ರಾಜ್ಯ

ಕರ್ನಾಟಕ: ಶೀಘ್ರದಲ್ಲೇ ಖಾಸಗಿ ಜಾಹೀರಾತುಗಳ ತಾಣವಾಗಲಿದೆ ಸರ್ಕಾರಿ ಶಾಲಾ ಕಾಂಪೌಂಡ್'ಗಳು

ರಾಜ್ಯದ ಸರ್ಕಾರಿ ಶಾಲಾ ಕಾಂಪೌಂಡ್ ಗಳನ್ನು ಖಾಸಗಿ ಜಾಹೀರಾತುಗಳಿಗೆ ಬಳಕೆ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿದುಬಂದಿದೆ...

ಕರ್ನಾಟಕ: ಶೀಘ್ರದಲ್ಲೇ ಖಾಸಗಿ ಜಾಹೀರಾತುಗಳ ತಾಣವಾಗಲಿದೆ ಸರ್ಕಾರಿ ಶಾಲಾ ಕಾಂಪೌಂಡ್'ಗಳು
ಸಂಗ್ರಹ ಚಿತ್ರ
Published On :
ಬೆಂಗಳೂರು: ರಾಜ್ಯದ ಸರ್ಕಾರಿ ಶಾಲಾ ಕಾಂಪೌಂಡ್ ಗಳನ್ನು ಖಾಸಗಿ ಜಾಹೀರಾತುಗಳಿಗೆ ಬಳಕೆ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿದುಬಂದಿದೆ. 
ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿರುವ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರು, ಶಾಲೆಗಳ ಕಾಂಪೌಂಡ್ ಗಳು ಈಗಾಗಲೇ ಅನಧಿಕೃತವಾಗಿ ಜಾಹೀರಾತುಗಳಿಗೆ ಬಳಕೆಯಾಗುತ್ತಿವೆ. ಅದನ್ನು ಅಧಿಕೃತಗೊಳಿಸಿ, ವಿದ್ಯಾರ್ಥಿಗಳ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರದ ಜಾಹೀರಾತುಗಳಿಗೆ ಮಾತ್ರ ಅವಕಾಶ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ. 
ಈ ಕುರಿತಂತೆ ಕಾರ್ಪೊರೇಟ್ ಮುಖ್ಯಸ್ಥರು, ಎನ್'ಜಿಒ ಗಳೊಂದಿಗೆ ಮಾತುಕತೆ ನಡೆಸಲಾಗಿದ್ದು, ಕಂಪನಿಗಳು ಶಾಲಾ ಕಾಂಪೌಂಡ್ ಗಳನ್ನು ಬಳಕೆ ಮಾಡಿಕೊಂಡು ತಮ್ಮ ತಮ್ಮ ವಸ್ತುಗಳಿಗೆ ಜಾಹೀರಾತುಗಳನ್ನು ಪ್ರಕಟಿಸಿಕೊಳ್ಳಲಿವೆ. ಜಾಹೀರಾತು ಪ್ರದರ್ಶನಕ್ಕಾಗಿ ಜಾಗ ಹುಡುಕುತ್ತಿರುವ ಕಂಪನಿಗಳಿಗಾಗಿ ನಾವು ಎದುರು ನೋಡುತ್ತಿದ್ದೇನೆ. ಇಲಾಖೆ ನಿಗದಿಪಡಿಸಿದ ಶುಲ್ಕವನ್ನು ಪಾವತಿಸಿ ಆಯಾ ಕಂಪನಿಗಳು ತಮ್ಮ ಜಾಹೀರಾತುಗಳನ್ನು ಶಾಲಾ ಕಾಂಪೌಂಡ್ ಗಳ ಮೇಲೆ ಪ್ರದರ್ಶಿಸಬಹುದು ಎಂದು ತಿಳಿಸಿದ್ದಾರೆ. 
ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಮಾತನಾಡಿ, ಶಾಲೆಯಲ್ಲಿ ಯಾವುದೇ ಕಾಂಪೌಂಡ್ ಗಳು ಇಲ್ಲದೇ ಹೋದರೆ, ಕಂಪನಿಯೇ ನಿರ್ಮಾಣ ಮಾಡಿ, ಬಣ್ಣವನ್ನು ಹಚ್ಚಿ ಜಾಹೀರಾತನ್ನು ಪ್ರಕಟಿಸಬಹುದು ಎಂದು ಹೇಳಿದ್ದಾರೆ. 
ಸರ್ಕಾರದ ಈ ಘೋಷಣೆಗೆ ಕೆಲ ಶಿಕ್ಷಕರು ಹಾಗೂ ತಜ್ಞರು ವಿರೋಧ ವ್ಯಕ್ತಪಡಿಸಿದ್ದಾರೆ. ಶಿಕ್ಷಣ ತಜ್ಞ ಡಾ.ವಿ.ಪಿ. ನಿರಂಜನರಾಧ್ಯ ಮಾತನಾಡಿ, ಇದನ್ನು ಒಪ್ಪಲು ಸಾಧ್ಯವಿಲ್ಲ. ಸರ್ಕಾರಿ ಶಾಲೆಗಳ ಕಾಂಪೌಂಡ್ ಅಥವಾ ಗೋಡೆಗಳು ಇರುವುದು ವಾಣಿಜ್ಯ ಉತ್ಪನ್ನಗಳ ಜಾಹೀರಾತುಗಳಿಗಾಗಿ ಅಲ್ಲ. ಶಾಲೆಗಳ ಕಾಂಪೌಂಡ್, ಗೋಡೆಗಳು ಬಣ್ಣಮಯವಾಗಿರಬೇಕೆಂದರೆ ಇಲಾಖೆ ಇತಿಹಾಸ ಅಥವಾ ರಾಜ್ಯದ ಸಂಸ್ಕೃತಿ, ರಾಜ್ಯದ ಕುರಿತಂತೆ ಬರೆಯಲಿ ಎಂದು ಹೇಳಿದ್ದಾರೆ. 
ಸರ್ಕಾರಿ ಶಾಲೆಗಳ ಕಾಂಪೌಂಡ್ ಗಳನ್ನು ಜಾಹೀರಾತುಗಳಿಗೆ ಬಳಕೆ ಮಾಡಿಕೊಳ್ಳುವುದು ಶಿಕ್ಷಣದ ನಿಯಮಗಳನ್ನು ಉಲ್ಲಂಘನೆ ಮಾಡಿದಂತಾಗುತ್ತದೆ. ಶಾಲಾ ಅವರಣ ಮಾರುಕಟ್ಟೆಯ ಉತ್ಪನ್ನಗಳಿಗೆ ಜಾಹೀರಾತು ನೀಡುವ ಪ್ರದೇಶವಲ್ಲ. ಇದನ್ನು ನಾವು ಖಂಡಿಸುತ್ತೇವೆಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.