ಬೆಂಗಳೂರು: ಮನೆಯೊಳಗೆ ನುಗ್ಗಿ ಸ್ನೇಹಿತನ ಪತ್ನಿ ಮೇಲೆ ಮೂವರಿಂದ ಅತ್ಯಾಚಾರ
ಮೂವರು ದುಷ್ಕರ್ಮಿಗಳ ಗುಂಪೊಂದು ಕಳೆದ ಶನಿವಾರ ರಾತ್ರಿ ನಗರದ ಹೊರವಲಯದಲ್ಲಿರುವ...

ಬೆಂಗಳೂರು: ಮೂವರು ದುಷ್ಕರ್ಮಿಗಳ ಗುಂಪೊಂದು ಕಳೆದ ಶನಿವಾರ ರಾತ್ರಿ ನಗರದ ಹೊರವಲಯದಲ್ಲಿರುವ ಫಾರ್ಮ್ ಹೌಸ್ ಮೇಲೆ ದಾಳಿ ನಡೆಸಿ 26 ವರ್ಷದ ಮಹಿಳೆ ಮೇಲೆ ಅತ್ಯಾಚಾರ ನಡೆಸಿದ್ದಾರೆ. ರಾಮನಗರ ತಾಲ್ಲೂಕಿನ ಕುಡುರ್ ಎಂಬಲ್ಲಿ ಈ ಘಟನೆ ನಡೆದಿದೆ.
ಘಟನೆ ಬೆಳಕಿಗೆ ಬಂದ ಕೂಡಲೇ ಪೊಲೀಸರು ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಗಳು ಮಹಿಳೆಯ ಪತಿಯ ಸ್ನೇಹಿತರೇ ಆಗಿದ್ದಾರೆ.
ನಡೆದ ಘಟನೆಯೇನು?: ಗೃಹಿಣಿ ತನ್ನ 6 ವರ್ಷದ ಮಗನೊಂದಿಗೆ ವಾಸಿಸುತ್ತಿದ್ದು ಆಕೆಯ ಪತಿ ಟ್ರಕ್ ಚಾಲಕರಾಗಿದ್ದಾರೆ. ಪತಿ ವಿಜಯ್(ಹೆಸರು ಬದಲಿಸಲಾಗಿದೆ) ಕೆಲಸ ನಿಮಿತ್ತ ಹೊರಹೋಗಿದ್ದರು. ಶನಿವಾರ ರಾತ್ರಿ 10.30ರ ಸುಮಾರಿಗೆ ಕರಡಿ ಗಂಗರಾಜು ಅಲಿಯಾಸ್ ಕುರುಡ, ಮಂಜುನಾಥ್ ಮತ್ತು ಪುರುಷೋತ್ತಮ ಎಲ್ಲರೂ ಸುಮಾರು 25ರಿಂದ 30 ವರ್ಷದೊಳಗಿನವರಾಗಿದ್ದು ವಿಜಯ್ ಮೊಬೈಲ್ ಸಂಖ್ಯೆ ಕೇಳಿಕೊಂಡು ಮನೆಗೆ ಬಂದಿದ್ದರು. ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಗೆ ಬರುವಂತೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹೇಳಿದ್ದಾರೆ ಎಂದು ಕೂಡ ಸುಳ್ಳು ಹೇಳಿದರು. ಕಿಟಕಿ ತೆರೆದು ಪತಿ ಹೊರ ಹೋಗಿದ್ದಾರೆ, ನಾಳೆ ಬೆಳಗ್ಗೆ ಬನ್ನಿ ಎಂದು ಮಹಿಳೆ ಹೇಳಿದ್ದಾಳೆ.
ಆರೋಪಿಗಳು ಸ್ವಲ್ಪ ಹೊತ್ತು ಮನೆಯ ಹೊರಗೆ ಕಾದು ನಂತರ ಮನೆಯ ಬಾಗಿಲು ಒಡೆದು ಮನೆಯೊಳಗೆ ನುಗ್ಗಿಬಂದು ಮಹಿಳೆಗೆ ಹೊಡೆದು ಆಕೆಯ ಮಗನನ್ನು ಕೋಣೆಯಲ್ಲಿ ಕೂಡಿಹಾಕಿದರು. ಮಹಿಳೆ ಕೂಗಿಕೊಳ್ಳಲು ಆರಂಭಿಸಿದಾಗ ಟೇಪ್ ನಿಂದ ಬಾಯಿ ಮುಚ್ಚಿಸಿ ಆಕೆ ಮೇಲೆ ಅತ್ಯಾಚಾರ ನಡೆಸಿ ಪರಾರಿಯಾದರು. ಸ್ವಲ್ಪ ಹೊತ್ತಿನ ಬಳಿಕ ಮಹಿಳೆಗೆ ಪ್ರಜ್ಞೆ ಬಂದು ಆಕೆಯ ನೆರೆಮನೆಯ ಗಂಗಮ್ಮನನ್ನು ಎಚ್ಚರಿಸಿದಳು. ಆಕೆ ಪೊಲೀಸರಿಗೆ ಕರೆ ಮಾಡಿ ಕೂಡಲೇ ಮಹಿಳೆಯನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು.
ಕುಡುರು ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಮಹಿಳೆಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಆಕೆ ನೀಡಿದ ಮಾಹಿತಿ ಮೇರೆಗೆ ಆರೋಪಿಗಳಲ್ಲಿ ಗಂಗರಾಜುವನ್ನು ಬಂಧಿಸಿದ ಪೊಲೀಸರು ಮತ್ತಿಬ್ಬರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಮಹಿಳೆಗೆ ಪ್ರಜ್ಞೆ ಬಂದಾಗ ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಳು ಎಂದು ಆಕೆಯ ತಾಯಿ ಪೊಲೀಸರಿಗೆ ತಿಳಿಸಿದ್ದಾರೆ. ಆಕೆಯ ಮಗ ಕೋಣೆಯಿಂದ ಕೂಗಿಕೊಳ್ಳುತ್ತಿದ್ದಂತೆ ನೆರೆಮನೆಯವಳನ್ನು ಎಚ್ಚರಿಸಿ ಪೊಲೀಸರಿಗೆ ದೂರು ನೀಡಿದ್ದಾಳೆ. ಆಕೆಯ ಪತಿ ಕೌಟುಂಬಿಕ ಕಲಹದಿಂದಾಗಿ ಕಳೆದೊಂದು ತಿಂಗಳಿನಿಂದ ಮನೆಗೆ ಬರುತ್ತಿಲ್ಲ. ಇದನ್ನು ತಿಳಿದ ಆರೋಪಿಗಳು ಮನೆಗೆ ನುಗ್ಗಿ ಆಕೆ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ತಾಯಿ ಹೇಳುತ್ತಾರೆ. ಅತ್ಯಾಚಾರಕ್ಕೀಡಾದ ಮಹಿಳೆಯ ಪತಿಗೆ ಈ ಘಟನೆ ಕುರಿತು ಇನ್ನೂ ತಿಳಿದಿಲ್ಲ.
ಆರೋಪಿಗಳು ಹತ್ತಿರದ ಬಾರ್ ನಲ್ಲಿ ಹುಟ್ಟುಹಬ್ಬ ಸಂಭ್ರಮಾಚರಣೆ ಮಾಡಿಕೊಂಡು ನಂತರ ಫಾರ್ಮ್ ಹೌಸ್ ಗೆ ಬಂದಿದ್ದಾರೆ. ಆರೋಪಿಗಳು ಮೊದಲು ಮಹಿಳೆಯನ್ನು ಅಪಹರಿಸಲು ಯತ್ನಿಸಿದ್ದರು ಆದರೆ ಆಕೆ ಕೂಗಿಕೊಂಡಾಗ ಮನೆಯೊಳಗೆ ದೂಡಿ ಕೋಣೆಗೆ ಎಳೆದೊಯ್ದು ಅತ್ಯಾಚಾರವೆಸಗಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


