ರಾಜ್ಯ

ಕಾವೇರಿ: ತಮಿಳುನಾಡು ಆಗ್ರಹಕ್ಕೆ ಕಿವಿಗೊಡದ ಸರ್ಕಾರ, ರಾಜ್ಯದ ರೈತರ ಕೃಷಿಗೆ ನೀರು ಒದಗಿಸಲು ನಿರ್ಧಾರ

ಕಾವೇರಿ ನದಿ ನೀರು ವಿವಾದ ಕುರಿತಂತೆ ಕರ್ನಾಟಕ ಮೇಲೆ ಒತ್ತಡ ಹೇರಲು ತಮಿಳುನಾಡು ಸರ್ಕಾರ ಯತ್ನಗಳನ್ನು ನಡೆಸುತ್ತಲೇ ಇದ್ದು, ತಮಿಳುನಾಡಿನ ಆಗ್ರಹಗಳಿಗೆ ಕಿವಿಗೊಡದ ಸರ್ಕಾರ, ಇದೀಗ ಕೃಷಿಗೆ ನೀರು ಒದಗಿಸಲು ನಿರ್ಧಾರ ಕೈಗೊಂಡಿದೆ ಎಂದು ತಿಳಿದುಬಂದಿದೆ...

ಕಾವೇರಿ: ತಮಿಳುನಾಡು ಆಗ್ರಹಕ್ಕೆ ಕಿವಿಗೊಡದ ಸರ್ಕಾರ, ರಾಜ್ಯದ ರೈತರ ಕೃಷಿಗೆ ನೀರು ಒದಗಿಸಲು ನಿರ್ಧಾರ
ಸಂಗ್ರಹ ಚಿತ್ರ
Published On :
ಮೈಸೂರು: ಕಾವೇರಿ ನದಿ ನೀರು ವಿವಾದ ಕುರಿತಂತೆ ಕರ್ನಾಟಕ ಮೇಲೆ ಒತ್ತಡ ಹೇರಲು ತಮಿಳುನಾಡು ಸರ್ಕಾರ ಯತ್ನಗಳನ್ನು ನಡೆಸುತ್ತಲೇ ಇದ್ದು, ತಮಿಳುನಾಡಿನ ಆಗ್ರಹಗಳಿಗೆ ಕಿವಿಗೊಡದ ಸರ್ಕಾರ, ಇದೀಗ ಕೃಷಿಗೆ ನೀರು ಒದಗಿಸಲು ನಿರ್ಧಾರ ಕೈಗೊಂಡಿದೆ ಎಂದು ತಿಳಿದುಬಂದಿದೆ. 
ಕಾವೇರಿ ನದಿ ನೀರಿನಲ್ಲಿ 2017-18ನೇ ಸಾಲಿನ ವರ್ಷದಲ್ಲಿ ತಮಿಳುನಾಡು ರಾಜ್ಯಕ್ಕೆ ಬರಬೇಕಿದ್ದಷ್ಟು ನೀರು ಬಂದಿಲ್ಲ. ಹೀಗಾಗಿ 15 ಟಿಎಂಸಿ ನೀರನ್ನು ಕೂಡಲೇ ರಾಜ್ಯಕ್ಕೆ ಹರಿಸಬೇಕೆಂದು ಕೆಲ ದಿನಗಳ ಹಿಂದಷ್ಟೇ ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಅವರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದರು. 
ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹತ್ತಿರಬರುತ್ತಿದ್ದು, ಪ್ರಸ್ತುತದ ಪರಿಸ್ಥಿತಿಯಲ್ಲಿ ಅವಕಾಶನ್ನು ತೆಗೆದುಕೊಳ್ಳಲು ಇಚ್ಛಿಸದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ತಮಿಳುನಾಡು ರಾಜ್ಯದ ಆಗ್ರಹಗಳಿಗೆ ಕಿವಿಗೊಡದೆ, ಬೇಸಿಗೆ ಕೃಷಿಗಾಗಿ ತಿಂಗಳಲ್ಲಿ 15 ದಿನಗಳ ಕಾಲ ನೀರು ಒದಗಿಸಲು ನಿರ್ಧರಿಸಿದ್ದಾರೆಂದು ಮೂಲಗಳು ತಿಳಿಸಿವೆ. 
ಈ ಬಾರಿ ತಮಿಳುನಾಡು ರಾಜ್ಯದಲ್ಲಿ ಉತ್ತಮವಾಗಿ ಮಳೆಯಾಗಿದ್ದೆ. ಈಗಾಗಲೇ ತಮಿಳುನಾಡು ರಾಜ್ಯದ ಅಗ್ರಹದಂತೆಯೇ ರಾಜ್ಯ ಸರ್ಕಾರ 192 ಟಿಎಂಸಿ ಪೈಕಿ 117 ಟಿಎಂಸಿ ನೀರನ್ನು ಹರಿಸಿದೆ. 
ಕೃಷಿಯೇತರ ಚಟುವಟಿಕೆಗಳಿಗೆ ನೀರನ್ನು ಬಿಡಲು ಸರ್ಕಾರ ಈಗಾಗಲೇ ನಿರ್ಧಾರ ಕೈಗೊಂಡಿದ್ದು, ನಿರ್ಧಾರವನ್ನು ಸಮರ್ಥಿಸಿಕೊಳ್ಳಲು ಸಿದ್ಧವಾಗಿದೆ. ಕಳೆದ ಎರಡು ವರ್ಷಗಳಿಂದಲೂ ರೈತರ ಕೃಷಿಗೆ ಸರ್ಕಾರ ನೀರನ್ನು ಒದಗಿಸಿಲ್ಲ. ಇದರ ಪರಿಣಾಮ ಬರಗಾಲದಿಂದಾಗಿ ಹಲವು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 
ಪ್ರಸ್ತುತ ಕೆಆರ್'ಎಸ್ ನಲ್ಲಿ ಒಟ್ಟು 102 ಅಡಿಯಷ್ಟು ನೀರು ಮಾತ್ರ ಇದೆ. ಡ್ಯಾಂನಲ್ಲಿ 4.4 ಡೆಡ್ ಸ್ಟೋರೇಜ್ ವಾಟರ್ ಸೇರಿ ಒಟ್ಟು 24 ಟಿಎಂಸಿಯಷ್ಟಿ ನೀರಿದೆ. ಇದರಲ್ಲಿ ಅಧಿಕಾರಿಗಳು 16 ಟಿಎಂಸಿ ಕಷಿಗೆ, 3.6 ಟಿಎಂಸಿ ಮೈಸೂರು, ಮಂಡ್ಯ ಹಾಗೂ ಬೆಂಗಳೂರು ನಗರಕ್ಕೆ ಕುಡಿಯುವ ನೀರು ಎಂದು ನಿರ್ಧರಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.