ರಾಜ್ಯ

ಕಲಬುರಗಿ: ಕಡುಬಡತನದಿಂದಾಗಿ ಜಾನುವಾರುಗಳಂತೆ ಹೊಲ ಹೂಳುವ ಅಸಹಾಯಕ ದಂಪತಿ!

ಕಡು ಬಡತನದಿಂದಾಗಿ ಬಡ ರೈತ ಮತ್ತು ಆತನ ಪತ್ನಿ ಜಾನುವಾರುಗಳಂತೆ ಭೂಮಿ ಹೂಳುವ ಕಾಯಕದಲ್ಲಿ ತೊಡಗಿದ್ದಾರೆ. ಇಂಥಹ ಒಂದು ಮನ ಕಲಕುವ ಘಟನೆ

ಕಲಬುರಗಿ: ಕಡುಬಡತನದಿಂದಾಗಿ ಜಾನುವಾರುಗಳಂತೆ ಹೊಲ ಹೂಳುವ ಅಸಹಾಯಕ ದಂಪತಿ!
ಸಾಂದರ್ಭಿಕ ಚಿತ್ರ
Published On :
ಕಲಬುರಗಿ: ಕಡು ಬಡತನದಿಂದಾಗಿ ಬಡ ರೈತ ಮತ್ತು ಆತನ ಪತ್ನಿ ಜಾನುವಾರುಗಳಂತೆ ಭೂಮಿ ಹೂಳುವ ಕಾಯಕದಲ್ಲಿ ತೊಡಗಿದ್ದಾರೆ. ಇಂಥಹ ಒಂದು ಮನ ಕಲಕುವ ಘಟನೆಗೆ ಕಲಬುರಗಿಯ ನಂದಿಕೂರು ಗ್ರಾಮ ಸಾಕ್ಷಿಯಾಗಿದೆ.
ಗುಂಡು ಶಾಪುರ್ ಎಂಬ ರೈತ ತನ್ನ ಪತ್ನಿ ಜೊತೆಗೂಡಿ ಹೊಲ ಉತ್ತಿದ್ದಾನೆ, ಉಳುವ ಜಾನುವಾರುಗಳಿಗೆ ಪ್ರತಿದಿನ 1 ಸಾವಿರ ರು ಹಣ ನೀಡಬೇಕು. ತಮ್ಮ ಜಮೀನು ಊಳಲು 4 ದಿನ ಜಾನುವಾರುಗಳ ಅಗತ್ಯವಿತ್ತು, ಅದಕ್ಕಾಗಿ ತಾವು 4 ಸಾವಿರ ರು ಖರ್ಚು ಮಾಡಬೇಕಾದ ಪರಿಸ್ಥಿತಿಯಿಂದಾಗಿ ಗಂಡ ಹೆಂಡತಿ ಇಬ್ಬರು ಸೇರಿ ನೇಗಿಲು ಕಟ್ಟಿಕೊಂಡು ಜಮೀನನನ್ನು ಊಳಿದ್ದಾರೆ.
ಒಂದು ವೇಳೆ ನಾನು ಜಾನುವಾರು ಬಾಡಿಗೆ ಪಡೆದಿದ್ದರೇ ನನಗೆ ಬಿತ್ತನೆ ಬೀಜ ಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ, ನಮ್ಮ ಬಳಿ ಹಣವಿಲ್ಲ, ಸರ್ಕಾರ ಕೂಡ ನಮಗೆ ಯಾವ ಸಹಾಯವನ್ನು ಮಾಡಿಲ್ಲ ಎಂದು ಗುಂಡು ಶಾಪೂರ್ ಹೇಳಿದ್ದಾರೆ.
ಗುಂಡು ಅವರು ಸ್ವಂತ ಭೂಮಿ ಹೊಂದಿಲ್ಲ, ಭೂಮಿಯನ್ನು ಭೋಗ್ಯಕ್ಕೆ ಪಡೆದು ಕಳೆದ ಮೂರು ವರ್ಷಗಳಿಂದ ಕೃಷಿ ಮಾಡುತ್ತಿದ್ದಾರೆ,  ಕಳೆದ ಹಲವು ವರ್ಷಗಳಿಂದ ಮಳೆಯ ಕೊರತೆಯಿಂದಾಗಿ  ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಹೊಲದಲ್ಲಿ ಕೆಲಸ ಮಾಡುವುದರ ಜೊತೆಗೆ ಗುಂಡು ಆಟೋ ಚಾಲಕನಾಗಿ ಕೆಲಸ ಮಾಡುತ್ತಾರೆ. ಶಾಲೆಯ ನಂತರ ಆತನ ಮಕ್ಕಳು ಕೂಡ ಕೃಷಿ ಕೆಲಸಗಳಿಗೆ ಸಹಾಯ ಮಾಡುತ್ತಾರೆ. 
ಸಂಸಾರ ಸಾಕಲು ಬೆಳಗ್ಗೆ ಹೊಲದಲ್ಲಿ ಕೆಲಸ , ಸಂಜೆ ಆಟೋ ಚಾಲಕನಾಗಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.