ರಾಜ್ಯ

ರಾಗಿ ಮುದ್ದೆ, ನಾಟಿ ಕೋಳಿ ಸಾರು ಸ್ಪರ್ಧೆ: 3 ಕೆಜಿ ಮುದ್ದೆ ತಿಂದು 'ಮೀಸೆ' ತಿರುವಿದ ಈರೇಗೌಡ

ಮಂಡ್ಯ ತಾಲೂಕಿನ ಮಂಗಲ ಗ್ರಾಮದಲ್ಲಿ ಭಾನುವಾರ ನಡೆದ ರಾಗಿ ಮುದ್ದೆ ಮತ್ತು ನಾಟಿ ಕೋಳಿ ಸಾರು ತಿನ್ನುವ ಸ್ಪರ್ಧೆಯಲ್ಲಿ....

ರಾಗಿ ಮುದ್ದೆ, ನಾಟಿ ಕೋಳಿ ಸಾರು ಸ್ಪರ್ಧೆ: 3 ಕೆಜಿ ಮುದ್ದೆ ತಿಂದು 'ಮೀಸೆ' ತಿರುವಿದ ಈರೇಗೌಡ
ಮೀಸೆ ಈರೇಗೌಡ,
Published On :
ಮಂಡ್ಯ: ಮಂಡ್ಯ ತಾಲೂಕಿನ ಮಂಗಲ ಗ್ರಾಮದಲ್ಲಿ ಭಾನುವಾರ ನಡೆದ ರಾಗಿ ಮುದ್ದೆ ಮತ್ತು ನಾಟಿ ಕೋಳಿ ಸಾರು ತಿನ್ನುವ ಸ್ಪರ್ಧೆಯಲ್ಲಿ  ಶ್ರೀರಂಗಪಟ್ಟಣದ ಅರಕೆರೆ ಗ್ರಾಮದ ಮೀಸೆ ಈರೇಗೌಡ ಅವರು 6 ರಾಗಿ ಮುದ್ದೆ (3 ಕೆಜಿ) ತಿನ್ನುವ ಮೂಲಕ ಪ್ರಥಮ ಸ್ಥಾನ ಪಡೆದಿದ್ದಾರೆ.
54 ವರ್ಷದ ಈರೇಗೌಡ ಅವರು 20 ನಿಮಿಷಗಳಲ್ಲಿ ಮೂರು ಕೆಜಿ ಮುದ್ದೆ ತಿನ್ನುವ ಮೂಲಕ ಐದು ಸಾವಿರ ನಗದು ಹಾಗೂ ಟ್ರೋಫಿ ತಮ್ಮದಾಗಿಸಿಕೊಂಡರು. ಈರೇಗೌಡ ಅವರು ರಾಗಿ ಮುದ್ದೆ ತಿನ್ನುವ ಸ್ಪರ್ಧೆಯಲ್ಲಿ ಒಟ್ಟು 9ನೇ ಬಾರಿ ಮೊದಲ ಸ್ಥಾನ ಪಡೆದಿದ್ದಾರೆ.
ಇನ್ನು ಸುರೇಶ್‌ ಎಂಬುವವರು 5.45 ಮುದ್ದೆ(2.75ಕೆಜಿ) ತಿಂದು ಎರಡನೇ ಸ್ಥಾನಗಳಿಸಿ 3 ಸಾವಿರ ರು. ಪಡೆದರು. ರಾಮಮೂರ್ತಿ 5 ಮುದ್ದೆ(2.50ಕೆಜಿ) ಉಂಡು ತೃತೀಯ ಸ್ಥಾನಗಳಿಸಿ 2 ಸಾವಿರ ನಗದು ಪಡೆದರು. ತಲಾ 5 ಮುದ್ದೆ ಉಂಡ ನಂದೀಶ್‌, ಕಾರಸವಾಡಿ ಶಂಕರೇಗೌಡ, ಎಚ್‌.ಡಿ.ಯೋಗೇಶ್‌, ನಾಗೇಶ್‌ ಅವರಿಗೆ ತಲಾ 1 ಸಾವಿರ ನಗದಿನೊಂದಿಗೆ ಸಮಾಧಾನಕರ ಬಹುಮಾನ ವಿತರಣೆ ಮಾಡಿದರು.
ಜಿಲ್ಲಾಮಟ್ಟದ ನಾಟಿಕೋಳಿ ಸಾರು-ಮುದ್ದೆ ಉಣ್ಣುವ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಸುಮಾರು 65 ಸ್ಪರ್ಧಾಳುಗಳು ಭಾಗವಹಿಸಿದ್ದರು. ಭಾಗವಹಿಸುವ ಪ್ರತಿ ಸ್ಪರ್ಧಾಳುಗೆ ಆಯೋಜಕರಿಗೆ 100 ಸ್ಪರ್ಧಾ ಶುಲ್ಕ ವಿಧಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.