ಫೆಮಿನಾ ಮಿಸ್ ಇಂಡಿಯಾ 2018 ಬೆಂಗಳೂರು ಆಡಿಶನ್ ಫೆಬ್ರವರಿ 18ರಂದು
ಹಲವಾರು ಪ್ರತಿಭಾನ್ವಿತ ತರುಣಿಯರ ಬದುಕನ್ನು ಬದಲಾಯಿಸಿರುವ ಪರಂಪರೆಯ ಹೆಮ್ಮೆಯನ್ನು ಹೊಂದಿರುವ ಫ್ಯಾಷನ್ ಮತ್ತು ಗ್ಲಾಮರ್ ಉದ್ಯಮದಲ್ಲಿ...

ಹಲವಾರು ಪ್ರತಿಭಾನ್ವಿತ ತರುಣಿಯರ ಬದುಕನ್ನು ಬದಲಾಯಿಸಿರುವ ಪರಂಪರೆಯ ಹೆಮ್ಮೆಯನ್ನು ಹೊಂದಿರುವ ಫ್ಯಾಷನ್ ಮತ್ತು ಗ್ಲಾಮರ್ ಉದ್ಯಮದಲ್ಲಿ ಈಗಾಗಲೇ ಹಲವಾರು ಮಂದಿ ಪ್ರಸಿದ್ದಿಯನ್ನು ಹೊಂದಿದ್ದಾರೆ. ಈ ಸಂಪ್ರದಾಯವನ್ನು ಮುಂದುವರೆಸುವುದರಲ್ಲಿ ಏಫ್ಬಿಬಿ ಕಲರ್ಸ ಫೆಮಿನಾ ಮಿಸ್ ಇಂಡಿಯಾ 2018 ಬಧ್ದವಾಗಿದೆ.
ಅತ್ಯಂತ ಬೇಡಿಕೆಯಲ್ಲಿರುವ ಸೌಂದರ್ಯ ಸ್ಪರ್ಧೆಯಾದ 55ನೆಯ ಸಂಚಿಕೆಯಲ್ಲಿ ಇಂದಿನ ಯುವತಿಯರಿಗೆ ಹೃತ್ಪೂರ್ವಕವಾದ ಬೆಂಬಲವನ್ನು ನೀಡಿ ಅವರಿಗೆ ನಾಳೆಯ ದೇಶವನ್ನು ಪ್ರತಿನಿಧಿಸುವ ಸಾಮರ್ಥ್ಯವನ್ನು ತೋರಲು ಅನುವು ಮಾಡಿಕೊಡುತ್ತದೆ. ಗೆದ್ದವರು ಮಿಸ್ ವರ್ಲ್ಡ್ 2018 ರಲ್ಲಿ ಭಾರತವನ್ನು ಪ್ರತಿನಿಧಿಸುವುದಲ್ಲದೆ ಇತರ ಅಂತರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಬಹುದು.
ಈ ವರ್ಷ ಮತ್ತೆ ಈ ಸ್ವರ್ಧೆಯು ಭಾರತದ ಎಲ್ಲಾ 30 ರಾಜ್ಯಗಳಲ್ಲಿ (ದೆಹಲಿ ಸೇರಿದಂತೆ) ಸಂಭಾವ್ಯ ಪ್ರತಿಭೆಯನ್ನು ಅನ್ವೇಷಿಸುತ್ತದೆ, ರಾಷ್ಟ್ರೀಯ ರಾಯಭಾರಿಗಳಲ್ಲಿ ತಮ್ಮ ರಾಜ್ಯವನ್ನು ಪ್ರತಿನಿಧಿಸುವ ಒಬ್ಬ ರಾಯಭಾರಿಯನ್ನು ಆಯ್ಕೆ ಮಾಡುತ್ತದೆ. ಇದರ ಬೆಂಗಳೂರು ಆಡಿಶನ್ ಫೆಬ್ರವರಿ 18ರಂದು ಭಾನುವಾರ ನಡೆಯಲಿದೆ.
ಮತ್ತೇನು......ನೀವು ಇನ್ನೂ ಏಕೆ ಕಾಯುತ್ತಿರುವಿರಿ? ಈಗಲೇ ಅರ್ಜಿ ಸಲ್ಲಿಸಿ. www.missindia.in ಗೆ ಲಾಗಿನ್ ಮಾಡಿ ನಿಮ್ಮ ಚಿತ್ರಗಳನ್ನು ಮತ್ತು ವಿವರಗಳನ್ನು ನಮಗೆ ಈ ವಿಳಾಸಕ್ಕೆ missindiaorganization@gmail.com ಮೇಲ್ ಮಾಡಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


