ರಾಜ್ಯ

ಮೂರು ವರ್ಷಗಳಲ್ಲಿ ರಾಷ್ಟ್ರಪತಿ ಭವನದ ಉದ್ಯಾನಗಳ ನಿರ್ವಹಣೆಗೆ ತಗುಲಿದ ವೆಚ್ಚ ಎಷ್ಟು ಗೊತ್ತಾ?

ದೆಹಲಿಯ ರಾಷ್ಟ್ರಪತಿ ಭವನ ಕಣ್ಮನ ಸೆಳೆಯುವ ಉದ್ಯಾನವನ್ನು ಹೊಂದಿದೆ. ಇದು ಹಲವು ಪ್ರವಾಸಿಗರ ಮನಸೂರೆಗೊಳ್ಳುತ್ತದೆ ಎನ್ನುವುದು ಸತ್ಯ.

ಮೂರು ವರ್ಷಗಳಲ್ಲಿ ರಾಷ್ಟ್ರಪತಿ ಭವನದ ಉದ್ಯಾನಗಳ ನಿರ್ವಹಣೆಗೆ ತಗುಲಿದ ವೆಚ್ಚ ಎಷ್ಟು ಗೊತ್ತಾ?
ಮೂರು ವರ್ಷಗಳಲ್ಲಿ ರಾಷ್ಟ್ರಪತಿ ಭವನದ ಉದ್ಯಾನಗಳ ನಿರ್ವಹಣೆಗೆ ತಗುಲಿದ ವೆಚ್ಚ ಎಷ್ಟು ಗೊತ್ತಾ?
Published On :
ಬೆಳಗಾವಿ: ದೆಹಲಿಯ ರಾಷ್ಟ್ರಪತಿ ಭವನ ಕಣ್ಮನ ಸೆಳೆಯುವ ಉದ್ಯಾನವನ್ನು ಹೊಂದಿದೆ. ಇದು ಹಲವು ಪ್ರವಾಸಿಗರ ಮನಸೂರೆಗೊಳ್ಳುತ್ತದೆ ಎನ್ನುವುದು ಸತ್ಯ. ಆದರೆ ಇದೇ ಉದ್ಯಾನಗಳ ನಿರ್ವಹಣೆಗಾಗಿ ಕೋಟಿ ಕೋಟಿ ರು. ವೆಚ್ಚವಾಗುತ್ತದೆ ಎನ್ನುವುದು ಸಹ ಸತ್ಯ.
ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಪಡೆಯಲಾದ ವಿವರ ಆಧಾರದಲ್ಲಿ ರಾಷ್ಟ್ರಪತಿ ಭವನ ಆವರಣದಲ್ಲಿರುವ ಉದ್ಯಾನಗಳ ನಿರ್ವಹಣೆಗೆ ಕಳೆದ ಮೂರು ವರ್ಷಗಳಲ್ಲಿ  12.70 ಕೋಟಿ ರೂ. ವೆಚ್ಚ ಮಾಡಲಾಗಿದೆ. ಬೆಳಗಾವಿಯ ಅನುಭವಿ ಆರ್ ಟಿಐ ಕಾರ್ಯಕರ್ತನಾದ ಭೀಮಪ್ಪ ಗಡದ ಸಲ್ಲಿಸಿದ್ದ ಅರ್ಜಿಗೆ ದೊರಕಿರುವ ಪ್ರತಿಕ್ರಿಯೆಯಲ್ಲಿ {ಮೇ 22, 2018 ರ ದಿನಾಂಕ} ಕಳೆದ ಮೂರು ವರ್ಷಗಳಿಂದ ಉದ್ಯಾನವ ನಿರ್ವಹಣೆ ಖರ್ಚು ವೆಚ್ಚಗಳ ಮಾಹಿತಿ ಒದಗಿಸಲಾಗಿದೆ.
ಉದ್ಯಾನಗಳ ನಿರ್ವಹಣೆಗಾಗಿ 12.70 ಕೋಟಿ ರೂ. ಖರ್ಚು ಮಾಡಿದ್ದರೆ, ಉದ್ಯಾನ ಸಾಮಗ್ರಿಗಳಿಗಾಗಿ 1.46 ಕೋಟಿ ರೂ. ವೆಚ್ಚವಾಗಿದೆ.ಫೆಬ್ರವರಿ 2018 ರಲ್ಲಿ ರಾಷ್ಟ್ರಪತಿ ಭವನದಲ್ಲಿ ತೋಟದ ಕೆಲಸ ಮಾಡುವವರಿಗಾಗಿ 72 ಲಕ್ಷ ವೇತನ ಪಾವತಿ ಮಾಡಲಾಗಿದೆ. ಈ ವೇತನದ ಅಂಕಿ ಸಂಖ್ಯೆಗಳನ್ನು ಪರಿಗಣಿಸಿದಾಗ ರಾಷ್ಟ್ರಪತಿ ಭವನದ ತೋಟದ ಕೆಲಸಗಾರರ ವಾರ್ಷಿಕ ವೇತನವೇ 8 ಕೋಟಿ ರೂ. ಆಗಲಿದೆ.
"ಕಳೆದ ಮೂರು ವರ್ಷಗಳಿಂದ ತೋಟದ ಕೆಲಸಗಾರರಿಗೆ ಪಾವತಿಸಿದ ವೇತನಗಳ ಬಗೆಗಿನ ವಿವರವಾದ ಮಾಹಿತಿಯನ್ನು ರಾಷ್ಟ್ರಪತಿ ಭವನವು ನೀಡಲಿಲ್ಲ. ಆದಾಗ್ಯೂ, ಈ ವಿಷಯದ ಕುರಿತಂತೆ ಭಾಗಶಃ ಮಾಹಿತಿಯನ್ನು ಅಧಿಕಾರಿಗಳು ಒದಗಿಸಿದ್ದಾರೆ. ಉದ್ಯಾನವನವನ್ನು ನಿರ್ವಹಿಸುವ ತೋಟಗಾರರು ಮತ್ತು ಇತರ ಉದ್ಯೋಗಿಗಳಿಗೆ ಫೆಬ್ರವರಿ 2018 ರ ಸಂಬಳದ ಬಗ್ಗೆ ಮಾಹಿತಿಯನ್ನು ಭವನದಿಂದ ನೀಡಲಾಗಿದೆ" ಗಡದ್ ಹೇಳಿದ್ದಾರೆ.
ರಾಷ್ಟ್ರಪತಿ ಭವನ ಒದಗಿಸಿದ ಅಧಿಕೃತ ದಾಖಲೆಗಳ ಅನುಸಾರ ಉದ್ಯಾನ ನಿರ್ವಹಣೆಗಾಗಿ 2015-16ರ ಅವಧಿಯಲ್ಲಿತೋಟದ ನಿರ್ವಹಣೆ ಮತ್ತು ದುರಸ್ತಿಗಾಗಿ 3.73 ಕೋಟಿ ರೂ. ವೆಚ್ಚ ಮಾಡಿದ್ದರೆ ಅದೇ ವರ್ಷದಲ್ಲಿ ಯಂತ್ರೋಪಕರಣಗಳು ಮತ್ತು ಸಲಕರಣೆಗಳಿಗೆ `50.09 ಲಕ್ಷ ಖರ್ಚು ಮಾಡಿದೆ. 2016-17ರಲ್ಲಿ, ಉದ್ಯಾನದ ನಿರ್ವಹಣೆ ಮತ್ತು ದುರಸ್ತಿಗಾಗಿ 4.56 ಕೋಟಿ ರೂ. ಮತ್ತು ಯಂತ್ರೋಪಕರಣಗಳು ಮತ್ತು ಸಲಕರಣೆಗಳಿಗೆ 96.15 ಲಕ್ಷ ರೂ. ವೆಚ್ಚ ಮಾಡಿದೆ.
2017-18ರ ಅವಧಿಯಲ್ಲಿ ಉದ್ಯಾನದ ನಿರ್ವಹಣೆ ಮತ್ತು ದುರಸ್ತಿಗಾಗಿ ಮತ್ತೊಂದು `4.40 ಕೋಟಿ ಖರ್ಚು ಮಾಡಿದೆ. ರಾಷ್ಟ್ರಪತಿ ಕಾರ್ಯದರ್ಶಿ ಒದಗಿಸಿದ ಮಾಹಿತಿಯ ಪ್ರಕಾರ ರಾಷ್ಟ್ರಪತಿ ಭವನದ ಆವರಣದಲ್ಲಿ 139 ಎಕರೆ ಪ್ರದೇಶದದಲ್ಲಿ ಉದ್ಯಾನವಿದೆ. ಕರ್ನಾಟಕದ ಬೃಂದಾವನ್ ಗಾರ್ಡನ್  72 ಎಕರೆ ವಿಸ್ತೀರಣವಾಗಿದ್ದು ಇದರ ನಿರ್ವಹಣೆಗಾಗಿ ವರ್ಷಕ್ಕೆ 7 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಇದು ರಾಷ್ಟ್ರಪತಿ ಭವನ ಉದ್ಯಾನಗಳ ನಿರ್ವಹಣಾ ವೆಚ್ಚದ ಅರ್ಧದಷ್ಟು ಮಾತ್ರವೇ ಆಗಲಿದೆ/

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.