ರಾಜ್ಯ

ಮೂಡಿಗೆರೆ: ಆಸ್ತಿ ಆಸೆಗೆ ದಂಪತಿಗಳ ಹತ್ಯೆ, ಸೋದರನಿಂದಲೇ ಅಣ್ಣ ಅತ್ತಿಗೆಗೆ ವಿಷ ಪ್ರಾಶನ

ಆಸ್ತಿ ವಿವಾದವು ಎರಡು ಜೀವಗಳ ಕೊಲೆಯಲ್ಲಿ ಅಂತ್ಯವಾದ ದಾರುಣ ಘಟನೆ ಚಿಕ್ಕಮಗಳುರು ಜಿಲ್ಲೆ ಮೂಡಿಗೆರೆ ತಾಲೂಕಿನ ಕಣಚೂರಿನಲ್ಲಿ ನಡೆದಿದೆ.

ಮೂಡಿಗೆರೆ: ಆಸ್ತಿ ಆಸೆಗೆ ದಂಪತಿಗಳ ಹತ್ಯೆ, ಸೋದರನಿಂದಲೇ ಅಣ್ಣ ಅತ್ತಿಗೆಗೆ ವಿಷ ಪ್ರಾಶನ
ಆಸ್ತಿ ಆಸೆಗೆ ದಂಪತಿಗಳ ಹತ್ಯೆ, ಸೋದರನಿಂದಲೇ ಅಣ್ಣ ಅತ್ತಿಗೆಗೆ ವಿಷ ಪ್ರಾಶನ
Published On :
ಮೂಡಿಗೆರೆ: ಆಸ್ತಿ ವಿವಾದವು ಎರಡು ಜೀವಗಳ ಕೊಲೆಯಲ್ಲಿ ಅಂತ್ಯವಾದ ದಾರುಣ ಘಟನೆ ಚಿಕ್ಕಮಗಳುರು ಜಿಲ್ಲೆ ಮೂಡಿಗೆರೆ ತಾಲೂಕಿನ ಕಣಚೂರಿನಲ್ಲಿ ನಡೆದಿದೆ.
ನಾಲ್ಕು ಎಕರೆ ಆಸ್ತಿಯು ಸಂಪೂರ್ಣವಾಗಿ ತನೆಗೆ ಸಿಗಬೇಕೆಂದು ಆಸೆಯಿಂದ  ಕಣಚೂರಿನ  ದಿನೇಶ್ ಎಂಬಾತ ಈ ಕೃತ್ಯ ಎಸಗಿದ್ದು ತನ್ನ ಅಣ್ಣ ವೆಂಕಟೇಶ್ ಹಾಗೂ ಅತ್ತಿಗೆ ರುಕ್ಮಿಣಿಗೆ ಅವರ ಊಟದಲ್ಲಿ ವಿಷ ಬೆರೆಸಿ ಕೊಟ್ಟಿದ್ದಾನೆ. ವಿಷ ಬೆರೆಸಿದ್ದ ಊಟ ಮಾಡಿದ್ದ ದಂಪತಿಗಳನ್ನು ಪಕ್ಕದ ಮನೆಯವರು ಮಣಿಪಾಲ್ ಆಸ್ಪತ್ರೆಗೆ ಸೇರಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಅಸುನೀಗಿದ್ದಾರೆ.
ಮೃತ ದಂಪತಿಗಳಿಗೆ ನಿತಿನ್ (14) ಮತ್ತು ಪೂಜಾ (12) ಎನ್ನುವ ಇಬ್ಬರು ಮಕ್ಕಳಿದ್ದು ಇದೀಗ ತಮ್ಮ ತಂದೆ ತಾಯಿಗಳಿಲ್ಲದೆ ಮಕ್ಕಳು ಅನಾಥವಾಗಿದ್ದಾರೆ.
ಘಟನೆ ಸಂಬಂಧ ಗೋಣಿಬೀಡು ಪೊಲೀಸರು ಆರೋಪಿ ದಿನೇಶ್ ನನ್ನು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.