ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳಿದ್ದ ರಾಜ್ಯದ 290 ಯಾತ್ರಾರ್ಥಿಗಳು ಸುರಕ್ಷಿತ: ರಾಜ್ಯ ಸರ್ಕಾರ
ಕರ್ನಾಟಕದಿಂದ ಕೈಲಾಸ ಮಾನಸಸರೋವರ ಯಾತ್ರೆ ಕೈಗೊಂಡಿದ್ದ 290 ಯಾತ್ರಾರ್ಥಿಗಳು ಭಾರೀ ಮಳೆಯಿಂದಾಗಿ ನೇಪಾಳದಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಆದರೆ. ಸುರಕ್ಷಿತವಾಗಿದ್ದು, ಅವರನ್ನು ಕರೆತರಲು ನೇಪಾಳದಲ್ಲಿರುವ ಭಾರತೀಯ ರಾಯಬಾರಿ ಅಧಿಕಾರಿಗಳ ನೆರವು ಪಡೆಯಲಾಗಿದೆ ಎಂದು ರಾಜ್ಯಸರ್ಕಾರ ತಿಳಿಸಿದೆ.

Published On :
ಬೆಂಗಳೂರು: ಕರ್ನಾಟಕದಿಂದ ಕೈಲಾಸ ಮಾನಸಸರೋವರ ಯಾತ್ರೆ ಕೈಗೊಂಡಿದ್ದ 290 ಯಾತ್ರಾರ್ಥಿಗಳು ಭಾರೀ ಮಳೆಯಿಂದಾಗಿ ನೇಪಾಳದಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಆದರೆ. ಸುರಕ್ಷಿತವಾಗಿದ್ದು, ಅವರನ್ನು ಕರೆತರಲು ನೇಪಾಳದಲ್ಲಿರುವ ಭಾರತೀಯ ರಾಯಬಾರಿ ಅಧಿಕಾರಿಗಳ ನೆರವು ಪಡೆಯಲಾಗಿದೆ ಎಂದು ರಾಜ್ಯಸರ್ಕಾರ ತಿಳಿಸಿದೆ.
ಯಾತ್ರಾರ್ಥಿಗಳೆಲ್ಲ ಸುರಕ್ಷಿತವಾಗಿದ್ದು, ಸಂಪರ್ಕದಲ್ಲಿದ್ದಾರೆ ಎಂದು ಯಾತ್ರಾರ್ಥಿಗಳ ಬಗ್ಗೆ ಕಂದಾಯ ಇಲಾಖೆ ತುರ್ತು ಕಾರ್ಯಾಚರಣೆ ಕೇಂದ್ರ ಟ್ವಿಟ್ ಮಾಡಿದೆ. ಯಾತ್ರಾರ್ಥಿಗಳ ಸುರಕ್ಷತೆಗಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆ ನವದೆಹಲಿಯ ಕರ್ನಾಟಕ ಭವನದಲ್ಲಿರುವ ಆಯುಕ್ತರಿಗೆ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ನಿರ್ದೇಶನ ನೀಡಿದ್ದಾರೆ.
ಕಠ್ಮೆಂಡುವಿನಲ್ಲಿರುವ ಭಾರತೀಯ ರಾಯಬಾರಿ ಅಧಿಕಾರಿ ಹಾಗೂ ನೇಪಾಳ ಸರ್ಕಾರದೊಂದಿಗೆ ಕರ್ನಾಟಕ ಭವನದ ಆಯುಕ್ತರು ಚರ್ಚೆ ನಡೆಸಿದ್ದಾರೆ ಎಂದು ಅಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹವಾಮಾನ ವೈಫರೀತ್ಯ ಹಿನ್ನೆಲೆಯಲ್ಲಿ ನೇಪಾಳ್ ಗುಂಜ್ ಮತ್ತು ಸಿಮಿಕೊಟ್ ಮಧ್ಯೆ ಹೆಲಿಕಾಪ್ಟರ್ ಸೇವೆಗೆ ತೊಂದರೆಯಾಗಿದೆ.ಕರ್ನಾಟಕದ ಯಾತ್ರಾರ್ಥಿಗಳು ಸುರಕ್ಷಿತವಾಗಿದ್ದಾರೆ ಎಂದು ತುರ್ತು ಕಾರ್ಯಾಚರಣೆ ಕೇಂದ್ರ ಟ್ವಿಟ್ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಬೆಂಗಳೂರುBengalurusafeಸುರಕ್ಷಿತPilgrimsಯಾತ್ರಾರ್ಥಿಗಳುಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿCM H.D. Kumaraswamy
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


