ಮಹಾದಾಯಿ ನ್ಯಾಯಾಧೀಕರಣದ ಸಹಾನುಭೂತಿ ಗಳಿಸಲು ಗೋವಾ ಯತ್ನ: ಎಂಬಿ ಪಾಟೀಲ್
ಮಹದಾಯಿ ನ್ಯಾಯಾಧೀಕರಣದ ಸಹಾನುಭೂತಿಯನ್ನು ಗಳಿಸಲು ಗೋವಾ ಸರ್ಕಾರ ಯತ್ನಿಸುತ್ತಿದೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್ ಅವರು ಸೋಮವಾರ ಹೇಳಿದ್ದಾರೆ...

Published On :
ಬೆಂಗಳೂರು: ಮಹದಾಯಿ ನ್ಯಾಯಾಧೀಕರಣದ ಸಹಾನುಭೂತಿಯನ್ನು ಗಳಿಸಲು ಗೋವಾ ಸರ್ಕಾರ ಯತ್ನಿಸುತ್ತಿದೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್ ಅವರು ಸೋಮವಾರ ಹೇಳಿದ್ದಾರೆ.
ಬೆಳಗಾವಿ ಜಿಲ್ಲಯ ಕನಕುಂಬಿಯ ಕಳಸಾ-ಬಂಡೂರಿ ನಾಲೆ ಯೋಜನಾ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮೊದಲು ಹೇಳಿಕೆ ನೀಡಿದ್ದ ಗೋವಾ ಸರ್ಕಾರ, ನೀರು ಬಿಡಲು ಸಾಧ್ಯವೇ ಇಲ್ಲ ಎಂದು ಹೇಳಿತ್ತು. ಬಳಿಕ ನೀರಿನ ಕೊರತೆ ಇದೆ ಎಂದಿತ್ತು. ಇದಾದ ಬಳಿಕ ಕರ್ನಾಟಕ ವಿರುದ್ಧವೇ ಆರೋ ಮಾಡಿ, ನ್ಯಾಯಾಲಯದ ಆದೇಶದ ವಿರುದ್ಧ ಕರ್ನಾಟಕ ಸರ್ಕಾರ ಕಾಮಗಾರಿ ಕಾರ್ಯವನ್ನು ಆರಂಭಿಸಿದೆ ಎಂದು ಹೇಳಿದೆ. ಇದೆಲ್ಲವನ್ನೂ ಗಮನಿಸಿದರೆ, ಗೋವಾ ಸರ್ಕಾರ ಮಹದಾಯಿ ನ್ಯಾಯಾಧೀಕರಣದ ಸಹಾನುಭೂತಿಯನ್ನುಗಳಿಸಲು ಯತ್ನ ನಡೆಸುತ್ತಿರುವಂತಿದೆ ಎಂದಿದ್ದಾರೆ.
ಕಳಸಾ-ಬಂಡೂರಿ ನಾಲಾ ಜೋಡಣೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಆದೇಶದಂತೆಯೇ ಆಗಸ್ಟ್ ತಿಂಗಳ ನಂತರದಲ್ಲಿ ಯಾವುದೇ ಕಾಮಗಾರಿ ಕೈಗೊಂಡಿಲ್ಲ. ಈ ಕುರಿತು ಮೂರನೇ ವ್ಯಕ್ತಿಯ ಪರಿಶೀಲನೆಗೆ ನಾವು ಸಿದ್ಧರಿದ್ದೇವೆ. ಗೋವಾ ಸಚಿವರು ರಾಜ್ಯಕ್ಕೆ ಮಾಹಿತಿ ನೀಡದೆ ನೇರವಾಗಿ ಬಂದು ಪರಿಶೀಲಿಸಿ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ. ಕಾಮಗಾರಿ ಪರಿಶೀಲಿಸುವುದಿದ್ದರೆ ಗೋವಾ ಸರ್ಕಾರ ಕರ್ನಾಟಕದ ಜತೆ ಮಾತುಕತೆ ನಡೆಸಿ ಶಿಷ್ಟಾಚಾರದ ಪ್ರಕಾರ ಪರಿಶೀಲನೆ ನಡೆಸಬಹುದಿತ್ತು ಈ ರೀತಿಯ ವರ್ತನೆ ಸರಿಯಲ್ಲ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


