ಡ್ಯಾನ್ಸ್ ವಿಶ್ವ ಕಪ್ ನಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಬೆಳಗಾವಿ ನೃತ್ಯಗಾರರು
ಬೆಳಗಾವಿಯ ಎಂ ಸ್ಟೈಲ್ ಡ್ಯಾನ್ಸ್ ಮತ್ತು ಫಿಟ್ ನೆಸ್ ಅಕಾಡೆಮಿಯ ನೃತ್ಯಗಾರರು ಜೂನ್ 22 ರಿಂದ ಜುಲೈ 1 ರವರೆಗೆ ಸ್ಪೇನ್ ನಲ್ಲಿ ನಡೆಯಲಿರುವ ಡಾನ್ಸ್ ವಿಶ್ವ ಕಪ್ 2018 ರಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

Published On :
ಬೆಳಗಾವಿ: ಬೆಳಗಾವಿಯ ಎಂ ಸ್ಟೈಲ್ ಡ್ಯಾನ್ಸ್ ಮತ್ತು ಫಿಟ್ ನೆಸ್ ಅಕಾಡೆಮಿಯ ನೃತ್ಯಗಾರರು ಜೂನ್ 22 ರಿಂದ ಜುಲೈ 1 ರವರೆಗೆ ಸ್ಪೇನ್ ನಲ್ಲಿ ನಡೆಯಲಿರುವ ಡಾನ್ಸ್ ವಿಶ್ವ ಕಪ್ 2018 ರಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಬೆಳಗಾವಿಯ ಯುವ ಪ್ರತಿಭೆಗಳು 2018 ರ ಡ್ಯಾನ್ಸ್ ವಿಶ್ವ ಕಪ್ ಇಂಡಿಯಾ ಅರ್ಹತಾಸುತ್ತಿನಲ್ಲಿ ಬಾಗವಹಿಸಿ ಈ ಅವಕಾಶವನ್ನು ಗಿಟ್ಟಿಸಿಕೊಂಡಿದೆ. ಈ ವೇದಿಕೆಯು ಪ್ರತಿಭೆ,ನೃತ್ಯ ಮತ್ತು ಸ್ಪರ್ಧೆಯ ನೈಜ ಅವಕಾಶವನ್ನು ಸ್ಪರ್ಧಿಗಳಿಗೆ ಒದಗಿಸಲಿದೆ. ಸಾವಿರಾರು ಸಂಖ್ಯೆಯಲ್ಲಿ ನೊಂದಾಯಿಸಿಕೊಂಡಿದ್ದ ನೃತ್ಯಗಾರರಲ್ಲಿ ಸುಮಾರು 300 ನೃತ್ಯಪಟುಗಳಿಗೆ ರಾಷ್ಟ್ರಮಟ್ಟದಲ್ಲಿ ಅವರ ಕಲಾ ನೈಪುಣ್ಯವನ್ನು ಪ್ರದರ್ಶಿಸುವ ಅವಕಾಶ ದೊರೆತಿತ್ತು. ಈ ಕಾರ್ಯಕ್ರಮವನ್ನು ಐ ಎಸ್ ಪಿಟಿಡಿ ಸಂಸ್ಥೆ ಬೆಂಗಳೂರಿನ ಫೀನಿಕ್ಸ್ ಮಾರ್ಕೆಟ್ ಸಿಟಿಯಲ್ಲಿ ಇತ್ತೀಚೆಗೆ ಆಯೋಜನೆ ಮಾಡಿತ್ತು.
ಬೆಳಗಾವಿಯ ನೃತ್ಯಪಟುಗಳಾದ ಸೇಜಲ್ ಪಾಟೀಲ್, ಪ್ರತ್ನಾ ಗ್ರೋವ್, ಪ್ರೇರಣಾ ಗೊನ್ಬರೆ ಮತ್ತು ಅನುಶಾ ಬೆಂಕತ್ತಿ ಅಂತರರಾಷ್ಟ್ರೀಯ ನೃತ್ಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಅವಕಾಶ ಪಡೆದಿದ್ದಾರೆ.
ಸೇಜಲ್ ಪಾಟೀಲ್ ರಾಷ್ಟ್ರೀಯ ಮಕ್ಕಳ ಜನಪದ ಏಕವ್ಯಕ್ತಿ ನೃತ್ಯ ವಿಭಾಗದಲ್ಲಿ ಪಾಲ್ಗೊಂಡರೆ, ಪ್ರತ್ನಾ ಮಕ್ಕಳ ಹಿಪ್ ಹಾಪ್ ನೃತ್ಯ ವಿಭಾಗದಲ್ಲಿ ಬಾಗವಹಿಸಲಿದ್ದಾರೆ. ಇನ್ನು ಪ್ರೇರಣಾ ಮತ್ತು ಅನುಶಾ ಅವರುಗಳು ಶೋ ಡ್ಯಾನ್ಸ್ ವಿಭಾಗದಲ್ಲಿ ತಮ್ಮ ಪ್ರದರ್ಶನ ನೀಡಲಿದ್ದಾರೆ. ನೃತ್ಯ ಗುರುವಾದ ಮಹೇಶ್ ಜಾಧವ್ ಸ್ಪರ್ಧೆಗೆ ಆಯ್ಕೆಯಾದ ಎಲ್ಲಾ ನೃತ್ಯ ಕಲಾವಿದರಿಗೆ ಕಳೆದ ಮೂರು ವರ್ಷಗಳಿಂದಲೂ ನೃತ್ಯ ತರಬೇತಿ ನೀಡುತ್ತಿದ್ದಾರೆ. ಈ ಡ್ಯಾನ್ಸ್ ವಿಶ್ವ ಕಪ್ ಸ್ಪೇನ್ ನ ಬಾರ್ಸಿಲೋನಾ, ಸಿಟ್ಜಸ್ ನಲ್ಲಿ ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
BelagaviಬೆಳಗಾವಿSpainಸ್ಪೇನ್M Style Dance and Fitness AcademyDance World Cup 2018ಎಂ ಸ್ಟೈಲ್ ನೃತ್ಯ ಮತ್ತು ಫಿಟ್ ನೆಸ್ ಅಕಾಡೆಮಿಡ್ಯಾನ್ಸ್ ವಿಶ್ವ ಕಪ್ 2018
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


