ಬೆಂಗಳೂರನ್ನು ದೇಶದ 2ನೇ ರಾಜಧಾನಿಯಾಗಿ ಮಾಡಿ: ಪ್ರಧಾನಿ ಮೋದಿಗೆ ದೇಶಪಾಂಡೆ ಪತ್ರ
ದೇಶಕ್ಕೆ ಎರಡನೇ ರಾಜಧಾನಿಯ ಅಗತ್ಯವಿದ್ದು, ಬೆಂಗಳೂರು ನಗರವನ್ನು ದೇಶದ ಎರಡನೇ ರಾಜಧಾನಿಯನ್ನಾಗಿ ಮಾಡಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಬೃಹತ್ ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆಯವರು...

Published On :
ಬೆಂಗಳೂರು: ದೇಶಕ್ಕೆ ಎರಡನೇ ರಾಜಧಾನಿಯ ಅಗತ್ಯವಿದ್ದು, ಬೆಂಗಳೂರು ನಗರವನ್ನು ದೇಶದ ಎರಡನೇ ರಾಜಧಾನಿಯನ್ನಾಗಿ ಮಾಡಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಬೃಹತ್ ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆಯವರು ಶುಕ್ರವಾರ ಪತ್ರ ಬರೆದಿದ್ದಾರೆ.
ಭಾರತಕ್ಕೆ ತುರ್ತಾಗಿ ಎರಡನೇ ರಾಜಧಾನಿಯ ಅಗತ್ಯವಿದೆ. ಇಂತಹ ಮಹತ್ವದ ಹೊಣೆ ನಿಭಾಯಿಸಲು ಬೆಂಗಳೂರು ಅತ್ಯುತ್ತಮ ನಗರವಾಗಿದೆ. ಭಾರತದಂತಹ ವಿಶಾಲ ರಾಷ್ಟ್ರವನ್ನು ಒಂದು ನಗರದಿಂದ ನಿರ್ವಹಣೆ ಮಾಡಲು ಸಾಧ್ಯವಿಲ್ಲ. ವಿಶೇಷವಾಗಿ ಸರ್ಕಾರವು ಆಡಳಿತ, ರಚನಾತ್ಮಕ ಸುಧಾರಣೆ, ರಾಷ್ಟ್ರ ಮರುನಿರ್ಮಾಣ,, ಅಂತರಾಷ್ಟ್ರೀಯ ಸಹಭಾಗಿತ್ವಕ್ಕೆ ಸಂಬಂಧಿಸಿದಂತೆ ಮಾದರಿಯಾಗಿ ಹಾಗೂ ಅಮೂಲಾಗ್ರ ಬದಲಾವಣೆಗೆ ಸಿದ್ಧತೆ ನಡೆಸುತ್ತಿದೆ. ಇಂತಹ ಸಂದರ್ಭದಲ್ಲಿ ಬೆಂಗಳೂರನ್ನು ಎರಡನೇ ರಾಜಧಾನಿಯನ್ನಾಗಿ ಮಾಡುವ ಅಗತ್ಯತೆ ಹೆಚ್ಚಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ರಾಷ್ಟ್ರೀಯ ದೃಷ್ಟಿಕೋನದಲ್ಲಿ ದಕ್ಷಿಣ ಭಾರತದ ಸಕ್ರಿಯ ಪಾಲುದಾರಿಕೆಗೆ ಹೊಸ ರಾಜಧಾನಿಯ ಅಗತ್ಯವಿದೆ. ಸುಪ್ರೀಂಕೋರ್ಟ್'ನ ಎರಡನೇ ಪೀಠ ಸ್ಥಾಪನೆ, ಕೇಂದ್ರ ನಾಗರಿಕ ಸೇವಾ ಆಯೋಗದ ಎರಡನೇ ಕಚೇರಿ ಸ್ಥಾಪನೆ, ಸಂಸತ್ ನ ಚಳಿಗಾಲದ ಅಧಿವೇಶನವನ್ನು ಬೆಂಗಳೂರಿನಲ್ಲಿ ನಡೆಸುವುದು ಮತ್ತಿತರ ಅಂಶಗಳನ್ನು ಪರಿಗಣಿಸಬಹುದು.
ದಕ್ಷಿಣ ಭಾರತೀಯರನ್ನು ರಾಜಕೀಯ ಪಾಲುದಾರಿಕೆ ಮತ್ತು ಆಡಳಿತಾತ್ಮಕ ನೀತಿ ರಚನೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡಲು ಇದು ಸಕಾರಾತ್ಮಕ ಆರಂಭ ಆಗಬೇಕು ಎಂದು ದೇಶಪಾಂಡೆಯವರು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


