್ಲಿ ನಡೆದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಗುರುದೀಪ್ ವಿರುದ್ಧ ಟಾಡಾ ಕೇಸು ದಾಖಲಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
H D Kumaraswamymilitantಉಗ್ರಎಚ್.ಡಿ ಕುಮಾರ ಸ್ವಾಮಿAmarinder Singhಅಮರಿಂದರ್ ಸಿಂಗ್Gurdeep Singh KheraAmritsar Central Jailಗುರುದೀಪ್ ಸಿಂಗ್ ಖೇರಾಅಮೃತಸರ ಕೇಂದ್ರೀಯ ಕಾರಾಗೃಹ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


