ಮೌಂಟ್ ಎವರೆಸ್ಟ್ ಏರಿದ ಕನ್ನಡಿಗ ವಿಕ್ರಂ: ಸಿಎಂ ಕುಮಾರಸ್ವಾಮಿ ಅಭಿನಂದನೆ
ಕನ್ನಡಿಗ ಅರಣ್ಯಾಧಿಕಾರಿಯೊಬ್ಬರು ಇತ್ತೀಚೆಗೆ ಜಗತ್ತಿನ ಅತಿ ಎತ್ತರದ ಶಿಖರ ಮೌಟ್ ಎವರೆಸ್ಟ್ ಏರಿ ಸಾಧನೆ ಮಾಡಿದ್ದಾರೆ. ಈ ಸಾಧನೆಗೆ ಮೆಚ್ಚಿ ಕರ್ನಾಟಕ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅಭಿನಂದಿಸಿದ್ದಾರೆ.

Published On :
ಬೆಂಗಳೂರು: ಕನ್ನಡಿಗ ಅರಣ್ಯಾಧಿಕಾರಿಯೊಬ್ಬರು ಇತ್ತೀಚೆಗೆ ಜಗತ್ತಿನ ಅತಿ ಎತ್ತರದ ಶಿಖರ ಮೌಟ್ ಎವರೆಸ್ಟ್ ಏರಿ ಸಾಧನೆ ಮಾಡಿದ್ದಾರೆ. ಈ ಸಾಧನೆಗೆ ಮೆಚ್ಚಿ ಕರ್ನಾಟಕ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅಭಿನಂದಿಸಿದ್ದಾರೆ.
ಅರಣ್ಯ ರಕ್ಷಕ ವಿಕ್ರಮ್.ಸಿ (25) ಅವರು ಮೂಲತಃಅ ಹೊನ್ನಾಳಿಯವರಾಗಿದ್ದು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಅರಣ್ಯ ರಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅರ್ಥಸಾಶ್ತ್ರದಲ್ಲಿ ಎಂಎ ಪದವಿ ಪಡೆದಿರುವ ವಿಕ್ರಮ್ ಹಿಮಾಲಯವನ್ನೇರುವ ಮುನ್ನ ಸಾಕಷ್ಟು ಬಾರಿ ತಯಾರಿ ನಡೆಸಿದ್ದಾರೆ.
ಪರ್ವತಾರೋಹಿಗಳ ಆಯ್ಕೆಗಾಗಿ ನಡೆದ ಸಂದರ್ಶನದಲ್ಲಿ ದೇಶಾದ್ಯಂತ 25 ಜನ ಆಯ್ಕೆಯಾಗಿದ್ದು ಅಂತಿಮವಾಗಿ ಅವರಲ್ಲಿ ಎಂಟು ಜನರನ್ನು ಹಿಮಾಲಯ ಆರೋಹಣಕ್ಕೆ ಆಯ್ದುಕೊಳ್ಳಲಾಗಿದೆ. ಈ ಎಂಟು ಜನರಲ್ಲಿ ವಿಕ್ರಮ್ ಸಹ ಓರ್ವರಾಗಿರುವುದು ವಿಶೇಷವಾಗಿತ್ತು. ಕರ್ನಾಟಕದಿಂಡ ಇವರೊಬ್ಬರೇ ಈ ಸಾಹಸಯಾತ್ರೆಗೆ ಆಯ್ಕೆಯಾದ ವ್ಯಕ್ತಿ ಎನ್ನುವುದು ಸಹ ಇಲ್ಲಿ ಗಮನಾರ್ಹ.
ಹೀಗೆ ಹಿಯಾಮಲ ಏರುವ ಸಾಹಸಯಾತ್ರೆಗೆ ಆಯ್ಕೆಯಾಗಿ ಮೌಂಟ್ ಎವರೆಸ್ಟ್ ಶಿಖರವನ್ನು ಯಶಸ್ವಿಯಾಗಿ ಏರಿದ್ದ ಕನ್ನಡಿಗ ವಿಕ್ರಮ್ ಸಆಧನೆಯನ್ನು ಕುಮಾರಸ್ವಾಮಿ ಮನದುಂಬಿ ಹೊಗಳಿದ್ದಾರೆ. "ನಿಮ್ಮ ಈ ಸಾಧನೆ ಇತರೆ ಯುವಕರಿಗೆ ಸಹ ಸ್ಪೂರ್ತಿಯಾಗಲಿ: ಎಂದು ಅವರು ಆಶಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


