ರಾಜ್ಯ

ಕೋಲಾರ: ವಿವಾಹವಾಗಬೇಕಿದ್ದ ವಧು, ವರರು ನಾಪತ್ತೆ, ಮುರಿದು ಬಿದ್ದ ಮದುವೆ, ಕುಟುಂಬ ಕಂಗಾಲು

ಆರತಕ್ಷ್ತೆಗೆ ಎಲ್ಲಾ ಸಿದ್ದವಾಗಿರುವಾಗ ವಧು ನಾಪತ್ತೆಯಾಗಿರುವುದು ತಿಳಿಯುತ್ತದೆ. ಆಗ ವಧುವಿನ ತಂಗಿಯೊಡನೆ ವಿವಾಹ ನೆರವೇರಿಸಲು ಹಿರಿಯರು ತೀರ್ಮಾನಿಸಿರುತ್ತಾರೆ.

ಕೋಲಾರ: ವಿವಾಹವಾಗಬೇಕಿದ್ದ ವಧು, ವರರು ನಾಪತ್ತೆ, ಮುರಿದು ಬಿದ್ದ ಮದುವೆ, ಕುಟುಂಬ ಕಂಗಾಲು
ಸಾಂದರ್ಭಿಕ ಚಿತ್ರ
Published On :
ಕೋಲಾರ: ಆರತಕ್ಷ್ತೆಗೆ ಎಲ್ಲಾ ಸಿದ್ದವಾಗಿರುವಾಗ ವಧು ನಾಪತ್ತೆಯಾಗಿರುವುದು ತಿಳಿಯುತ್ತದೆ. ಆಗ ವಧುವಿನ ತಂಗಿಯೊಡನೆ ವಿವಾಹ ನೆರವೇರಿಸಲು ಹಿರಿಯರು ತೀರ್ಮಾನಿಸಿರುತ್ತಾರೆ. ಆದರೆ ಮುಂಜಾನೆ ಮದುವೆ ಎನ್ನುವ ವೇಳೆ  ವರ ಕೂಡಾ ನಾಪತ್ತೆಯಾಗಿದ್ದ! ಇಲ್ಲಿ ನಾವು ಹೇಳ ಹೊರಟಿರುವುದು ಯಾವ ಚಿತ್ರದ ಕಥೆಯನ್ನಲ್ಲ. ಇದೊಂದು ಸತ್ಯ ಘಟನೆ. 
ವಿವಾಹ ನಿಶ್ಚಯವಾದ ವಧು, ವರ ಇಬ್ಬರೂ ಇಪ್ಪತ್ತನಾಲ್ಕು ಗಂಟೆಯೊಳಗೆ ನಾಪತ್ತೆಯಾದ ಕಾರಣ ವಿವಾಹ ಮುರಿದು ಬಿದ್ದ ಘಟನೆ ಕೋಲಾರದಲ್ಲಿ ನಡೆದಿದೆ.
ಕೋಲಾರ ಜಿಲ್ಲೆ ಬಂಗಾರಪೇಟೆಯ ನೇರ್ನಳ್ಳಿಯ ಎನ್‌. ಸೌಮ್ಯಳಿಗೆ ಮಾಲೂರಿನಚನ್ನಕಲ್ಲಿನ ನಿವಾಸಿ ಸಿ.ಎಂ.ಗುರೇಶ್‌ ಎನ್ನುವ ಯುವಕನೊಡನೆ ವಿವಾಹ ನಿಶ್ಚಯವಾಗಿತ್ತು. ಭಾನುವಾರದ ಮದುವೆಗೆ ಶನಿವಾರ ಸಂಜೆ ಆರತಕ್ಷತೆ ಏರ್ಪಾಡಾಗಿತ್ತು. ಆದರೆ ಆರತಕ್ಷತೆಗೆ ಕೂರಬೇಕಾದ ವಧು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾಳೆ. ವಧು ನಾಪತ್ತೆಯಾದ ಸುದ್ದಿ ಕೇಳಿ ಬಂದ ಬೆನ್ನಲ್ಲೇ ವಧು ವರರ ಕಡೆಯವರು ನಿಶ್ಚಯವಾದ ಮದುವೆ ಮುರಿದು ಬಿಳಬಾರದೆನ್ನುವ ಕಾರಣಕ್ಕೆ ಬೇರೆ ಯುವತಿಯೊಡನೆ ರಾತ್ರೋ ರಾತ್ರಿ ಮದುವೆ ನಿಶ್ಚಯ ಮಾಡಿದ್ದಾರೆ. 
ಅದರಂತೆ ವಧು ಸೌಮ್ಯ ಚಿಕ್ಕಪ್ಪನ ಪುತ್ರಿ ವೆಂಕಟರತ್ನಮ್ಮಳೊಡನೆ ಗುರೇಶ್‌ ವಿವಾಹ ನೆರವೇರಿಸಲು ನಿರ್ಧರಿಸಲಾಗುತ್ತದೆ.ಈ ಮದುವೆಗೆ ಒಪ್ಪಿಗೆ ಸೂಚಿಸಿದ್ದ ವರ ಗುರೇಶ್‌ ಬೆಳಗ್ಗೆ ತಾನೂ ಸಹ ಕಾಣೆಯಾಗಿದ್ದಾನೆ. ಆತನ ಮೊಬೈಲ್ ಸಹ ಸ್ವಿಚ್ ಆಫ್ ಆಗಿದೆ. 
ಹೀಗೆ ವಧು, ವರ ಇಬ್ಬರೂ ನಾಪತ್ತೆಯಾದ ಕಾರಣ ವರ ಹಾಗೂ ವಧುವಿನ ಕುಟುಂಬದವರು ಕಂಗಾಲಾಗಿದ್ದಾರೆ. 700 ಕ್ಕೂ ಹೆಚ್ಚು ಬಂಧು-ಮಿತ್ರರಿಗೆ ಭರ್ಜರಿ ಭೋಜನದ ವ್ಯವಸ್ಥೆ ಮಾಡಲಾಗಿದ್ದರೂ ಇದೀಗ ಮದುವೆ ನಡೆಯದಿದ್ದರೆ ಇದೆಲ್ಲವೂ ವ್ಯರ್ಥವಾಗಲಿದೆ. ಮದುವೆಗಾಘಿ ದೂರದ ಪ್ರದೇಶದಿಂದ ಆಗಮಿಸಿದ್ದ ಜನರು ನಿರಾಸೆಯಿಂದ ವಾಪಾಸಾಗುತ್ತಿದ್ದಾರೆ.
ಘಟನೆ ಸಂಬಂಧ ಮಾಲೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕುಟುಂಬಿಕರು, ಸಂಬಂಧಿಕರು ವರನ ಆಗಮನಕ್ಕಾಗಿ ಎದುರು ನೋಡುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.